ಕಾಶ್ಮೀರಿ ಪಂಡಿತರ ಹತ್ಯೆ; ಭಾರತೀಯನಾಗಿ ನಾಚಿಕೆಯಾಗುತ್ತಿದೆ- ಕೇರಳ ರಾಜ್ಯಪಾಲ

ಕೇಂದ್ರಾಡಳಿತ ಪ್ರದೇಶ ಕಾಶ್ಮೀರದಲ್ಲಿ ಉಗ್ರರಿಂದ ಪಂಡಿತರ ಹತ್ಯೆ ಕುರಿತು ಮಂಗಳವಾರ ಪ್ರತಿಕ್ರಿಯಿಸಿರುವ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಅಮಾಯಕ ಹತ್ಯೆಗಿಂತ ಕ್ರೂರ ಅಪರಾಧ ಮತ್ತೊಂದಿಲ್ಲ, ಭಾರತೀಯನಾಗಿ ನಾಚಿಕೆಯಾಗುತ್ತಿದೆ ಎಂದಿದ್ದಾರೆ. 
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

ಬುಲಂದ್ ಶಹರ್: ಕೇಂದ್ರಾಡಳಿತ ಪ್ರದೇಶ ಕಾಶ್ಮೀರದಲ್ಲಿ ಉಗ್ರರಿಂದ ಪಂಡಿತರ ಹತ್ಯೆ ಕುರಿತು ಮಂಗಳವಾರ ಪ್ರತಿಕ್ರಿಯಿಸಿರುವ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಅಮಾಯಕ ಹತ್ಯೆಗಿಂತ ಕ್ರೂರ ಅಪರಾಧ ಮತ್ತೊಂದಿಲ್ಲ, ಭಾರತೀಯನಾಗಿ ನಾಚಿಕೆಯಾಗುತ್ತಿದೆ ಎಂದಿದ್ದಾರೆ. 

ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಬಂಗಾರ್ ಗ್ರಾಮದಲ್ಲಿ ಡಾ ಭೀಮರಾವ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ನನ್ನ ದೇಶದ ಒಬ್ಬ ವ್ಯಕ್ತಿ ತನ್ನ ಮನೆಯನ್ನು ತೊರೆದು ನಿರಾಶ್ರಿತನಾಗಬೇಕಾದರೆ, ಅದಕ್ಕಿಂತ ಅಪಮಾನ ಮತ್ತೊಂದು ಇಲ್ಲ. ಕಾಶ್ಮೀರ ಪಂಡಿತ ಸಮುದಾಯ ಉಗ್ರರಿಗೆ ಗುರಿಯಾಗುವುದನ್ನು ತಡೆಯಲು ಅಲ್ಲಿನ ಸರ್ಕಾರ ಅತ್ಯುತ್ತಮವಾಗಿ ಪ್ರಯತ್ನಿಸುತ್ತಿದೆ ಎಂದು ಖಾನ್ ಹೇಳಿದರು. 

ಕಣಿವೆ ಪ್ರದೇಶದಲ್ಲಿನ ಹತ್ಯೆ ಕುರಿತಂತೆ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಸಂವಿಧಾನ ರಚಿಸಿದ್ದು ಡಾ. ಬಿ. ಆರ್. ಅಂಬೇಡ್ಕರ್ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ದೇಶದಲ್ಲಿನ ಮಹಿಳೆಯರ ಸ್ಥಾನಮಾನ ಅವರು ತಂದ ಕಾನೂನಿನಿಂದ ಬದಲಾಯಿತು ಎಂಬುದರ ಕುರಿತು ಎಲ್ಲಿಯೂ ಚರ್ಚೆಯಾಗುತ್ತಿಲ್ಲ ಎಂದು ಅವರು ವಿಷಾಧಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com