ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲ: ಕರ್ನಾಟಕಕ್ಕೆ 2,900 ಕೋಟಿ ರೂ. ದಂಡ ವಿಧಿಸಿದ ಎನ್‌ಜಿಟಿ

ಪರಿಸರಕ್ಕೆ ಹಾನಿ ಉಂಟುಮಾಡುವ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸದ ಆರೋಪದ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಕರ್ನಾಟಕಕ್ಕೆ 2,900 ಕೋಟಿ ರೂಪಾಯಿ ದಂಡ ವಿಧಿಸಿದೆ.
ಎನ್ ಜಿಟಿ
ಎನ್ ಜಿಟಿ
Updated on

ನವದೆಹಲಿ: ಪರಿಸರಕ್ಕೆ ಹಾನಿ ಉಂಟುಮಾಡುವ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸದ ಆರೋಪದ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಕರ್ನಾಟಕಕ್ಕೆ 2,900 ಕೋಟಿ ರೂಪಾಯಿ ದಂಡ ವಿಧಿಸಿದೆ.

ಪರಿಸರದ ಮೇಲಿನ ನಿರಂತರ ಹಾನಿಯನ್ನು ನಿವಾರಿಸಲು ಮತ್ತು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ನಿಯಮಗಳ ಜಾರಿಯನ್ನು ಈ ನ್ಯಾಯಮಂಡಳಿ ಮೇಲ್ವಿಚಾರಣೆ ಮಾಡುವ ಅಗತ್ಯವಿರುವ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಲು ಎನ್‌ಜಿಟಿ ಕಾಯ್ದೆಯ ಸೆಕ್ಷನ್ 15 ರ ಅಡಿಯಲ್ಲಿ ಪರಿಹಾರವನ್ನು ನೀಡುವುದು ಅಗತ್ಯವಾಗಿದೆ ಎಂದು ನ್ಯಾಯಮಂಡಳಿ ಹೇಳಿದೆ.

ಪುನಃಸ್ಥಾಪನೆಗೆ ಅಗತ್ಯವಾದ ಪ್ರಮಾಣೀಕೃತ ಹೊಣೆಗಾರಿಕೆಯನ್ನು ನಿಗದಿಪಡಿಸದೆ, ಕೇವಲ ಆದೇಶಗಳನ್ನು ರವಾನಿಸುವುದರಿಂದ ಕಳೆದ ಎಂಟು ವರ್ಷಗಳಲ್ಲಿ(ಘನತ್ಯಾಜ್ಯ ನಿರ್ವಹಣೆಗಾಗಿ) ಮತ್ತು ಐದು ವರ್ಷಗಳಲ್ಲಿ(ದ್ರವ ತ್ಯಾಜ್ಯ ನಿರ್ವಹಣೆಗಾಗಿ) ಶಾಸನಬದ್ಧ/ ಅವಧಿ ಮುಗಿದ ನಂತರವೂ ಯಾವುದೇ ಸ್ಪಷ್ಟವಾದ ಫಲಿತಾಂಶಗಳನ್ನು ತೋರಿಸಿಲ್ಲ. ಹೀಗಾಗಿ ಹಾನಿಯನ್ನು ಭವಿಷ್ಯದಲ್ಲಿ ತಡೆಗಟ್ಟುವ ಅಗತ್ಯವಿದೆ ಮತ್ತು ಹಿಂದಿನ ಹಾನಿಯನ್ನು ಮರುಸ್ಥಾಪಿಸಬೇಕು ಎಂದು ನ್ಯಾಯಮಂಡಳಿ ಹೇಳಿದೆ.

ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಮಂಡಳಿ ಪೀಠವು ಅಕ್ಟೋಬರ್ 13ರಂದು ಹೊರಡಿಸಿದ ಆದೇಶದಲ್ಲಿ, ಕರ್ನಾಟಕ ರಾಜ್ಯವು ಪಾವತಿಸಬೇಕಾದ ಪರಿಹಾರವನ್ನು ನಾವು ನಿರ್ಧರಿಸುತ್ತೇವೆ ಎಂದು ಹೇಳಿತ್ತು.

2,900 ಕೋಟಿಯನ್ನು ಕರ್ನಾಟಕ ಸರ್ಕಾರ ಎರಡು ತಿಂಗಳೊಳಗೆ ಪ್ರತ್ಯೇಕ ಖಾತೆಯಲ್ಲಿ ಠೇವಣಿ ಇಡಬೇಕು. ಮುಖ್ಯ ಕಾರ್ಯದರ್ಶಿಯ ನಿರ್ದೇಶನದಂತೆ ಕಾರ್ಯನಿರ್ವಹಿಸಲು ಮತ್ತು ಆರು ತಿಂಗಳೊಳಗೆ ಪುನಃಸ್ಥಾಪನೆ ಕ್ರಮಗಳಿಗೆ ಇದನ್ನು ಬಳಸಿಕೊಳ್ಳಬಹುದು ಎಂದು ಹೇಳಿದೆ.

ಈ ಹಿಂದೆ ಪಂಜಾಬ್ ಸರಕಾರ ತ್ಯಾಜ್ಯ ನಿರ್ವಹಣೆಯನ್ನು ಸರಿಯಾಗಿ ಮಾಡಿಲ್ಲ ಎಂದು 2000 ಕೋಟಿ ದಂಡ ವಿಧಿಸಿತ್ತು. ಇದೇ ರೀತಿಯಲ್ಲಿ ಎನ್ ಜಿಟಿ ರಾಜಸ್ಥಾನ ಸರಕಾರಕ್ಕೆ 3,000 ಕೋಟಿ‌ ದಂಡ ವಿಧಿಸಿದೆ.

ಬೆಂಗಳೂರು ಹೊರವಲಯದಲ್ಲಿರುವ ಐತಿಹಾಸಿಕ ಚಂದಾಪುರ ಕೆರೆ ನಿರ್ವಹಣೆ, ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು 500 ಕೋಟಿ ದಂಡ ವಿಧಿಸಿದೆ. ಕರ್ನಾಟಕ ಸರ್ಕಾರದ ಮೇಲೆ ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ನೇರವಾಗಿ ಅಥವಾ ಪರೋಕ್ಷವಾಗಿ ನಾಲೆಗಳ ಮೂಲಕ ಕೆರೆಗೆ ಬಿಡಲಾಗುತ್ತಿದೆ ಎಂದು ಎನ್‌ಜಿಟಿ ಸಮಿತಿ ವರದಿ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com