ಮಧ್ಯ ಪ್ರದೇಶ: ಪತ್ನಿ ಕೊಲ್ಲಲೆಂದು ಸಂಚು ರೂಪಿಸಿದ್ದ ಪತಿ; ಬಲಿಯಾಗಿದ್ದು ಅತ್ತೆ!
ಪತ್ನಿಯನ್ನು ಸಾಯಿಸುವ ದುರುದ್ದೇಶದಿಂದ ಕಬ್ಬಿಣದ ಬಾಗಿಲಿಗೆ ಜೋಡಿಸಿಟ್ಟಿದ್ದ ವೈರ್‌ನಿಂದ ಅತ್ತೆಯ ಮೇಲೆ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಮಧ್ಯ ಪ್ರದೇಶದ ಬೆಟುಲ್‌ನಲ್ಲಿ ನಡೆದಿದೆ.
Published: 11th October 2022 04:30 PM | Last Updated: 11th October 2022 06:38 PM | A+A A-

ಸಾಂದರ್ಭಿಕ ಚಿತ್ರ
ಬೆಟುಲ್: ಪತ್ನಿಯನ್ನು ಸಾಯಿಸುವ ದುರುದ್ದೇಶದಿಂದ ಕಬ್ಬಿಣದ ಬಾಗಿಲಿಗೆ ಜೋಡಿಸಿಟ್ಟಿದ್ದ ವೈರ್‌ನಿಂದ ಅತ್ತೆಯ ಮೇಲೆ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಮಧ್ಯ ಪ್ರದೇಶದ ಬೆಟುಲ್‌ನಲ್ಲಿ ನಡೆದಿದೆ.
ಮಧ್ಯಪ್ರದೇಶದ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸೈಖೇಡಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು 55 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ವಿಪರೀತ ಮದ್ಯಪಾನ ಮಾಡುತ್ತಿದ್ದ ಪತಿ ದಿನಂಪ್ರತಿ ತನ್ನ ಪತ್ನಿಯ ಜೊತೆ ಜಗಳವಾಡುತ್ತಿದ್ದ ಅಲ್ಲದೆ, ತನ್ನ ಪತಿಯನ್ನು ಮದ್ಯಪಾನದ ಚಟದಿಂದ ಬಿಡಿಸಬೇಕೆಂದು ಪ್ರಯತ್ನ ನಡೆಸಿದ್ದಾಳೆ, ಆದರೆ ದಂಪತಿಗಳ ನಡುವೆ ಭಾನುವಾರವೂ ಕಲಹ ನಡೆದಿದೆ, ಇದರಿಂದ ಮನನೊಂದ ಪತ್ನಿ ತನ್ನ ತಾಯಿಯ ಮನೆಗೆ ಹೋಗಿದ್ದಾಳೆ.
ಪತ್ನಿ ತನ್ನನ್ನು ಬಿಟ್ಟು ತಾಯಿ ಮನೆಗೆ ಹೋದ ವಿಚಾರದಲ್ಲಿ ಸಿಟ್ಟಿಗೆದ್ದ ಪತಿರಾಯ ಪತ್ನಿಯನ್ನು ಹೇಗಾದರೂ ಮಾಡಿ ಕೊಲ್ಲಬೇಕೆಂದು ಸಂಚು ರೂಪಿಸಿದ, ಅದರಂತೆ ಪತಿ, ತನ್ನ ಪತ್ನಿಯ ತಾಯಿ ಮನೆಗೆ ಹೋಗಿದ್ದಾನೆ.
ಇದನ್ನೂ ಓದಿ: ಗೋಬಿಮಂಚೂರಿ ವಿಚಾರಕ್ಕೆ ಕೊಲೆ: ಅಜ್ಜಿ ಕೊಂದಿದ್ದ ಮೊಮ್ಮಗನ ಸೆರೆ, 5 ವರ್ಷದಿಂದ ಮನೆಯ ಕಪಾಟಿನಲ್ಲಿತ್ತು ಶವ!
ಈ ವೇಳೆ ಅಲ್ಲಿ ಕಬ್ಬಿಣದ ಬಾಗಿಲನ್ನು ಗಮನಿಸಿದ್ದಾನೆ ಇದಕ್ಕೆ ವಿದ್ಯುತ್ ಸಂಪರ್ಕ ಕೊಟ್ಟು ಪತ್ನಿಯನ್ನು ಕೊಲ್ಲುವ ಉದ್ದೇಶ ಇಟ್ಟುಕೊಂಡು ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿ ಬಾಗಿಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಏನೂ ಗೊತ್ತಿಲದವರಂತೆ ಹೊರಗೆ ಬಂದು ಕುಳಿತಿದ್ದಾನೆ. ಆದರೆ ದುರದೃಷ್ಟವಶಾತ್ ಪತ್ನಿ ಹೋಗುವ ಬದಲಿಗೆ ಅತ್ತೆ ಆ ಬಾಗಿಲನ್ನು ಸ್ಪರ್ಶಿಸಿದ್ದಾರೆ ಗಂಭೀರ ಗಾಯಗೊಂಡ ಅತ್ತೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪತಿ ಸ್ಥಳದಿಂದ ಪರಾರಿಯಾಗಿದ್ದು ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬಿಸಿದ್ದಾರೆ.