ನ್ಯಾಯ ಸಿಗದ ಹೊರತು ಕಾಶ್ಮೀರದಲ್ಲಿ ಹತ್ಯೆಗಳು ನಿಲ್ಲುವುದಿಲ್ಲ: ಫಾರೂಖ್ ಅಬ್ದುಲ್ಲಾ

ನ್ಯಾಯ ಸಿಗದ ಹೊರತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಉದ್ದೇಶಿತ ಹತ್ಯೆಗಳು ನಿಲ್ಲುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಸೋಮವಾರ ಹೇಳಿದ್ದಾರೆ.
ಫಾರೂಖ್ ಅಬ್ದುಲ್ಲಾ
ಫಾರೂಖ್ ಅಬ್ದುಲ್ಲಾ

ಶ್ರೀನಗರ: ನ್ಯಾಯ ಸಿಗದ ಹೊರತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಉದ್ದೇಶಿತ ಹತ್ಯೆಗಳು ನಿಲ್ಲುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಸೋಮವಾರ ಹೇಳಿದ್ದಾರೆ. 

ಜಮ್ಮು ವಿಭಾಗದ ಜಿಲ್ಲಾ ರಿಯಾಸಿ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ”ನ್ಯಾಯ ಸಿಗುವವರೆಗೂ ಹತ್ಯೆಗಳು ನಿಲ್ಲುವುದಿಲ್ಲ, ಬಿಜೆಪಿಯವರು 370 ನೇ ವಿಧಿಯಿಂದಾಗಿ ಇಂತಹ ಹತ್ಯೆಗಳು ನಡೆಯುತ್ತಿವೆ. ಆದರೆ ಈಗ ಅದನ್ನು ರದ್ದುಗೊಳಿಸಲಾಗಿದೆ, ಆದರೂ ಹತ್ಯೆಗಳ ಪ್ರಕ್ರಿಯೆ ಏಕೆ ನಿಲ್ಲುತ್ತಿಲ್ಲ. ಇದಕ್ಕೆ ಯಾರು ಹೊಣೆ?.

”ಕಾಶ್ಮೀರದಲ್ಲಿ ಪರಿಸ್ಥಿತಿ ಉತ್ತಮವಾಗಿದೆ ಎಂದು ಬಿಜೆಪಿ ಸರಕಾರ ಹೇಳುತ್ತಿದೆ, ಆದರೆ ಪರಿಸ್ಥಿತಿ ಎಲ್ಲಿ ಉತ್ತಮವಾಗಿದೆ? ಕಾಶ್ಮೀರಿ ಪಂಡಿತನನ್ನು ಏಕೆ ಕೊಂದರು?” ಎಂದು ಪ್ರಶ್ನಿಸಿದ್ದಾರೆ. ಫಾರೂಖ್ ಅಬ್ದುಲ್ಲಾ ಅವರ ಈ ಹೇಳಿಕೆಗೆ ಎಲ್ಲೆಡೆ ವಿರೋಧಗಳು ವ್ಯಕ್ತವಾಗುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com