ಶೋಪಿಯಾನ್‌ನಲ್ಲಿ ಬಂಧಿತ ಉಗ್ರನ ಸಾವಿನ ತನಿಖೆಗೆ ಮೆಹಬೂಬಾ ಮುಫ್ತಿ ಆಗ್ರಹ!

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರಗಾಮಿ ವಿರೋಧಿ ಕಾರ್ಯಾಚರಣೆ ವೇಳೆ ಬಂಧಿತ 'ಹೈಬ್ರಿಡ್' ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಹತ್ಯೆಗೈದ ಬಗ್ಗೆ ತನಿಖೆ ನಡೆಸುವಂತೆ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಒತ್ತಾಯಿಸಿದ್ದಾರೆ.
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರಗಾಮಿ ವಿರೋಧಿ ಕಾರ್ಯಾಚರಣೆ ವೇಳೆ ಬಂಧಿತ 'ಹೈಬ್ರಿಡ್' ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಹತ್ಯೆಗೈದ ಬಗ್ಗೆ ತನಿಖೆ ನಡೆಸುವಂತೆ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಒತ್ತಾಯಿಸಿದ್ದಾರೆ.

ಕಾಶ್ಮೀರಿ ಪಂಡಿತರು ಮತ್ತು ಕಾರ್ಮಿಕರ ಹತ್ಯೆ ಖಂಡನೀಯ ಆದರೆ ಪೊಲೀಸ್ ಕಸ್ಟಡಿಯಲ್ಲಿದ್ದ  ಉಗ್ರಗಾಮಿಯ ಹತ್ಯೆ ಮಾಡಿರುವುದು 'ಕ್ಯಾಚ್ ಅಂಡ್ ಕಿಲ್' ನೀತಿಯ ಭಾಗವಾಗಿದೆ ಎಂಬ ಆರೋಪಕ್ಕೆ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

'ಇದನ್ನು ಮೊದಲು ಪಂಜಾಬ್‌ನಲ್ಲಿ ಬಳಸಲಾಗುತ್ತಿತ್ತು. ಗುಜರಾತ್ ಮತ್ತು ಹಿಮಾಚಲ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಇಲ್ಲಿ ಶಾಂತಿ ಕದಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ತೋರುತ್ತಿದೆ. ಇದರಿಂದಾಗಿ ಹಿಂದೂ-ಮುಸ್ಲಿಂ ಧ್ರುವೀಕರಣದಿಂದ ಬಿಜೆಪಿ ಗರಿಷ್ಠ ಲಾಭವನ್ನು ಪಡೆಯಬಹುದು ಎಂದು ಅವರು ಆರೋಪಿಸಿದ್ದಾರೆ.

ಮಂಗಳವಾರ ಮುಂಜಾನೆ ಶೋಪಿಯಾನ್ ಜಿಲ್ಲೆಯ ಹರ್ಮೈನ್‌ನಲ್ಲಿ ಇಬ್ಬರು ಕಾರ್ಮಿಕರ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇಮ್ರಾನ್ ಬಶೀರ್ ಗನಾಯ್ ಎಂಬಾತನನ್ನು ಬಂಧಿಸಲಾಗಿತ್ತು. ಪೊಲೀಸರ ಪ್ರಕಾರ, ಬುಧವಾರ ಮುಂಜಾನೆ ಜಿಲ್ಲೆಯ ನೌಗಾಮ್ ಪ್ರದೇಶದಲ್ಲಿ ಪೊಲೀಸರು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಗನಾಯ್ ಕೂಡ ಸಾವನ್ನಪ್ಪಿದ್ದನು.

ಈ ಬಗ್ಗೆ ಪ್ರಶ್ನಿಸಿರುವ ಮೆಹಬೂಬಾ ಮುಫ್ತಿ, ಗನಾಯ್ ಬಂಧಿನವಾಗಿರುವಾಗಲೇ ಭಯೋತ್ಪಾದಕರು ಗನಾಯ್ ನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಪೊಲೀಸರ ಹೇಳಿಕೆ ಹಾಸ್ಯಾಸ್ಪದ. ಇದು 'ತರ್ಕವನ್ನು ಮೀರಿದ್ದು, ಸಂಪೂರ್ಣ ತನಿಖೆ ಆಗಬೇಕಿದೆ ಎಂದು ಹೇಳಿದರು.

'ಪೊಲೀಸರ ಕಸ್ಟಡಿಯಲ್ಲಿರುವ ಯಾರನ್ನಾದರೂ ಉಗ್ರಗಾಮಿಗಳು ಅಷ್ಟು ಸುಲಭವಾಗಿ ಕೊಲ್ಲಲು ಸಾಧ್ಯವಾದರೆ, ಸಾಮಾನ್ಯ ಜನರ ಭವಿಷ್ಯ ಏನಾಗಬಹುದು ಎಂಬುದನ್ನು ತೋರಿಸುತ್ತದೆ' ಎಂದು ಮೆಹಬೂಬಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com