ಸದ್ಯದಲ್ಲಿಯೇ ಸ್ಥಳೀಯ ಭಾಷೆಗಳಲ್ಲಿ ಎಂಬಿಬಿಎಸ್ ಪುಸ್ತಕಗಳು, ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಆರಂಭ

ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯಲ್ಲಿ ಪಠ್ಯಪುಸ್ತಕಗಳನ್ನು ಜಾರಿಗೆ ತಂದ ಮೊದಸ ರಾಜ್ಯ ಮಧ್ಯ ಪ್ರದೇಶವಾಗಿರಬಹುದು. ಆದರೆ ದೇಶದಲ್ಲಿ ಸದ್ಯದಲ್ಲಿಯೇ ವೈದ್ಯಕೀಯ ವಿಷಯಗಳನ್ನು ಸ್ಥಳೀಯ ಭಾಷೆಗಳಲ್ಲಿ ಬೋಧಿಸಲಾಗುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯಲ್ಲಿ ಪಠ್ಯಪುಸ್ತಕಗಳನ್ನು ಜಾರಿಗೆ ತಂದ ಮೊದಸ ರಾಜ್ಯ ಮಧ್ಯ ಪ್ರದೇಶವಾಗಿರಬಹುದು. ಆದರೆ ದೇಶದಲ್ಲಿ ಸದ್ಯದಲ್ಲಿಯೇ ವೈದ್ಯಕೀಯ ವಿಷಯಗಳನ್ನು ಸ್ಥಳೀಯ ಭಾಷೆಗಳಲ್ಲಿ ಬೋಧಿಸಲಾಗುತ್ತದೆ.

ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಭಾರತೀಯ ಭಾಷೆಗಳನ್ನು ಪ್ರಚುರಪಡಿಸುವ ಉನ್ನತ ಮಟ್ಟದ ಸಮಿತಿಯು ಈ ಸಂಬಂಧ ಈಗಾಗಲೇ ರಾಷ್ಟ್ರೀಯ ವೈದ್ಯಕೀಯ ಆಯೋಗ(NMC), ರಾಜ್ಯ ವೈದ್ಯಕೀಯ ಮಂಡಳಿಗಳು, ವೈದ್ಯಕೀಯ ವಿಶ್ವವಿದ್ಯಾಲಯಗಳು, ಕಾಲೇಜುಗಳು, ವೈದ್ಯರು ಮತ್ತು ಪ್ರೊಫೆಸರ್ ಗಳ ಜೊತೆ ಮಾತುಕತೆ ನಡೆಸಿದೆ. ಹಿಂದಿ ಮತ್ತು ಬೇರೆ ಸ್ಥಳೀಯ ಭಾಷೆಗಳಲ್ಲಿ ವೈದ್ಯಕೀಯ ಪಠ್ಯಗಳನ್ನು ತಯಾರಿಸುವ ಸಂಬಂಧ ಮಾತುಕತೆ, ಸಮಾಲೋಚನೆಗಳು ನಡೆದಿದೆ ಎಂದು ಸಮಿತಿಯ ಅಧ್ಯಕ್ಷ ಚಮು ಕೃಷ್ಣ ಶಾಸ್ತ್ರಿ ತಿಳಿಸಿದ್ದಾರೆ.

ತಮಿಳು ನಾಡು ಡಾ ಎಂಜಿಆರ್ ವೈದ್ಯಕೀಯ ವಿಶ್ವವಿದ್ಯಾಲಯಗಳ ಉಪ ಕುಲಪತಿ ಡಾ ಸುಧಾ ಸೆಶಯ್ಯನ್ ಎಂ ಎಸ್ ಈಗಾಗಲೇ ತಮಿಳಿನಲ್ಲಿ ವೈದ್ಯಕೀಯ ಪದಗುಚ್ಛ ಸಿದ್ಧಪಡಿಸಲು ಆರಂಭಿಸಿದೆ.ಗೃಹ ಸಚಿವ ಅಮಿತ್ ಶಾ ದೇಶದ ಮೊದಲ ಎಂಬಿಬಿಎಸ್ ಸಿಲೆಬಸ್ ನ್ನು ಹಿಂದಿಯಲ್ಲಿ ನಾಳೆ ಬಿಡುಗಡೆ ಮಾಡಲಿದ್ದಾರೆ. ಬೇರೆ ರಾಜ್ಯಗಳು ಇದನ್ನು ಅನುಸರಿಸಬಹುದು ಎಂಬ ಭಾವನೆಯಲ್ಲಿದ್ದೇವೆ ಎಂದು ಶಾಸ್ತ್ರಿ ಹೇಳಿದರು.

ಮಧ್ಯ ಪ್ರದೇಶ ಸರ್ಕಾರ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ತಯಾರು ಮಾಡಿದೆ. ಉಳಿದ ವೈದ್ಯಕೀಯ ಕೋರ್ಸ್ ಪುಸ್ತಕಗಳನ್ನು ತಯಾರಿಸುವ ಬಗ್ಗೆ ಕೆಲಸಗಳು ನಡೆಯುತ್ತಿವೆ. ಹಿಂದಿ ಮತ್ತು ಬೇರೆ ಭಾಷೆಗಳಲ್ಲಿ ವೈದ್ಯಕೀಯ ಪಠ್ಯಪುಸ್ತಕಗಳನ್ನು ತರುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಶಾಸ್ತ್ರಿ ಹೇಳಿದರು. ಇಂಗ್ಲಿಷ್ ನಲ್ಲಿ ವೈದ್ಯಕೀಯ ಕೋರ್ಸ್ ಗಳನ್ನು ಕಲಿಸುವ ಅವಕಾಶ ಮುಂದುವರಿಯುತ್ತದ, ಅದರ ಜೊತೆಗೆ ಹಿಂದಿ ಮತ್ತು ಸ್ಥಳೀಯ ಭಾಷೆಗಳಲ್ಲಿ ಕೂಡ ಲಭ್ಯವಿರುತ್ತದೆ ಎಂದು ವಿವರಿಸಿದರು.

ಇದರ ಹಿಂದಿನ ಆಲೋಚನೆ ಏಕೆಂದರೆ ಶೇಕಡಾ 90ರಷ್ಟು ರೋಗಿಗಳಿಗೆ ಇಂಗ್ಲಿಷ್ ಗೊತ್ತಿರುವುದಿಲ್ಲ. ಬಹುತೇಕ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲಿ ಮೂಲ ಪ್ರಾಥಮಿಕ ಶಿಕ್ಷಣವನ್ನು ಕಲಿತು ಬಂದಿರುತ್ತಾರೆ. ಏಕಾಏಕಿ ವೈದ್ಯಕೀಯ ಶಿಕ್ಷಣವನ್ನು ಇಂಗ್ಲಿಷಿನಲ್ಲಿ ಕಲಿಯಲು ಆರಂಭಿಸಿದಾಗ ಅವರಿಗೆ ವೈದ್ಯಕೀಯ ಭಾಷೆಗಳು ಕಷ್ಟವಾಗಬಹುದು ಎನ್ನುತ್ತಾರೆ ಶಾಸ್ತ್ರಿ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್ ಮುಗಿದ ನಂತರ ತಮ್ಮ ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ಇಚ್ಛಿಸುತ್ತಾರೆ. ಹೀಗಾಗಿ ಗ್ರಾಮೀಣ ಆರೋಗ್ಯಸೇವೆ ಸೌಲಭ್ಯಗಳಿಗೆ ತಕ್ಕಂತೆ ವೈದ್ಯರನ್ನು ತಯಾರು ಮಾಡುವುದು ಮುಖ್ಯವಾಗುತ್ತದೆ. ಸ್ಥಳೀಯ ಭಾಷೆಯೆಂದು ಪುಸ್ತಕದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ.

ಆದರೆ ಈ ಯೋಜನೆಗೆ ವೈದ್ಯಕೀಯ ಸಮೂಹ ಅಪಸ್ವರ ವ್ಯಕ್ತಪಡಿಸುತ್ತಿದೆ. ಇದು ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಫೈಮಾ ವೈದ್ಯರ ಸಂಘದ ಅಧ್ಯಕ್ಷ ಡಾ.ರೋಹನ್ ಕೃಷ್ಣನ್ ಹೇಳಿದ್ದಾರೆ. ವೈದ್ಯಕೀಯ ಶಿಕ್ಷಣವು ಅಂತರರಾಷ್ಟ್ರೀಯ ಮಾರ್ಗಸೂಚಿಗಳು ಮತ್ತು ಸಂಸ್ಥೆಗಳಿಗೆ ಸಮನಾಗಿರಬೇಕು. ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗುತ್ತಾರೆ ಮತ್ತು ಗುಣಮಟ್ಟ ಕುಸಿಯುತ್ತದೆ ಎನ್ನುತ್ತಾರೆ. 

ಆರ್‌ಎಂಎಲ್‌ನ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್‌ನ ಮಾಜಿ ಜಂಟಿ ಕಾರ್ಯದರ್ಶಿ ಡಾ ಫುರ್ಕ್ವಾನ್ ಅಹ್ಮದ್ ಟ್ವೀಟ್ ಮಾಡಿ, “ಎಂಬಿಬಿಎಸ್ ಅನ್ನು ಹಿಂದಿಯಲ್ಲಿ ಕಲಿಸುವುದು ಒಂದು ಹಿನ್ನಡೆಯ ಹೆಜ್ಜೆ. ಅತಿ ರಾಷ್ಟ್ರೀಯತೆಯೇ ಮೂಲ ಕಾರಣ. ನಾಳೆ, ಅವರು ಅದನ್ನು ಸಂಸ್ಕೃತದಲ್ಲಿ ಪ್ರಾರಂಭಿಸಲು ಒತ್ತಾಯಿಸುತ್ತಾರೆ, ಆದರೆ ರಾಜಕೀಯ ಕಾರ್ಯಸೂಚಿಗಾಗಿ ದೇವನಾಗರಿ ಲಿಪಿಯಲ್ಲಿ ಇಂಗ್ಲಿಷ್ ಪದಗಳನ್ನು ಬರೆಯುವ ಅರ್ಥವೇನು? ಈ ನಿಟ್ಟಿನಲ್ಲಿ NMC ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.

ಎಫ್‌ಎಐಎಂಎ ಸಂಸ್ಥಾಪಕ ಸದಸ್ಯ ಡಾ ಮನೀಷ್ ಜಂಗ್ರಾ, ವೈದ್ಯರು, ಈ ಮಾರ್ಗಸೂಚಿಗಳನ್ನು ತಂದ ನಂತರ ಅವರಿಗೇ ಇದು ಗೊಂದಲಮಯವಾಗಬಹುದು ಎನ್ನುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com