ಪಶ್ಚಿಮ ಬಂಗಾಳ: ವಿಜಯದಶಮಿ ದಿನ ವಿಗ್ರಹ ವಿಸರ್ಜನೆ ವೇಳೆ ತೀವ್ರ ಪ್ರವಾಹ, ನೀರಿನಲ್ಲಿ ಮುಳುಗಿ ಕನಿಷ್ಠ 8 ಸಾವು
ನವರಾತ್ರಿ ಮುಗಿದು ವಿಜಯದಶಮಿಯಾದ ನಿನ್ನೆ ಬುಧವಾರದಂದು ದುರ್ಗಾ ವಿಗ್ರಹ ವಿಸರ್ಜನೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಜಲ್ಪೈಗುರಿಯ ಮಾಲ್ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿ ಅಲೆಯ ರಭಸಕ್ಕೆ ಸಿಲುಕಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ.
Published: 06th October 2022 08:45 AM | Last Updated: 06th October 2022 01:53 PM | A+A A-

ಪ್ರವಾಹಕ್ಕೆ ಸಿಲುಕಿ ನಾಗರಿಕರ ಸಾವು
ಜಲ್ಪೈಗುರಿ: ನವರಾತ್ರಿ ಮುಗಿದು ವಿಜಯದಶಮಿಯಾದ ನಿನ್ನೆ ಬುಧವಾರದಂದು ದುರ್ಗಾ ವಿಗ್ರಹ ವಿಸರ್ಜನೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಜಲ್ಪೈಗುರಿಯ ಮಾಲ್ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿ ಅಲೆಯ ರಭಸಕ್ಕೆ ಸಿಲುಕಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ.
ಜಲ್ಪೈಗುರಿಯ ಮಲ್ಬಜಾರ್‌ನಲ್ಲಿ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ವಿಜಯ ದಶಮಿಯಂದು ನವರಾತ್ರಿ ಹಬ್ಬ ಮುಗಿದು ದುರ್ಗಾ ಮೂರ್ತಿಗಳನ್ನು ವಿಸರ್ಜಿಸಲು ಹೆಚ್ಚಿನ ಜನರು ಮಾಳ ನದಿಯ ದಡದಲ್ಲಿ ಸೇರಿದ್ದರು. ಈ ವೇಳೆ ದಿಢೀರ್ ಪ್ರವಾಹ ಉಂಟಾಗಿ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರಾಗಿದ್ದಾರೆ.
#UPDATE | West Bengal: Total death count due to flash flood in Jalpaiguri stands at eight. Search is underway to find if there are more casualties: Jalpaiguri DM Moumita Godara https://t.co/LP4AT1UezL
— ANI (@ANI) October 6, 2022
ಏಕಾಏಕಿ ಪ್ರವಾಹ ಉಂಟಾಗಿ ಅಲೆಯ ರಭಸಕ್ಕೆ ಸಿಲುಕಿ ಜನರು ಕೊಚ್ಚಿ ಹೋಗಿದ್ದಾರೆ. ಇಲ್ಲಿಯವರೆಗೆ, ಎಂಟು ಶವಗಳನ್ನು ಹೊರತೆಗೆಯಲಾಗಿದೆ, ಸುಮಾರು 50 ಮಂದಿಯನ್ನು ಕಾಪಾಡಲಾಗಿದೆ ಎಂದು ಜಲ್ಪೈಗುರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೌಮಿತಾ ಗೋಡಾರಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸಣ್ಣಪುಟ್ಟ ಗಾಯಗೊಂಡ 13 ಜನರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ನಾಪತ್ತೆಯಾದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ಮತ್ತು ಸ್ಥಳೀಯ ರಕ್ಷಣಾ ತಂಡಗಳು ಶೋಧ ಕಾರ್ಯದಲ್ಲಿ ನಿರತವಾಗಿವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಮಹಾತ್ಮ ಗಾಂಧಿಯಂತೆ ಕಾಣುತ್ತಿದ್ದ ಅಸುರ; ದುರ್ಗಾಪೂಜೆಯ ಆಯೋಜಕರ ವಿರುದ್ಧ ಕ್ರಮಕ್ಕೆ ನೆಟ್ಟಿಗರು ಆಗ್ರಹ
ಮಾಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಬುಲು ಚಿಕ್ಕ ಬರಾಕ್ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಘಟನೆ ಸಂಭವಿಸಿದಾಗ ನಾನು ಸ್ಥಳದಲ್ಲಿಯೇ ಇದ್ದೆ. ಹಲವಾರು ಜನರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ನೀರಿನ ಪ್ರವಾಹವು ತುಂಬಾ ಪ್ರಬಲವಾಗಿತ್ತು. ಘಟನೆ ನಡೆದಾಗ ನೂರಾರು ಜನರು ಅಲ್ಲಿದ್ದರು, ಹಲವರು ಕಾಣೆಯಾಗಿದ್ದಾರೆ ಎಂದು ಅವರು ಹೇಳಿದರು.
ಬರಾಕ್ ಮತ್ತು ಹಿರಿಯ ಟಿಎಂಸಿ ನಾಯಕರು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆಗೆ ಸ್ಥಳಕ್ಕೆ ಧಾವಿಸಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ರಕ್ಷಣಾ ಪ್ರಯತ್ನಗಳನ್ನು ಹೆಚ್ಚಿಸುವಂತೆ ರಾಜ್ಯ ಆಡಳಿತವನ್ನು ವಿನಂತಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ: ಜಲ್ಪೈಗುರಿಯಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ ಸಂಭವಿಸಿದ ದುರ್ಘಟನೆಗೆ ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ.
Anguished by the mishap during Durga Puja festivities in Jalpaiguri, West Bengal. Condolences to those who lost their loved ones: PM @narendramodi
— PMO India (@PMOIndia) October 5, 2022