ಗುಜರಾತ್​: 141 ಮಂದಿ ಬಲಿ ಪಡೆದ ಸೇತುವೆ ನವೀಕರಿಸಿದ್ದ ಕಂಪನಿಯ ಇಬ್ಬರು ಸಿಬ್ಬಂದಿಯ ಬಂಧನ

141 ಮಂದಿಯನ್ನು ಬಲಿ ಪಡೆದ ಗುಜರಾತ್​ನ ಮೊರ್ಬಿಯ ತೂಗು ಸೇತುವೆಯನ್ನು ನವೀಕರಿಸಿದ್ದ ಕಂಪನಿಯ ಇಬ್ಬರು ಸಿಬ್ಬಂದಿಯನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುಜರಾತ್​ನ ಮೊರ್ಬಿಯ ಶತಮಾನಗಳಷ್ಟು ಹಳೆಯದಾದ ಸೇತುವೆ ನವೀಕರಣಗೊಂಡ ಐದು ದಿನಗಳಲ್ಲೇ ಕುಸಿದು ಬಿದ್ದ ಘಟನೆ ಭಾನುವಾರ ಸಂಜೆ 6-30 ರ ಸುಮಾರಿನಲ್ಲಿ ನಡೆದಿದೆ.
ಗುಜರಾತ್​ನ ಮೊರ್ಬಿಯ ಶತಮಾನಗಳಷ್ಟು ಹಳೆಯದಾದ ಸೇತುವೆ ನವೀಕರಣಗೊಂಡ ಐದು ದಿನಗಳಲ್ಲೇ ಕುಸಿದು ಬಿದ್ದ ಘಟನೆ ಭಾನುವಾರ ಸಂಜೆ 6-30 ರ ಸುಮಾರಿನಲ್ಲಿ ನಡೆದಿದೆ.

ಮೊರ್ಬಿ: 141 ಮಂದಿಯನ್ನು ಬಲಿ ಪಡೆದ ಗುಜರಾತ್​ನ ಮೊರ್ಬಿಯ ತೂಗು ಸೇತುವೆಯನ್ನು ನವೀಕರಿಸಿದ್ದ ಕಂಪನಿಯ ಇಬ್ಬರು ಸಿಬ್ಬಂದಿಯನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದುರಂತಕ್ಕೆ ಸಂಬಂಧಿಸಿಂತೆ ಇದು ಮೊದಲ ಬಂಧನವಾಗಿದ್ದು, ಸೇತುವೆಯನ್ನು ನವೀಕರಿಸಿದ ಒರೆವಾ ಕಂಪನಿಯ ಇಬ್ಬರು ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ಅವರು ಒರೆವಾ ಕಂಪನಿಯ ಮಧ್ಯಮ ಮಟ್ಟದ ಉದ್ಯೋಗಿಗಳು ಎಂದು ಮೂಲಗಳು ತಿಳಿಸಿವೆ.

ಸೇತುವೆ ದುರಂತದ ನಂತರ ಕಂಪನಿಯ ಹಿರಿಯ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ, ಇದು ದೇಶ ಕಂಡ ಅತ್ಯಂತ ಘೋರ ದುರಂತವಾಗಿದೆ.

ಫಿಟ್‌ನೆಸ್ ಪ್ರಮಾಣಪತ್ರ ಪಡೆಯದೆ ಮತ್ತು ಅವಧಿಗೂ ಮುನ್ನವೇ ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ ಎಂಬ ಆರೋಪಗಳು ಒರೆವಾ ವಿರುದ್ಧ ಕೇಳಿಬಂದಿವೆ.

ಗುಜರಾತ್ ರಾಜಧಾನಿ ಗಾಂಧಿನಗರದಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಮೋರ್ಬಿಯಲ್ಲಿ ಭಾನುವಾರ ನಡೆದ ಈ  ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆಯಾಗಿದ್ದು, ಇದುವರೆಗೆ 177ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com