ಅಜ್ಞಾನಿ ಆಡಳಿತಗಾರರಿಂದ ಪ್ರತಿಭಾನ್ವಿತ ಕೇರಳಿಗರು ರಾಜ್ಯ ತೊರಿಯುತ್ತಿದ್ದಾರೆ: ಸರ್ಕಾರಕ್ಕೆ ಆರಿಫ್ ಖಾನ್‌ ತಿರುಗೇಟು

ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಅಜ್ಞಾನಿಗಳು ರಾಜ್ಯವನ್ನು ಆಳುತ್ತಿರುವ ಕಾರಣದಿಂದ ಪ್ರತಿಭಾವಂತರು ರಾಜ್ಯವನ್ನು ತೊರೆಯುತ್ತಿದ್ದಾರೆ ಎಂದು  ಹೇಳಿದ್ದಾರೆ.
ಆರಿಫ್ ಮೊಹಮ್ಮದ್ ಖಾನ್
ಆರಿಫ್ ಮೊಹಮ್ಮದ್ ಖಾನ್

ಕೊಚ್ಚಿ: ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಅಜ್ಞಾನಿಗಳು ರಾಜ್ಯವನ್ನು ಆಳುತ್ತಿರುವ ಕಾರಣದಿಂದ ಪ್ರತಿಭಾವಂತರು ರಾಜ್ಯವನ್ನು ತೊರೆಯುತ್ತಿದ್ದಾರೆ ಎಂದು  ಹೇಳಿದ್ದಾರೆ.

ಕೊಚ್ಚಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಕಾರ್ಯಗಳನ್ನು ಪರಿಶೀಲಿಸುವ ಸಾಂವಿಧಾನಿಕ ಹಕ್ಕು ನ್ಯಾಯಾಲಯಕ್ಕೆ ಮಾತ್ರ ಇದೆಯೇ ಹೊರತು ಮಂತ್ರಿಗಳಲ್ಲ ಎಂದು ರಾಜ್ಯಪಾಲರು, ವಿತ್ತ ಸಚಿವ ಕೆ ಎನ್ ಬಾಲಗೋಪಾಲ್ ಮತ್ತು ಕಾನೂನು ಸಚಿವ ಪಿ ರಾಜೀವ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇರಳದ ಬುದ್ಧಿವಂತ ಸಚಿವರೊಬ್ಬರು ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು(ಆರಿಫ್ ಖಾನ್) ಕೇರಳದ ಶೈಕ್ಷಣಿಕ ವ್ಯವಸ್ಥೆಯನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಮದ್ಯ ಮತ್ತು ಲಾಟರಿ ಆದಾಯದ ಮುಖ್ಯ ಮೂಲವಾಗಿರುವ ವಿತ್ತ ಸಚಿವರು, ರಾಜ್ಯಪಾಲರಿಗೆ ಕೇರಳದ ಶಿಕ್ಷಣ ವ್ಯವಸ್ಥೆ ಅರ್ಥವಾಗಬಹುದೇ ಎಂಬ ಪ್ರಶ್ನೆಯನ್ನು ಎತ್ತುತ್ತಿದ್ದಾರೆ. ಅವರು ಏನೇ ಹೇಳಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳ ಬಗ್ಗೆ ಇದೇ ರೀತಿಯ ಹೇಳಿಕೆ ನೀಡುವುದನ್ನು ತಪ್ಪಿಸಲು ನಾನು ಅವರಿಗೆ ಸಲಹೆ ನೀಡುತ್ತೇನೆ ಎಂದು ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ರಾಜಶ್ರೀ ಎಂಎಸ್ ನೇಮಕವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ರಾಜ್ಯಪಾಲರು ಉಲ್ಲೇಖಿಸಿದರು. ಅವರು ತಮ್ಮ ಮಿತಿಗೆರೆ ದಾಟಬಾರದು ಎಂದು ನಾನು ಸಲಹೆ ನೀಡುತ್ತೇನೆ. ನನ್ನ ಮಟ್ಟಿಗೆ ನಾನು ಅದನ್ನು ನಿರ್ಲಕ್ಷಿಸಬಹುದು. ಆದರೆ ನ್ಯಾಯಾಧೀಶರು ಮಹಾರಾಷ್ಟ್ರ ಮತ್ತು ಅಸ್ಸಾಂನವರು ಅವರಿಗೆ ಕೇರಳದ ಶಿಕ್ಷಣ ವ್ಯವಸ್ಥೆ ಅರ್ಥವಾಗುತ್ತಿಲ್ಲ ಎಂದು ನೀವು ಹೇಳಿದರೆ ನಂತರ ನೀವೇ ತೊಂದರೆಗೆ ಸಿಲುಕಬಹುದು ಎಂದು ಎಚ್ಚರಿಸಿದ್ದಾರೆ.

ರಾಜ್ಯಪಾಲರ ಕ್ರಮಗಳನ್ನು ಸರ್ಕಾರ ಪರಿಶೀಲಿಸುತ್ತದೆ ಎಂಬ ಕಾನೂನು ಸಚಿವ ಪಿ ರಾಜೀವ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಆರಿಫ್ ಮೊಹಮ್ಮದ್ ಖಾನ್, ಅವರ ಕ್ರಮಗಳನ್ನು ಪರಿಶೀಲಿಸುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರ ಇದೆ ಎಂದು ಹೇಳಿದರು.

'ಕಾನೂನು ಸಚಿವರು ನನ್ನ ಕ್ರಮವನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ. ಆದರೆ ನಿಮ್ಮ ಕಾರ್ಯಗಳನ್ನು ಪರಿಶೀಲಿಸಲು ರಾಜ್ಯಪಾಲರಾಗಿ ನಾನು ಇಲ್ಲಿದ್ದೇನೆ. ಸಚಿವರು ಹೇಳುತ್ತಾರೆ ನನ್ನಿಂದ ರಾಜ್ಯಪಾಲರು ನೇಮಕಗೊಂಡಿದ್ದಾರೆ ಅಂತ. ಇದರರ್ಥ ಅವರಿಗೆ ಸಂವಿಧಾನ ಮತ್ತು ಕಾನೂನಿನ ನಿಬಂಧನೆಗಳ ಪರಿಚಯವಿಲ್ಲ ಎಂದು ಕಾಣುತ್ತದೆ. ಇನ್ನು ಇಂತಹ ಅಜ್ಞಾನಿಗಳು ರಾಜ್ಯವನ್ನು ಆಳುತ್ತಿರುವ ಕಾರಣದಿಂದ ಬುದ್ಧಿವಂತ ಜನರು ರಾಜ್ಯವನ್ನು ಬಿಟ್ಟು ಹೊರ ಹೋಗುತ್ತಿದ್ದಾರೆ ಎಂದು ಆರಿಫ್ ಖಾನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com