ಅಂತಿಮವಾಗಿ ರಹಸ್ಯ ಮತದಾನ ನನ್ನನ್ನು ಗೆಲ್ಲಿಸಲಿದೆ: ಶಶಿ ತರೂರ್

ಅನೇಕ ಮತದಾರರಿಗೆ ತಮ್ಮ ಪ್ರತಿಸ್ಪರ್ಧಿಯನ್ನು ಬೆಂಬಲಿಸುವಂತೆ "ನಮ್ಮ ನಾಯಕರು" ಸೂಚಿಸಿದ್ದಾರೆ. ಆದರೆ ಅಂತಿಮವಾಗಿ ರಹಸ್ಯ ಮತದಾನದಲ್ಲಿ ಅವರು ನನಗೆ ಮತ ಹಾಕಬಹುದು ಎಂದು ಕಾಂಗ್ರೆಸ್ ಅಧ್ಯಕ್ಷೀಯ ಅಭ್ಯರ್ಥಿ ಶಶಿ ತರೂರ್...
ಶಶಿ ತರೂರ್
ಶಶಿ ತರೂರ್

ನವದೆಹಲಿ: ಅನೇಕ ಮತದಾರರಿಗೆ ತಮ್ಮ ಪ್ರತಿಸ್ಪರ್ಧಿಯನ್ನು ಬೆಂಬಲಿಸುವಂತೆ "ನಮ್ಮ ನಾಯಕರು" ಸೂಚಿಸಿದ್ದಾರೆ. ಆದರೆ ಅಂತಿಮವಾಗಿ ರಹಸ್ಯ ಮತದಾನದಲ್ಲಿ ಅವರು ನನಗೆ ಮತ ಹಾಕಬಹುದು ಎಂದು ಕಾಂಗ್ರೆಸ್ ಅಧ್ಯಕ್ಷೀಯ ಅಭ್ಯರ್ಥಿ ಶಶಿ ತರೂರ್ ಮಂಗಳವಾರ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ತರೂರ್ ಕಣಕ್ಕಿಳಿದಿದ್ದಾರೆ. ಖರ್ಗೆ ಗಾಂಧಿ ಕುಟುಂಬದ ಸಾಮೀಪ್ಯದಿಂದಾಗಿ ಪಕ್ಷದ ಉನ್ನತ ಹುದ್ದೆಗೆ ಸೂಕ್ತರು ಎಂದು ಪರಿಗಣಿಸಲಾಗಿದೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ತರೂರ್ ಅವರು 1997 ಮತ್ತು 2000 ರ ಚುನಾವಣೆಗಳಲ್ಲಿ ನಡೆದಂತೆ ತಮ್ಮ ಪ್ರತಿಸ್ಪರ್ಧಿಯ ಗೆಲುವನ್ನು ನಿರೀಕ್ಷಿಸುತ್ತಿರುವವರಿಗೆ ಮತಗಳ ಎಣಿಕೆಯ ಸಮಯದಲ್ಲಿ ಆಶ್ಚರ್ಯಕರ ಫಲಿತಾಂಶ ಬರುವುದು ಖಚಿತ ಮತ್ತು ರಹಸ್ಯ ಮತದಾನ ತಮ್ಮನ್ನು ಗೆಲ್ಲಿಸಲಿದೆ ಎಂದು ಹೇಳಿದ್ದಾರೆ.

ಕೇಂದ್ರ ಚುನಾವಣಾ ಪ್ರಾಧಿಕಾರ(ಸಿಇಎ)ವು  ರಹಸ್ಯ ಮತದಾನದ ಮೂಲಕ ಚುನಾವಣೆ ನಡೆಸಲಾಗುವುದು ಎಂದು ಬಹಿರಂಗವಾಗಿ ಸ್ಪಷ್ಟಪಡಿಸಬೇಕು ಎಂದು ತಾವು ನಿರೀಕ್ಷಿಸುವುದಾಗಿ ತರೂರ್ ತಿಳಿಸಿದ್ದಾರೆ.

ಹಿರಿಯ ನಾಯಕರ ಕೆಂಗಣ್ಣಿಗೆ ಗುರಿಯಾಗುವ ಭಯದಿಂದ ತಮಗೆ ಬೆಂಬಲ ನೀಡದ ಕೆಲವು ನಾಯಕರು ಅಂತಿಮವಾಗಿ ರಹಸ್ಯ ಮತದಾನದಲ್ಲಿ ತಮಗೆ ಮತ ಹಾಕಬಹುದೇ ಎಂಬ ಪ್ರಶ್ನೆಗೆ ಉತ್ತರಿಸದ ತರೂರ್, “ನನ್ನನ್ನು ಬಹಿರಂಗವಾಗಿ ಬೆಂಬಲಿಸದ ಅನೇಕರು ನನ್ನ ಪ್ರಚಾರ ಕಾರ್ಯಕ್ರಮಗಳಲ್ಲಿ ಹಾಜರಾಗುತ್ತಿಲ್ಲ. ಬದಲಾಗಿ ಖಾಸಗಿಯಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರು ಅಂತಿಮವಾಗಿ ತಮಗೆ ಮತ ಹಾಕುತ್ತಿದ್ದಾರೆ ಎಂದು ತರೂರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com