ಕಾಂಡೋಮ್ ಹೆಚ್ಚು ಬಳಸುತ್ತಿರುವುದೇ ಮುಸ್ಲಿಮರು; ಜನಸಂಖ್ಯೆ ನಿಯಂತ್ರಣದ ಕುರಿತ ಭಾಗ್ವತ್ ಹೇಳಿಕೆಗೆ ಓವೈಸಿ ಪ್ರತಿಕ್ರಿಯೆ 

ಕುಟುಂಬ ಯೋಜನೆ ಸಾಧನವಾದ ಕಾಂಡೋಮ್ ನ್ನು ಹೆಚ್ಚು ಬಳಸುತ್ತಿರುವುದೇ ಮುಸ್ಲಿಮರು ಎಂದು ಜನಸಂಖ್ಯೆ ನಿಯಂತ್ರಣದ ಕುರಿತ ಆರ್ ಎಸ್ಎಸ್ ನಾಯಕ ಮೋಹನ್ ಭಾಗ್ವತ್ ಕುರಿತ ಹೇಳಿಕೆಗೆ ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ. 
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ

ಹೈದರಾಬಾದ್: ಕುಟುಂಬ ಯೋಜನೆ ಸಾಧನವಾದ ಕಾಂಡೋಮ್ ನ್ನು ಹೆಚ್ಚು ಬಳಸುತ್ತಿರುವುದೇ ಮುಸ್ಲಿಮರು ಎಂದು ಜನಸಂಖ್ಯೆ ನಿಯಂತ್ರಣದ ಕುರಿತ ಆರ್ ಎಸ್ಎಸ್ ನಾಯಕ ಮೋಹನ್ ಭಾಗ್ವತ್ ಕುರಿತ ಹೇಳಿಕೆಗೆ ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ. 

ಹೈದರಾಬಾದ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ಎಐಎಂಐಎಂ ನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಎರಡು ಮಕ್ಕಳ ನಡುವಿನ ಅಂತರವನ್ನು ಕಾಯ್ದುಕೊಳ್ಳುವುದಕ್ಕೆ ಮುಸ್ಲಿಮರೇ ಹೆಚ್ಚಾಗಿ ಕಾಂಡೋಮ್ ಬಳಕೆ ಮಾಡುತ್ತಿದ್ದಾರೆ. ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿಲ್ಲ, ಈ ವಿಷಯವಾಗಿ ಆತಂಕ ಬೇಡ, ನಮ್ಮ ಜನಸಂಖ್ಯೆ ಕುಗ್ಗುತ್ತಿದೆ. ಇಬ್ಬರು ಮಕ್ಕಳ ಜನನದ ನಡುವಿನ ಅಂತರವನ್ನು ಹೆಚ್ಚು ಯಾರು ಕಾಯ್ದುಕೊಳ್ಳುತ್ತಿದ್ದಾರೆ ಗೊತ್ತೇ? ಅದು ಮುಸ್ಲಿಮರು, ಯಾರು ಹೆಚ್ಚು ಕಾಂಡೋಮ್ ಬಳಕೆ ಮಾಡುತ್ತಾರೆ ಗೊತ್ತೇ? ಮುಸ್ಲಿಮರು, ಇದು ನಿಮಗೆ ಗೊತ್ತಿರಲಿ, ಈ ಬಗ್ಗೆ ಮೋಹನ್ ಭಾಗ್ವತ್ ಮಾತನಾಡುವುದಿಲ್ಲ ಎಂದು ಓವೈಸಿ ಹೇಳಿದ್ದಾರೆ.

ಧರ್ಮಾಧಾರಿತ ಜನಸಂಖ್ಯೆಯ ಅಸಮತೋಲನಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಿದೆ. ಜನಸಂಖ್ಯೆ ಹಂಚಿಕೆಯಲ್ಲಿ ಆಗುವ ವ್ಯತ್ಯಾಸಗಳು ಭೌಗೋಳಿಕ ಗಡಿಗಳನ್ನು ಬದಲಿಸುತ್ತವೆ. ಜನನ ಪ್ರಮಾಣ ದರ, ಬಲವಂತ ಅಥವಾ ಆಮಿಷ ಅಥವಾ ಆಸೆಗಳನ್ನು ಒಡ್ಡಿ ಮಾಡುವ ಮತಾಂತರ, ಅಕ್ರಮ ಒಳನುಸುಳುವಿಕೆಗಳು ಧರ್ಮಾಧಾರಿತ ಜನಸಂಖ್ಯೆಯಲ್ಲಿ ವ್ಯತ್ಯಯಕ್ಕೆ ಮುಖ್ಯ ಕಾರಣಗಳಾಗಿವೆ ಎಂದು ಮೋಹನ್ ಭಾಗ್ವತ್ ಅ.05 ರ ತಮ್ಮ ಭಾಷಣದಲ್ಲಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com