ಬ್ರಿಟನ್ ಪ್ರಧಾನಿಯಾದ ಅಳಿಯ ರಿಷಿ ಸುನಕ್ ಬಗ್ಗೆ ಹೆಮ್ಮೆಯಾಗುತ್ತಿದೆ: ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ

ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರು, ರಿಷಿ ಸುನಕ್ ಬಗ್ಗೆ ಹೆಮ್ಮೆಯಾಗುತ್ತಿದೆ. ಉನ್ನತ ಸ್ಥಾನಕ್ಕೇರಿ ಇತಿಹಾಸ ಸಷ್ಟಿಸಿದ್ದಕ್ಕೆ ಅಳಿಯನಿಗೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದ್ದಾರೆ.
ನಾರಾಯಣಮೂರ್ತಿ
ನಾರಾಯಣಮೂರ್ತಿ

ಬೆಂಗಳೂರು: ಬ್ರಿಟನ್‌ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ತಮ್ಮ ಅಳಿಯ ರಿಷಿ ಸುನಕ್‌ ಅವರನ್ನು ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅಭಿನಂದಿಸಿದ್ದಾರೆ.

ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಅವರು, ರಿಷಿ ಸುನಕ್ ಬಗ್ಗೆ ಹೆಮ್ಮೆಯಾಗುತ್ತಿದೆ. ಉನ್ನತ ಸ್ಥಾನಕ್ಕೇರಿ ಇತಿಹಾಸ ಸಷ್ಟಿಸಿದ್ದಕ್ಕೆ ಅಳಿಯನಿಗೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದ್ದಾರೆ.

'ರಿಷಿ ಅವರಿಗೆ ಅಭಿನಂದನೆಗಳು. ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ಅವರ ಯಶಸ್ಸನ್ನು ನಾವು ಬಯಸುತ್ತೇವೆ. ಅವರು ಬ್ರಿಟನ್ ಜನತೆಗೆ ತಮ್ಮ ಕೈಲಾದಷ್ಟು ಒಳ್ಳೆಯದನ್ನೇ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ' ಎಂದು ನಾರಾಯಣಮೂರ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

42 ವರ್ಷದ ರಿಷಿ ಸುನಕ್‌ ಅವರು ಭಾನುವಾರ ಬ್ರಿಟನ್‌ನ ಆಡಳಿತರೂಢ ಕನ್ಸರ್ವೇಟಿವ್‌ ಪಕ್ಷದ ನಾಯಕತ್ವ ಪಡೆದಿದ್ದಾರೆ. ಹೀಗಾಗಿ, ಆ ದೇಶದ ಪ್ರಧಾನಿ ಹುದ್ದೆಗೆ ಆಯ್ಕೆಯಾದ ಬಿಳಿಯನಲ್ಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2009ರಲ್ಲಿ ತಮ್ಮ ಮಗಳು ಅಕ್ಷತಾ ಮೂರ್ತಿಯನ್ನು ಮದುವೆಯಾದ ರಿಷಿ ಸುನಕ್ ಅವರನ್ನು ನಾರಾಯಣಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಕೂಡ ಅಭಿನಂದಿಸಿದ್ದಾರೆ.

ಸುನಕ್ ಅವರು ಈ ವರ್ಷ ಬ್ರಿಟನ್‌ನ ಮೂರನೇ ಪ್ರಧಾನ ಮಂತ್ರಿಯಾಗಿ ಅಕ್ಟೋಬರ್ 25 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಅಕ್ಷತಾ ಮೂರ್ತಿ ಅವರು ಐಟಿ ಕಂಪನಿ ಇನ್ಫೋಸಿಸ್‌ನಲ್ಲಿ ಶೇ 0.91ರಷ್ಟು ಪಾಲನ್ನು ಹೊಂದಿದ್ದಾರೆ. ಇನ್ಫೋಸಿಸ್‌ನಲ್ಲಿ ತನ್ನ ದೀರ್ಘಕಾಲದ ಷೇರುಗಳು ಕೇವಲ ಹಣಕಾಸಿನ ಹೂಡಿಕೆಯಲ್ಲ. ಆದರೆ, ತನ್ನ ತಂದೆಯ ಕೆಲಸಕ್ಕೆ ಸಾಕ್ಷಿಯಾಗಿದೆ ಎಂದು ಅವರು ಏಪ್ರಿಲ್‌ನಲ್ಲಿ ಟ್ವೀಟ್ ಮಾಡಿದ್ದರು.

ಸುನಕ್ ಅವರನ್ನು ಅಭಿನಂದಿಸಿ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದು, '1947 ರಲ್ಲಿ ಭಾರತೀಯ ಸ್ವಾತಂತ್ರ್ಯ ಚಳುವಳಿ ತೀವ್ರಗೊಂಡ ಸಂದರ್ಭದಲ್ಲಿ ಬ್ರಿಟನ್ ಪ್ರಧಾನಿಯಾಗಿದ್ದ ವಿನ್‌ಸ್ಟನ್ ಚರ್ಚಿಲ್ ಅವರು '...ಎಲ್ಲಾ ಭಾರತೀಯ ನಾಯಕರು ಕಡಿಮೆ ಸಾಮರ್ಥ್ಯ ಹೊಂದಿದ್ದಾರೆ ಮತ್ತು ದೇಶವನ್ನು ಮುನ್ನಡೆಸುವ ಶಕ್ತಿಯಿಲ್ಲದವರು' ಎಂದು ಹೇಳಿದ್ದರು. ಇಂದು, ನಮ್ಮ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಬ್ರಿಟನ್ ಪ್ರಧಾನಿಯಾಗಿ ಭಾರತ ಮೂಲದವರು ಆಯ್ಕೆಯಾಗಿದ್ದಾರೆ. ಬದುಕು ಸುಂದರವಾಗಿದೆ...' ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com