ಮಹಾರಾಷ್ಟ್ರದಲ್ಲಿ ಕೋವಿಡ್-19 ಕೇಸ್ ಹೆಚ್ಚಳ; ಎಕ್ಸ್ ಬಿಬಿ ರೂಪಾಂತರಿ ಪತ್ತೆ

ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ.17.7 ರಷ್ಟು ಹೆಚ್ಚಳ ಕಂಡಿದ್ದು, ಕಳೆದ ವಾರಕ್ಕೆ ಹೋಲಿಸಿದರೆ ಗಣನೀಯ ಪ್ರಮಾಣದ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ. 
ಕೋವಿಡ್-19 (ಸಂಗ್ರಹ ಚಿತ್ರ)
ಕೋವಿಡ್-19 (ಸಂಗ್ರಹ ಚಿತ್ರ)

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ.17.7 ರಷ್ಟು ಹೆಚ್ಚಳ ಕಂಡಿದ್ದು, ಕಳೆದ ವಾರಕ್ಕೆ ಹೋಲಿಸಿದರೆ ಗಣನೀಯ ಪ್ರಮಾಣದ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ. 

ರಾಜ್ಯದಲ್ಲಿ ಕೊರೋನಾದ ಓಮಿಕ್ರಾನ್ ನ ಉಪತಳಿ ಹೊಸ ರೂಪಾಂತರಿ ಎಕ್ಸ್ ಬಿಬಿ ಪತ್ತೆಯಾಗಿದ್ದು, ಈ ಉಪತಳಿ ಕೇರಳದಲ್ಲೂ ಈಗಾಗಲೇ ಪತ್ತೆಯಾಗಿದೆ. 

ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ನ ಇತರ ಉಪತಳಿಗಳಾದ ಬಿಎ.2.3.20 ಹಾಗೂ ಬಿಕ್ಯು.1 ರೂಪಾಂತರಿಗಳೂ ಪತ್ತೆಯಾಗಿದ್ದು ದೇಶದಲ್ಲಿ ಇದೇ ಮೊದಲ ಬಾರಿಗೆ ಈ ಉಪತಳಿಗಳ ಪ್ರಕರಣಗಳು ಪತ್ತೆಯಾಗಿವೆ. ಎಕ್ಸ್ ಬಿಬಿ ಓಮಿಕ್ರಾನ್ ನ ಎರಡು ಉಪತಳಿಗಳಾದ ಬಿಜೆ.1 ಹಾಗೂ ಬಿಎ.2.75 ನ ಮರುಸಂಯೋಜಿತ ವಂಶಾವಳಿಯಾಗಿದ್ದು ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. 

ಮಹಾರಾಷ್ಟ್ರದ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, ಅಕ್ಟೋಬರ್ ನ ಈ ವಾರದಲ್ಲಿ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಇದೆ. ಥಾಣೆ, ರಾಯ್ ಗಢ, ಮುಂಬೈ ಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com