ಸೇತುವೆ ನಿರ್ವಹಣೆಯಲ್ಲಿ ಪರಿಣಿತಿ ಇಲ್ಲದ ಓರೆವಾ ಗ್ರೂಪ್ ಗೆ ಈ ಗುತ್ತಿಗೆ ಸಿಕ್ಕಿದ್ದೇಗೆ?

ಗುಜರಾತ್‌ನ ಮೋರ್ಬಿಯಲ್ಲಿ ಕೇಬಲ್ ಸೇತುವೆ ಕುಸಿದು ಬಿದ್ದಿದ್ದು, ಸೇತುವೆ ದುರಸ್ತಿ ಮಾಡಿದ್ದ ಓರೆವಾ ಕಂಪನಿ ಕೆಂಗಣ್ಣಿಗೆ ಗುರಿಯಾಗಿದೆ.
ಸೇತುವೆ ಕುಸಿತ
ಸೇತುವೆ ಕುಸಿತ

ನವದೆಹಲಿ: ಗುಜರಾತ್‌ನ ಮೋರ್ಬಿಯಲ್ಲಿ ಕೇಬಲ್ ಸೇತುವೆ ಕುಸಿದು ಬಿದ್ದಿದ್ದು, ಸೇತುವೆ ದುರಸ್ತಿ ಮಾಡಿದ್ದ ಓರೆವಾ ಕಂಪನಿ ಕೆಂಗಣ್ಣಿಗೆ ಗುರಿಯಾಗಿದೆ. 

ಪ್ರಾಥಮಿಕ ತನಿಖೆಯಲ್ಲಿ ಆಘಾತಕಾರಿ ವಿಚಾರಗಳು ಬಯಲಾಗಿದೆ. CFL ಬಲ್ಬ್‌ಗಳು, ಗೋಡೆ ಗಡಿಯಾರಗಳು ಮತ್ತು ಇ-ಬೈಕ್‌ಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ ಓರೆವಾ ಗ್ರೂಪ್ ಗೆ ಸೇತುವೆ ನಿರ್ವಹಿಸುವ ಪರಿಣಿತಿ ಇರಲಿಲ್ಲ. ಹೀಗಿದ್ದರೂ ಆ ಸಂಸ್ಥೆಗೆ ಗುತ್ತಿಗೆ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಇನ್ನು ಕಂಪನಿಯು ಇದೀಗ ತನಿಖೆ ಆರಂಭಿಸಿವೆ. ಗುಜರಾತ್‌ನ ಮೊರ್ಬಿ ನಗರದ ಮಚು ನದಿಯಲ್ಲಿ ಕೇಬಲ್ ಸೇತುವೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇಂದು 141ಕ್ಕೆ ಏರಿಕೆಯಾಗಿದೆ.

ಓಧವ್ಜಿ ರಾಘವ್ಜಿ ಪಟೇಲ್ ಐದು ದಶಕಗಳ ಹಿಂದೆ ಓರೆವಾ ಗ್ರೂಪ್ ಅನ್ನು ಸ್ಥಾಪಿಸಿದ್ದರು. ಕಂಪನಿಯು ಪ್ರಸಿದ್ಧ ಅಜಂತಾ ಮತ್ತು ಒರ್ಪಾಟ್ ಬ್ರಾಂಡ್‌ಗಳ ಅಡಿಯಲ್ಲಿ ಗೋಡೆ ಗಡಿಯಾರಗಳನ್ನು ತಯಾರಿಸುತ್ತದೆ. ಪಟೇಲ್ ಈ ತಿಂಗಳ ಆರಂಭದಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದರು.
ಮೂರು ಗಾತ್ರದ ಆಯ್ಕೆಗಳಲ್ಲಿ ಲಭ್ಯವಿದೆ, ಈ ಲಗೇಜ್ ಬ್ಯಾಗ್ ಸೆಟ್, ಹಗುರವಾದ ಮತ್ತು ಬಲವಾದ, ಈ ಬ್ಯಾಗ್‌ಗಳಲ್ಲಿ ಹೆಚ್ಚುವರಿ ಪ್ಯಾಕಿಂಗ್ ಸ್ಥಳವನ್ನು ಪಡೆಯುತ್ತದೆ

800 ಕೋಟಿ ವಹಿವಾಟು ನಡೆಸುವ ಕಂಪನಿ
ಕಂಪನಿಯ ಮಾಲೀಕ ರಾಘವಜಿ ಪಟೇಲ್ ಅವರು 1971ರಲ್ಲಿ ತಮ್ಮ 45ನೇ ವಯಸ್ಸಿನಲ್ಲಿ ವ್ಯಾಪಾರದಲ್ಲಿ ಕೈ ಹಾಕುವ ಮೊದಲು ಶಾಲೆಯೊಂದರಲ್ಲಿ ವಿಜ್ಞಾನ ಶಿಕ್ಷಕರಾಗಿದ್ದರು. ಅಜಂತಾ ಗ್ರೂಪ್ ಸುಮಾರು 800 ಕೋಟಿ ಆದಾಯವನ್ನು ಹೊಂದಿದೆ. ಈಗ ಗೃಹೋಪಯೋಗಿ ಮತ್ತು ವಿದ್ಯುತ್ ಉಪಕರಣಗಳು, ವಿದ್ಯುತ್ ದೀಪಗಳು, ಕ್ಯಾಲ್ಕುಲೇಟರ್‌ಗಳು, ಸೆರಾಮಿಕ್ ಉತ್ಪನ್ನಗಳು ಮತ್ತು ಇ-ಬೈಕ್‌ಗಳನ್ನು ತಯಾರಿಸುತ್ತಿದೆ.

ಮಚು ನದಿಯ ಮೇಲಿನ ಕೇಬಲ್ ಸೇತುವೆಯನ್ನು ಏಳು ತಿಂಗಳ ಹಿಂದೆ ದುರಸ್ತಿಗಾಗಿ ಮುಚ್ಚಲಾಗಿತ್ತು. ಅದನ್ನು ಗುಜರಾತಿ ಹೊಸ ವರ್ಷದ ಸಂದರ್ಭದಲ್ಲಿ ಅಕ್ಟೋಬರ್ 26ರಂದು ಮತ್ತೆ ತೆರೆಯಲಾಯಿತು. ಇದು 'ತೂಗು ಸೇತುವೆ' ಎಂದು ಜನಪ್ರಿಯವಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ, ಮೋರ್ಬಿ ನಾಗರಿಕ ಸಂಸ್ಥೆಯಿಂದ ಸೇತುವೆಯ ದುರಸ್ತಿ ಮತ್ತು ನಿರ್ವಹಣೆಯ ಗುತ್ತಿಗೆಯನ್ನು ಓರೆವಾ ಗ್ರೂಪ್‌ಗೆ ನೀಡಲಾಯಿತು. ಇನ್ನು ಫಿಟ್ನೆಸ್ ಪ್ರಮಾಣ ಪತ್ರ ನೀಡದೆ ಸೇತುವೆಯನ್ನು ತೆರೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕಂಪನಿಯ ಆಡಳಿತವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅಪಘಾತದ ನಂತರ ಗುಂಪಿನ ವಕ್ತಾರರು ಸೇತುವೆಯ ಮಧ್ಯದಲ್ಲಿ ಹಲವಾರು ಜನರು ಅದನ್ನು ಅಕ್ಕಪಕ್ಕಕ್ಕೆ ತಿರುಗಿಸಲು ಪ್ರಯತ್ನಿಸುತ್ತಿದ್ದರಿಂದ ಸೇತುವೆ ಮುರಿದುಹೋಗಿದೆ ಎಂದು ಹೇಳಿದ್ದಾರೆ.

ನಿರ್ಮಾಣ ವ್ಯವಹಾರದಲ್ಲಿ ಅನುಭವವಿಲ್ಲ
ಗೋಡೆ ಗಡಿಯಾರಗಳ ತಯಾರಿಕೆಯೊಂದಿಗೆ ಪ್ರಾರಂಭವಾಗಿದ್ದ ಮೊರ್ಬಿ ಮೂಲದ ಒರೆವಾ ಗ್ರೂಪ್ ತನ್ನ ವ್ಯವಹಾರವನ್ನು ಹಲವಾರು ಕ್ಷೇತ್ರಗಳಿಗೆ ವಿಸ್ತರಿಸಿದೆ. ಒರೆವಾ ಗ್ರೂಪ್ ತನ್ನ ವೆಬ್‌ಸೈಟ್‌ನಲ್ಲಿ 6,000ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿರುವುದಾಗಿ ಹೇಳಿಕೊಂಡಿದೆ. ಆದರೆ ಅದರ ನಿರ್ಮಾಣ ವ್ಯವಹಾರವನ್ನು ಉಲ್ಲೇಖಿಸಿಲ್ಲ. ಕಡಿಮೆ ವೆಚ್ಚದಲ್ಲಿ ಉದ್ಯಮದಲ್ಲಿ ಗುರುತಿಸಿಕೊಂಡಿರುವ ಒರೆವಾ ಗ್ರೂಪ್ ತನ್ನ ಉತ್ಪನ್ನಗಳನ್ನು ದೇಶಾದ್ಯಂತ 55,000 ಪಾಲುದಾರರ ಮೂಲಕ ಮಾರಾಟ ಮಾಡುತ್ತಿದೆ. ಇದು 200 ಎಕರೆಗಳಷ್ಟು ವಿಸ್ತಾರವಾಗಿರುವ ಗುಜರಾತ್‌ನ ಕಚ್‌ನಲ್ಲಿರುವ ಸಮಖಿಯಲಿಯಲ್ಲಿ ಭಾರತದ ಅತಿದೊಡ್ಡ ಉತ್ಪಾದನಾ ಘಟಕವನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com