ರಾಜರಾಜ ಚೋಳನ ಕಾಲದಲ್ಲಿ ಹಿಂದೂ ಧರ್ಮವೇ ಇರಲಿಲ್ಲ​: ವಿವಾದಕ್ಕೆ ದಾರಿಯಾದ ಕಮಲ ಹಾಸನ್ ಹೇಳಿಕೆ!

ತಮಿಳುನಾಡಿನ ಚೋಳ ವಂಶದ ಸಾಮ್ರಾಟ ರಾಜರಾಜ ಚೋಳ ಹಿಂದೂ ರಾಜ ಹೌದೋ ಅಲ್ಲವೋ ಎಂಬ ಚರ್ಚೆ ಈಗ ಮತ್ತೊಂದು ಹಂತಕ್ಕೆ ತಲುಪಿದೆ.
ಕಮಲ್ ಹಾಸನ್
ಕಮಲ್ ಹಾಸನ್

ತಮಿಳುನಾಡಿನ ಚೋಳ ವಂಶದ ಸಾಮ್ರಾಟ ರಾಜರಾಜ ಚೋಳ ಹಿಂದೂ ರಾಜ ಹೌದೋ ಅಲ್ಲವೋ ಎಂಬ ಚರ್ಚೆ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಕಾಲಿವುಡ್ ನಟ ಕಮಲ್ ಹಾಸನ್ ಪೊನ್ನಿಯಿನ್ ಸೆಲ್ವನ್ ಸಿನಿಮಾದ ಬಗ್ಗೆ ಮಾತನಾಡಿದ್ದು ಚೋಳರ ಕಾಲದಲ್ಲಿ ಹಿಂದೂ ಧರ್ಮವೇ ಇರಲಿಲ್ಲ ಎಂದು ಹೇಳಿದ್ದು ವಿವಾದಕ್ಕೆ ದಾರಿ ಮಾಡಿದೆ.

ರಾಜ ರಾಜ ಚೋಳನ್ ಹಿಂದೂ ರಾಜನಲ್ಲ ಎಂಬ ನಿರ್ದೇಶಕ ವೆಟ್ರಿಮಾರನ್ ಹೇಳಿಕೆಯನ್ನು ನಟ, ರಾಜಕಾರಣಿ ಕಮಲ್ ಹಾಸನ್ ಬೆಂಬಲಿಸಿದ್ದಾರೆ. ಚೋಳರ ಕಾಲದಲ್ಲಿ 'ಹಿಂದೂ ಧರ್ಮ' ಎಂಬ ಪದ ಇರಲಿಲ್ಲ ಎಂದು ಅವರು ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಇದಕ್ಕೂ ಮುನ್ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವೆಟ್ರಿಮಾರನ್,  ನಿರಂತರವಾಗಿ, ನಮ್ಮ ಚಿಹ್ನೆಗಳನ್ನು ನಮ್ಮಿಂದ ಕಸಿದುಕೊಳ್ಳಲಾಗುತ್ತಿದೆ. ತಿರುವಳ್ಳುವರನ್ನು ಕೇಸರಿಕರಣ ಮಾಡುವುದು ಅಥವಾ ರಾಜ ರಾಜ ಚೋಳನನ್ನು ಹಿಂದೂ ರಾಜ ಎಂದು ಕರೆಯುವುದು ನಿರಂತರವಾಗಿ ನಡೆಯುತ್ತಿದೆ. ಸಿನಿಮಾ ಸಾಮಾನ್ಯರ ಮಾಧ್ಯಮವಾಗಿರುವುದರಿಂದ ಪ್ರಾತಿನಿಧ್ಯವನ್ನು ರಕ್ಷಿಸಲು ರಾಜಕೀಯವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ನಿರ್ದೇಶಕ ವೆಟ್ರಿಮಾರನ್ ಎಚ್ಚರಿಸಿದರು.

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯಾಗಿದ್ದು ಈ ಬಗ್ಗೆ ತಾರಾ ನಟ ಕಮಲ್ ಹಾಸನ್ ರಾಜರಾಜ ಚೋಳ ಹಿಂದೂರಾಜನಲ್ಲ ಎಂದು ಹೇಳಿದ್ದಾರೆ. ರಾಜರಾಜ ಚೋಳನ ಆಳ್ವಿಕೆ ಕಾಲದಲ್ಲಿ ಹಿಂದೂ ಧರ್ಮ ಇರಲಿಲ್ಲ. ವೈಷ್ಣವ ಪಂಥ, ಶೈವ ಪಂಥಗಳಿದ್ದವು. ಆಗ ಹಿಂದುತ್ವ ಎಂಬ ಕಲ್ಪನೆ ಇರಲಿಲ್ಲ. ಬ್ರಿಟಿಷರು ಎಲ್ಲರನ್ನೂ ಒಟ್ಟಾಗಿ ಹಿಂದೂ ಎಂದು ಕರೆದರು ಎಂದು ಹೇಳಿಕೆ ನೀಡಿದ್ದಾರೆ.

ಅಕ್ಟೋಬರ್ 1ರಂದು ನಡೆದ ವಿಧುತಲೈ ಚಿರುತೈಗಲ್ ಕಚ್ಚಿ ಪಕ್ಷದ ಮುಖಂಡ ತಿರುಮಾವಲವನ್ ಅವರ 60ನೇ ಜನ್ಮದಿನ ಸಮಾರಂಭದಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆಯಾಯಿತು. ಇದರ ಹಿಂದಿನ ದಿನವಷ್ಟೇ ಮಣಿರತ್ನಂ ನಿರ್ದೇಶಿಸಿದ ಬಹುತಾರಾಗಣದ ಪೊನ್ನಿಯನ್ ಸೆಲ್ವನ್-1 ಚಿತ್ರ ಬಿಡುಗಡೆಯಾಗಿತ್ತು. ರಾಜ ರಾಜ ಚೋಳ ಮತ್ತು ಆತನ ಕಿರಿಯ ಸಹೋದರ ಆದಿತ್ಯ ಕರಿಕಾಲನ್ ನಡುವೆ ನಡೆದ ಚಾರಿತ್ರಿಕ ಘಟನೆಗಳನ್ನು ಇಟ್ಟುಕೊಂಡು ಕಲ್ಕಿ ಕೃಷ್ಣಮೂರ್ತಿ ಬರೆದ ಕಾದಂಬರಿ ಆಧಾರಿತ ಚಿತ್ರ ಇದಾಗಿತ್ತು. ಈ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಈ ಚರ್ಚೆ ಶುರುವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com