ಯಕೃತ್ ಸೋಂಕು: ಎನ್ಇಇಟಿ ಆಕಾಂಕ್ಷಿ ನಿಧನ, 35 ವಿದ್ಯಾರ್ಥಿಗಳಿಗೆ ಅನಾರೋಗ್ಯ, ಕಲುಷಿತ ನೀರು ಕಾರಣ?

ಯಕೃತ್ ಸೋಂಕಿನಿಂದಾಗಿ 18 ವರ್ಷದ ಎನ್ಇಇಟಿ ಆಕಾಂಕ್ಷಿಯೊಬ್ಬರು ನಿಧನರಾಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. 
ವಿದ್ಯುತ್ ಸ್ಪರ್ಶದಿಂದ ಸಾವು
ವಿದ್ಯುತ್ ಸ್ಪರ್ಶದಿಂದ ಸಾವು

ಕೋಟಾ: ಯಕೃತ್ ಸೋಂಕಿನಿಂದಾಗಿ 18 ವರ್ಷದ ಎನ್ಇಇಟಿ ಆಕಾಂಕ್ಷಿಯೊಬ್ಬರು ನಿಧನರಾಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ವೈಭವ್ ರಾಯ್ ನಿಧನರಾಗಿರುವ ವಿದ್ಯಾರ್ಥಿಯಾಗಿದ್ದು, 36 ವಿದ್ಯಾರ್ಥಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಅನಾರಗ್ಯಕ್ಕೀಡಾಗಿದ್ದಾರೆ. 

ಈ ಘಟನೆ ಜವಾಹರ್ ನಗರದಲ್ಲಿ ವರದಿಯಾಗಿದ್ದು, 18 ವಿದ್ಯಾರ್ಥಿಗಳು ಈ ವರೆಗೂ ಚೇತರಿಸಿಕೊಂಡಿದ್ದರೆ, ಇನ್ನೂ ಮೂವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಕೋಟಾದ ಸಿಎಂಹೆಚ್ಒ ಡಾ. ಜಗದೀಷ್ ಸೋನಿ ಪಿಟಿಐ ಗೆ ಹೇಳಿಕೆ ನೀಡಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಕೋಚಿಂಗ್ ಸಂಸ್ಥೆಗಳು, ಹೋಟೆಲ್ ಗಳು, ಕ್ಯಾಂಟೀನ್ ಗಳಿಗೆ ನೀರು ಪೂರೈಸುತ್ತಿರುವ 3 ನೀರು ಪೂರೈಕೆ ವ್ಯವಸ್ಥೆಯಿಂದ ಕಲುಷಿತ ನೀರು ಪೂರೈಕೆಯಾಗುತ್ತಿರುವುದೇ ಈ ಘಟನೆಗೆ ಕಾರಣವಿರಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com