ಮಧ್ಯಪ್ರದೇಶ: ಗುಂಡಿಕ್ಕಿ ದಲಿತ ಕುಟುಂಬದ ಹತ್ಯೆ!

32 ವರ್ಷದ ದಲಿತ ವ್ಯಕ್ತಿ ಹಾಗೂ ಆತನ ಪೋಷಕರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ದಮೋಹ್ ಜಿಲ್ಲೆಯಲ್ಲಿ ಅ.25 ರಂದು ನಡೆದಿದೆ.
ಅಪರಾಧ
ಅಪರಾಧ

ಭೋಪಾಲ್: 32 ವರ್ಷದ ದಲಿತ ವ್ಯಕ್ತಿ ಹಾಗೂ ಆತನ ಪೋಷಕರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ದಮೋಹ್ ಜಿಲ್ಲೆಯಲ್ಲಿ ಅ.25 ರಂದು ನಡೆದಿದೆ.

ಹತ್ಯೆ ಮಾಡಿದವರ ಪೈಕಿ ಓರ್ವನ ಪತ್ನಿಯನ್ನು ದಿಟ್ಟಿಸಿ ನೋಡಿದ್ದರಿಂದ ಆಕ್ರೋಶಗೊಂಡ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಮೃತ ವ್ಯಕ್ತಿಯ ಇಬ್ಬರು ಕಿರಿಯ ಸಹೋದರರಿಗೆ ಗಾಯಗಳಾಗಿದ್ದು, ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ದೇವ್ರನ್ ಗ್ರಾಮದಲ್ಲಿ ಬೆಳಿಗ್ಗೆ 6:30ಕ್ಕೆ ಈ ಘಟನೆ ನಡೆದಿದ್ದು, ಇದೇ ಗ್ರಾಮದ 6 ಮಂದಿ ದಾಳಿಕೋರರು ಈ ಕೃತ್ಯ ಎಸಗಿದ್ದಾರೆ" ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ದಾಳಿಯಲ್ಲಿ ಗಾಯಗೊಂಡಿದ್ದ ಹಿರಿಯ ದಂಪತಿಯ ಇನ್ನಿಬ್ಬರು ಮಕ್ಕಳು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಗರ್ ಝೋನ್ ನ ಐಜಿ ಅನುರಾಗ್ ಈ ಬಗ್ಗೆ ಮಾತನಾಡಿದ್ದು, ಸಂತ್ರಸ್ತ ವ್ಯಕ್ತಿ, ಘಟನೆಯ ಪ್ರಮುಖ ಆರೋಪಿ ಜಗದೀಶ್ ಪಟೇಲ್ ಎಂಬಾತನ ಪತ್ನಿಯನ್ನು ಆಗಾಗ್ಗೆ ದಿಟ್ಟಿಸಿ ನೋಡುತ್ತಿದ್ದ ಎಂಬ ಆರೋಪವಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com