ಕೊಯಮತ್ತೂರು ಕಾರು ಸ್ಫೋಟ ಪ್ರಕರಣ: ಎನ್ಐಎ ತನಿಖೆಗೆ ಬಿಜೆಪಿ ಒತ್ತಾಯ
ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರು ಸ್ಫೋಟ ಆತ್ಮಾಹುತಿಗಳ ದಾಳಿ ಎಂಬುದನ್ನು ರಾಜ್ಯ ಪೊಲೀಸರು ಒಪ್ಪಿಕೊಳ್ಳಬೇಕೆಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಮಂಗಳವಾರ ಹೇಳಿದ್ದಾರೆ.
Published: 25th October 2022 05:05 PM | Last Updated: 03rd November 2022 05:35 PM | A+A A-

ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ
ಕೊಯಮತ್ತೊರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರು ಸ್ಫೋಟ ಆತ್ಮಾಹುತಿಗಳ ದಾಳಿ ಎಂಬುದನ್ನು ರಾಜ್ಯ ಪೊಲೀಸರು ಒಪ್ಪಿಕೊಳ್ಳಬೇಕೆಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಮಂಗಳವಾರ ಹೇಳಿದ್ದಾರೆ. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾಯಿಸುವಂತೆ ಕೋರಿ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಕೊಯಮತ್ತೂರು ಕಾರು ಸ್ಫೋಟ ಪ್ರಕರಣ: ಐವರ ಬಂಧನ, ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳ ವಶ
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದೀಪಾವಳಿಗೂ ಒಂದು ದಿನ ಮುಂಚಿತವಾಗಿ ಕೊಯಮತ್ತೂರಿಲ್ಲಿ ಕಾರು ಸ್ಫೋಟ ಸಂಭವಿಸಿದೆ. ಎನ್ ಐಎ ದಾಳಿ ಮತ್ತು ಬಂಧನದಿಂದ ಕೊಯಮತ್ತೂರು ಉಗ್ರರ ಚಟುವಟಿಕೆ ತಾಣ ಎಂಬುದು ತಿಳಿದುಬಂದಿದೆ. ಸ್ಫೋಟದಲ್ಲಿ ಮೃತಪಟ್ಟ ವ್ಯಕ್ತಿಯ ಮನೆಯಿಂದ 50 ಕೆಜಿ ಅಮೋನಿಯಂ ನೈಟ್ರೈಟ್, ಪೊಟಾಶಿಯಂ, ಸೊಡಿಯಂ, ಪ್ಯೂಸ್ ವೈರ್, ಏಳು- ವೋಲ್ಟ್ ಬ್ಯಾಟರಿಯನ್ನು ಪೊಲೀಸರು ವಸಕ್ಕೆ ಪಡೆದಿದ್ದಾರೆ. ಆದರೆ, ಈವರೆಗೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಎಂದರು.
Coimbatore Car Cylinder Blast | Police have recovered 50 kg of ammonium nitrate, potassium, sodium, fuse wire and 7-volt batteries from the residence of Jamesha Mubin (who died in the incident). Police have not disclosed this yet: Tamil Nadu BJP chief K Annamalai pic.twitter.com/YsROCYdmKQ
— ANI (@ANI) October 25, 2022
ಕೊಯಮತ್ತೂರಿನ ಪ್ರಸಿದ್ದ ಸಂಗಮೇಶ್ವರ ದೇವಾಲಯದ ಬಳಿ ಭಾನುವಾರ ಬೆಳಗ್ಗೆ ಕಾರು ಸ್ಫೋಟ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟ ನಂತರ ಐವರನ್ನು ನಗರ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.