ವಿಡಿಯೋ: ದೆಹಲಿ ಕಂಟೋನ್ಮೆಂಟ್ ಬಳಿ ಗನ್ ತೋರಿಸಿ ವ್ಯಕ್ತಿಯೊಬ್ಬರ ಎಸ್‌ಯುವಿ ದರೋಡೆ ಮಾಡಿದ ಬೈಕ್ ಸವಾರರು

ರಾಷ್ಟ್ರ ರಾಜಧಾನಿಯ ಜನನಿಬಿಡ ರಸ್ತೆಯಲ್ಲಿ ಮೋಟಾರ್‌ಸೈಕಲ್‌ನಲ್ಲಿ ಬಂದ ಮೂವರು ವ್ಯಕ್ತಿಗಳು 35 ವರ್ಷದ ವ್ಯಕ್ತಿಯೊಬ್ಬರಿಂದ ಎಸ್‌ಯುವಿಯನ್ನು ದರೋಡೆ ಮಾಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಯ ಸ್ಕ್ರೀನ್ ಶಾಟ್
ಸಿಸಿಟಿವಿ ದೃಶ್ಯಾವಳಿಯ ಸ್ಕ್ರೀನ್ ಶಾಟ್

ನವದೆಹಲಿ: ರಾಷ್ಟ್ರ ರಾಜಧಾನಿಯ ಜನನಿಬಿಡ ರಸ್ತೆಯಲ್ಲಿ ಮೋಟಾರ್‌ಸೈಕಲ್‌ನಲ್ಲಿ ಬಂದ ಮೂವರು ವ್ಯಕ್ತಿಗಳು 35 ವರ್ಷದ ವ್ಯಕ್ತಿಯೊಬ್ಬರಿಂದ ಎಸ್‌ಯುವಿಯನ್ನು ದರೋಡೆ ಮಾಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ನೈಋತ್ಯ ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ಅಕ್ಟೋಬರ್ 29 ರ ಮುಂಜಾನೆ ಈ ಘಟನೆ ನಡೆದಿದೆ.

ನೈಋತ್ಯ ವಿಭಾಗದ ಡೆಪ್ಯುಟಿ ಕಮಿಷನರ್ ಆಫ್ ಪೋಲೀಸ್ ಮನೋಜ್ ಸಿ ಮಾತನಾಡಿ, ಝರೇರಾ ಗ್ರಾಮದ ಬಳಿ NH-8 ನಿಂದ ಕಾರನ್ನು ಕದ್ದೊಯ್ದಿರುವ ಬಗ್ಗೆ ಮಾಹಿತಿ ದೆಹಲಿ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಶನಿವಾರ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ದೂರು ಸ್ವೀಕರಿಸಲಾಗಿದೆ ಎಂದು ಹೇಳಿದರು.

ಉತ್ತರ ಪ್ರದೇಶದ ಮೀರತ್‌ನ ನಿವಾಸಿಯಾಗಿರುವ ದೂರುದಾರ ರಾಹುಲ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದು, ಮೂವರು ಅಪರಿಚಿತರು ಮೋಟಾರ್‌ಸೈಕಲ್‌ನಲ್ಲಿ ಬಂದು ತಮ್ಮ ಬಿಳಿ ಟೊಯೊಟಾ ಫಾರ್ಚುನರ್ ಕಾರನ್ನು ಬಂದೂಕು ತೋರಿಸಿ ದರೋಡೆ ಮಾಡಿದ್ದಾರೆ ಎಂದಿದ್ದಾರೆ.

ದೆಹಲಿ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 397 (ದರೋಡೆ, ಅಥವಾ ಡಕಾಯಿತಿ, ಸಾವು ಅಥವಾ ಘೋರವಾದ ಗಾಯ ಉಂಟುಮಾಡುವ ಪ್ರಯತ್ನ) ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 'ನಾವು ಘಟನೆ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಅಪರಾಧ ನಡೆದ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ' ಎಂದು ಅಧಿಕಾರಿ ತಿಳಿಸಿದ್ದಾರೆ.

ಈಮಧ್ಯೆ, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವುದು ಕಂಡುಬಂದಿದೆ. ಇದು ದರೋಡೆ ಹೇಗೆ ನಡೆದಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಘಟನೆಯ 130 ಸೆಕೆಂಡ್‌ಗಳ ವಿಡಿಯೋ ಕ್ಲಿಪ್‌ನಲ್ಲಿ, ದೂರುದಾರನು ತನ್ನ ವಾಹನವನ್ನು ಅಂದರೆ ಬಿಳಿ ಫಾರ್ಚುನರ್ ಅನ್ನು ಫಾರ್ಮಸಿ ಅಂಗಡಿಯ ಪಕ್ಕದಲ್ಲಿ ನಿಲ್ಲಿಸಿ ನಂತರ ಇಳಿಯುತ್ತಿರುವುದನ್ನು ಕಾಣಬಹುದು.

ಆತ ಕಾರಿನಿಂದ ಕೆಳಗಿಳಿದ ಕೂಡಲೇ, ಕೆಂಪು ಟೀಶರ್ಟ್ ಮತ್ತು ಕಪ್ಪು ಟೋಪಿ ಧರಿಸಿದ್ದ ದರೋಡೆಕೋರರಲ್ಲಿ ಒಬ್ಬಾತ , ಪಿಸ್ತೂಲ್ ಅನ್ನು ತೋರಿಸುತ್ತಾನೆ. ಸ್ವಲ್ಪ ಸಮಯದ ನಂತರ ಮತ್ತೋರ್ವ ಅಲ್ಲಿಗೆ ಬಂದು ಪಿಸ್ತೂಲ್ ಝಳಪಿಸುತ್ತಾನೆ. ಬಳಿಕ ಕಾರಿನೊಂದಿಗೆ ಪರಾರಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com