ವಿದ್ಯುತ್ ಬಿಲ್ ಬಾಕಿ ಹೆಸರಿನಲ್ಲಿ ಸೈಬರ್ ವಂಚನೆ: ರೂ. 1. 5 ಲಕ್ಷ ಕಳೆದುಕೊಂಡ ಭಾರತೀಯ ನೌಕಾಪಡೆ ಕಮಾಂಡರ್

ಭಾರತೀಯ ನೌಕಾಪಡೆಯ ಕಮಾಂಡರ್ ರೊಬ್ಬರು ವಿದ್ಯುತ್ ಬಿಲ್ ಬಾಕಿ ಹಗರಣದಲ್ಲಿ ಸೈಬರ್ ವಂಚಕರಿಂದ ಮೋಸ ಹೋಗಿದ್ದು,  ತಮ್ಮ ಕ್ರೆಡಿಟ್ ಕಾರ್ಡ್ ನಿಂದ ಸುಮಾರು 1.5 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎಂದು  ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಭಾರತೀಯ ನೌಕಾಪಡೆಯ ಕಮಾಂಡರ್ ರೊಬ್ಬರು ವಿದ್ಯುತ್ ಬಿಲ್ ಬಾಕಿ ಹಗರಣದಲ್ಲಿ ಸೈಬರ್ ವಂಚಕರಿಂದ ಮೋಸ ಹೋಗಿದ್ದು,  ತಮ್ಮ ಕ್ರೆಡಿಟ್ ಕಾರ್ಡ್ ನಿಂದ ಸುಮಾರು 1.5 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎಂದು  ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.  

ಆದಾಗ್ಯೂ, ತನ್ನೊಂದಿಗೆ ಫೋನ್ ನಲ್ಲಿ ಮಾತನಾಡಿದ್ದು ವಂಚಕರು ಎಂಬುದನ್ನು ಅರಿತ ನೌಕ ಅಧಿಕಾರಿ ತ್ವರಿತಗತಿಯಲ್ಲಿ ಕಾರ್ಡ್ ಬ್ಲಾಕ್ ಮಾಡುವ ಮೂಲಕ ಇನ್ನೂ 1.35 ಲಕ್ಷ ರೂಪಾಯಿ ಕಳೆದುಕೊಳ್ಳುವುದರಿಂದ ತಪ್ಪಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  1.35 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಕಮಾಂಡರ್ ಪೊಲೀಸರನ್ನು ಸಂಪರ್ಕಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

"ಗುರುವಾರ ಬಾಕಿ ಇರುವ ವಿದ್ಯುತ್ ಬಿಲ್ ಪಾವತಿಸದಿದ್ದರೆ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಗುರುವಾರ ನೌಕಪಡೆ ಅಧಿಕಾರಿಯ ಪತ್ನಿಗೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿದೆ.  ಅವರು ಆ ಸಂದೇಶವನ್ನು ತನ್ನ ಪತಿಗೆ ರವಾನಿಸಿದ್ದಾರೆ. ಆಗ ಅಧಿಕಾರಿ ಮೇಸೆಜ್ ಬಂದಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಮೊಬೈಲ್ ನಲ್ಲಿ ಕ್ವಿಕ್ ಸಪೋರ್ಟ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು, ಬಿಲ್ ಪಾವತಿ ಎಂದು ಹೇಳಲಾಗಿದೆ.

ತದನಂತರ ಆ್ಯಪ್ ಡೌನ್ ಲೋಡ್ ಮಾಡಿಕೊಂಡಾಗ ವಂಚಕರು 10 ರೂ. ಕಳುಹಿಸುವಂತೆ ಕೇಳಿದ್ದಾರೆ. ತದನಂತರ ಅಧಿಕಾರಿಯ ಬ್ಯಾಂಕ್ ಖಾತೆಯಿಂದ ರೂ.48,999 ಮತ್ತು ರೂ. 98,000  ವಿತ್ ಡ್ರಾ ಮಾಡಿದ್ದಾರೆ. ಆದಾಗ್ಯೂ, ಏನೋ ತಪ್ಪಾಗಿದೆ ಎಂಬುದನ್ನು ಅರಿತ  ಅಧಿಕಾರಿ ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com