- Tag results for flood
![]() | ಉದ್ಘಾಟನೆಯಾದ 6 ದಿನಕ್ಕೆ ಅವಾಂತರ: ರಾಮನಗರ ಬಳಿ ಹೊಳೆಯಂತಾದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಕಳೆದ ಕೆಲ ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗುತ್ತಿದೆ. ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ(Bengaluru-Mysuru Expressway) ರಾಮನಗರ ಬಳಿ ಹಳ್ಳದಂತಾಗಿದೆ. |
![]() | ಗದಗ: ಬಸ್ ಸೌಲಭ್ಯವಿಲ್ಲದೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ಟ್ರ್ಯಾಕ್ಟರ್, ಆಟೋಗಳಲ್ಲಿ ಬರುತ್ತಿರುವ ವಿದ್ಯಾರ್ಥಿಗಳುಜಿಲ್ಲೆಯ ರಾನ್ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳ ಸುಮಾರು 400 ದ್ವಿತೀಯ ವರ್ಷದ ಪದವಿ ಪೂರ್ವ ವಿದ್ಯಾರ್ಥಿಗಳು ತಮ್ಮ ಗ್ರಾಮಗಳಿಂದ 60 ಕಿಮೀ ದೂರದಲ್ಲಿರುವ ತಮ್ಮ ಪರೀಕ್ಷಾ ಕೇಂದ್ರವನ್ನು ತಲುಪಲು ಕಷ್ಟಪಡುತ್ತಿದ್ದಾರೆ. ಪ್ರವಾಹ ಪೀಡಿತ ಗ್ರಾಮಗಳಿಗೆ ಬಸ್ ಸೌಲಭ್ಯವಿಲ್ಲ. |
![]() | ಹಿಮಾಲಯದಲ್ಲಿ ಕರಗುತ್ತಿವೆ 1000 ಹಿಮಸರೋವರಗಳು; ಭೀಕರ ಪ್ರವಾಹ ಭೀತಿ; 30 ಲಕ್ಷ ಜನರ ಜೀವ ಅಪಾಯದಲ್ಲಿ!ಹಿಮಾಲಯದಲ್ಲಿ 1 ಸಾವಿರಕ್ಕೂ ಅಧಿಕ ಹಿಮ ಸರೋವರಗಳು ಕರಗುತ್ತಿದ್ದು, ದೇಶದ ಸುಮಾರು 30ಲಕ್ಷ ಜನರು ಭೀಕರ ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ಗಂಭೀರ ಎಚ್ಚರಿಕೆ ನೀಡಿದೆ. |
![]() | ತಾವೇ ಸೃಷ್ಟಿಸಿದ ಪ್ರವಾಹ ಪರಿಸ್ಥಿತಿಯನ್ನು ಬಳಸಿ ವಿಪಕ್ಷಗಳು ನಗರದ ವರ್ಚಸ್ಸನ್ನು ಹಾಳು ಮಾಡುತ್ತಿವೆ: ಸಿಎಂ ಬೊಮ್ಮಾಯಿಬೆಂಗಳೂರಿನಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಬೃಹತ್ ಅಭಿವೃದ್ಧಿಗಳನ್ನು ನಡೆಸುತ್ತಿದ್ದರೂ ವಿರೋಧ ಪಕ್ಷಗಳು ನಗರದ ವರ್ಚಸ್ಸನ್ನು ಹಾಳು ಮಾಡುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆರೋಪಿಸಿದ್ದಾರೆ. |
![]() | ಪ್ರವಾಹ, ರಸ್ತೆ ಗುಂಡಿ, ತ್ಯಾಜ್ಯ: ದೂರಾಗದ ಸಮಸ್ಯೆಗಳಿಂದ ಸಿಲಿಕಾನ್ ಸಿಟಿ ಜನತೆ ತಬ್ಬಿಬ್ಬು!ದೇಶದ ಐಟಿ ರಾಜಧಾನಿ, ರಾಜ್ಯ ಸರ್ಕಾರಕ್ಕೆ ದೊಡ್ಡ ಪ್ರಮಾಣದ ಆದಾಯವನ್ನು ನೀಡುವ ಮತ್ತು ರಾಷ್ಟ್ರೀಯ ಆರ್ಥಿಕತೆಯಲ್ಲಿ ಸಿಂಹ ಪಾಲು ಹೊಂದಿರುವ ನಗರ ಬೆಂಗಳೂರು. ಆದರೂ ಈ ನಗರದಲ್ಲಿ ಪ್ರವಾಹ ಪರಿಸ್ಥಿತಿ, ರಸ್ತೆ ಗುಂಡಿ ಹಾಗೂ ತ್ಯಾಜ್ಯ ಸಮಸ್ಯೆಗಳು ಜನರ ತಲೆದೋರಿದೆ. |
![]() | ಫಿಲಿಪೈನ್ಸ್‌ನಲ್ಲಿ ಭಾರಿ ಮಳೆ: ಪ್ರವಾಹದಿಂದಾಗಿ 32 ಮಂದಿ ಸಾವು, 24 ಜನರು ನಾಪತ್ತೆಕ್ರಿಸ್ಮಸ್ ವಾರಾಂತ್ಯದಲ್ಲಿ ಫಿಲಿಪೈನ್ಸ್‌ನ ಕೆಲವು ಭಾಗಗಳಲ್ಲಿ ತೀವ್ರ ಮಳೆಯಾಗುತ್ತಿದ್ದು, ಭಾರಿಯಿಂದಾಗಿ ಉಂಟಾಗಿರುವ ಪ್ರವಾಹದಿಂದ ಕನಿಷ್ಠ 32 ಮಂದಿ ಸಾವಿಗೀಡಾಗಿದ್ದಾರೆ ಮತ್ತು 24 ಮಂದಿ ಕಾಣೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಸಂಸ್ಥೆ ಗುರುವಾರ ತಿಳಿಸಿದೆ. |
![]() | ಚುನಾವಣೆಯತ್ತ ಅಧಿಕಾರಿಗಳ ಚಿತ್ತ: ಒತ್ತುವರಿ ಕಾರ್ಯಾಚರಣೆ ಅಂತ್ಯ ಸಾಧ್ಯತೆ, ಮುಂದಿನ ಪ್ರವಾಹ ಪರಿಸ್ಥಿತಿವರೆಗೂ ಸ್ಥಳೀಯರು ನಿರಾಳ!ಅತಿಕ್ರಮಣದಾರರ ಆಸ್ತಿ ಧ್ವಂಸಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ನೀಡಲು ಸಹಕರಿಸಿದ ಆರೋಪದ ಮೇಲೆ ಬೆಂಗಳೂರು ಪೂರ್ವ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರು ಅಮಾನತುಗೊಂಡಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಒತ್ತುವರಿ ಕಾರ್ಯಾಚರಣೆ ಅಂತ್ಯಗೊಳ್ಳುವ ಸಾಧ್ಯತೆಗಳ ಕುರಿತು ಸ್ಥಳೀಯರು... |
![]() | ಭಾರಿ ಮಳೆ: ನದಿ ತೀರದಲ್ಲಿ ವಾಸಿಸುವವರಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ ತಮಿಳುನಾಡು ಸರ್ಕಾರರಾಜ್ಯದಲ್ಲಿ ಭಾನುವಾರದಿಂದ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಜಲಾಶಯಗಳಿಂದ ನೀರನ್ನು ಹೊರಬಿಡಲಾಗುವುದರಿಂದ ನದಿಗಳ ದಡದಲ್ಲಿ ವಾಸಿಸುವ ಜನರು ಜಾಗರೂಕರಾಗಿರಲು ತಮಿಳುನಾಡು ಕಂದಾಯ ಇಲಾಖೆ ಸೂಚಿಸಿದೆ. |
![]() | ಬೆಂಗಳೂರು: ವರುಣಾರ್ಭಟಕ್ಕೆ ಅಂಡರ್‌ಪಾಸ್‌ಗಳು, ರಸ್ತೆಗಳು ಜಲಾವೃತ; ಮುಂದಿನ 2 ದಿನ ಭಾರಿ ಮಳೆಯಾಗುವ ಸಾಧ್ಯತೆಬುಧವಾರ ಸಂಜೆಯಿಂದ ಎಡೆಬಿಡದೆ ಸುರಿದ ಮಳೆಗೆ ಬೆಂಗಳೂರಿನ ಅಂಡರ್‌ಪಾಸ್‌ಗಳು, ರಸ್ತೆಗಳು ಮತ್ತು ಮಾರುಕಟ್ಟೆ ಸಂಕೀರ್ಣಗಳು ಜಲಾವೃತವಾಗಿವೆ. ಮಳೆಯಿಂದಾಗಿ ಸಂಚಾರ ಕುಂಠಿತಗೊಂಡ ಪರಿಣಾಮ ಮೆಜೆಸ್ಟಿಕ್, ಮಲ್ಲೇಶ್ವರಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. |
![]() | ತುಮಕೂರು: ಧಾರಾಕಾರ ಮಳೆಗೆ ಸೋಲಾರ್ ಪಾರ್ಕ್ ಜಲಾವೃತ; ಏಷ್ಯಾದ ಅತಿ ದೊಡ್ಡ ಸೌರ ಘಟಕದಲ್ಲಿ ಈಜಾಡಿದ ಯುವಕ!ಏಷ್ಯಾದ ಅತೀ ದೊಡ್ಡ ಸೌರ ಘಟಕ ಅನ್ನೋ ಹೆಗ್ಗಳಿಕೆ ಪಡೆದಿರವ ತುಮಕೂರು ಜಿಲ್ಲೆಯ ಪಾವಗಡದ ಸೋಲಾರ್ ಪಾರ್ಕ್ ಭಾರೀ ಮಳೆಯಿಂದಾಗಿ ಮುಳುಗಡೆಯಾಗಿದೆ. |
![]() | ಅನಂತಪುರ: ಪ್ರವಾಹದ ನೀರಿನಲ್ಲಿ ಪಲ್ಟಿಯಾದ ಲಾರಿ, ಮುಂದೇನಾಯ್ತು ಈ ವಿಡಿಯೋ ನೋಡಿ!ಆಂಧ್ರಪ್ರದೇಶದ ಅನಂತಪುರ, ರಾಯದುರ್ಗ ಮತ್ತು ಬುಕ್ಕರಾಯಸಮುದ್ರಂನಲ್ಲಿ ಇಂದು ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ 16 ಚಕ್ರದ ಲಾರಿಯೊಂದು ಪ್ರವಾಹದ ನೀರಿನಲ್ಲಿ ಪಲ್ಟಿಯಾಗಿದೆ. |
![]() | ಪಶ್ಚಿಮ ಬಂಗಾಳ: ವಿಜಯದಶಮಿ ದಿನ ವಿಗ್ರಹ ವಿಸರ್ಜನೆ ವೇಳೆ ತೀವ್ರ ಪ್ರವಾಹ, ನೀರಿನಲ್ಲಿ ಮುಳುಗಿ ಕನಿಷ್ಠ 8 ಸಾವುನವರಾತ್ರಿ ಮುಗಿದು ವಿಜಯದಶಮಿಯಾದ ನಿನ್ನೆ ಬುಧವಾರದಂದು ದುರ್ಗಾ ವಿಗ್ರಹ ವಿಸರ್ಜನೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಜಲ್ಪೈಗುರಿಯ ಮಾಲ್ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿ ಅಲೆಯ ರಭಸಕ್ಕೆ ಸಿಲುಕಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. |
![]() | ಇಯಾನ್ ಚಂಡಮಾರುತದ ಹೊಡೆತಕ್ಕೆ ಸಿಲುಕಿದ ಅಮೆರಿಕ; ಫ್ಲೋರಿಡಾದಲ್ಲಿ ಮೃತರ ಸಂಖ್ಯೆ 47ಕ್ಕೆ ಏರಿಕೆದೈತ್ಯಾಕಾರದ ಇಯಾನ್ ಚಂಡಮಾರುತದ ಆರ್ಭಟಕ್ಕೆ ಅಮೆರಿಕದ ಅನೇಕ ರಾಜ್ಯಗಳು ಅಕ್ಷರಶಃ ನಲುಗಿ ಹೋಗಿವೆ. ನೈಋತ್ಯ ಕರಾವಳಿಯಿಂದ ಕೆರೊಲಿನಾದವರೆಗೆ ತೀವ್ರ ಅನಾಹುತ ಸೃಷ್ಟಿಸಿದ್ದು, ಸಾವಿರಾರು ಜನರು ಇನ್ನೂ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. |
![]() | ಬಾಗ್ಮನೆ ಒತ್ತುವರಿ: ಲೋಕಾಯುಕ್ತ ಮಧ್ಯಪ್ರವೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಸಮಾಜ ಪರಿವರ್ತನಾ ಸಮುದಾಯರಾಜಕಾಲುವೆ ಒತ್ತುವರಿ ತೆರವುಗೊಳಿಸುವ ವಿಚಾರದಲ್ಲಿ ಬಾಗ್ಮನೆ ಡೆವಲಪ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ವಿಚಾರಣೆ ಕೈಗೊಂಡಿರುವ ಕರ್ನಾಟಕ ಲೋಕಾಯುಕ್ತ ಕಾನೂನು ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯವು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದೆ. |
![]() | ಪ್ರವಾಹ ಬಾಧಿತ ಪಾಕಿಸ್ತಾನಕ್ಕೆ ಅಮೆರಿಕದಿಂದ 56.5 ಮಿಲಿಯನ್ ಡಾಲರ್ ನೆರವುಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಅಂಟೋನಿ ಬ್ಲಿಂಕೆನ್ ಸೋಮವಾರ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಬೊಟ್ಟೊ ಜರ್ದಾರಿ ಅವರನ್ನು ಭೇಟಿಯಾಗಿದ್ದಾರೆ. |