

ನವದೆಹಲಿ: 2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ತೀಸ್ತಾ ಸೆಟಲ್ವಾಡ್ ಅವರು ಗಲಭೆಗಳ ತನಿಖೆಗಾಗಿ ರಚಿಸಲಾದ ನಾನಾವತಿ ಆಯೋಗದ ಮುಂದೆ ಸಾಕ್ಷಿಗಳ ಸುಳ್ಳು ಹೇಳಿಕೆ ರಚಿಸಿದ ಮತ್ತು ಆಯೋಗದ ಮುಂದೆ ಸಲ್ಲಿಸಿದ ಆರೋಪ ಹೊತ್ತಿದ್ದಾರೆ.
ಮಧ್ಯಂತರ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್, ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಕೇಳಿದೆ. ಸಾಮಾನ್ಯ ಜಾಮೀನು ಅರ್ಜಿಯನ್ನು ಹೈಕೋರ್ಟ್ ಪರಿಗಣಿಸುವವರೆಗೆ ತನ್ನ ಪಾಸ್‌ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ನೀಡುವಂತೆಯೂ ಸುಪ್ರೀಂ ಆದೇಶಿಸಿದೆ.
ಜೂನ್ 26ರಿಂದ ಬಂಧನದಲ್ಲಿರುವ ತೀಸ್ತಾ ಸೆಟಲ್ವಾಡ್ ಅವರು ಸೆಷನ್ಸ್ ನ್ಯಾಯಾಲಯ ಮತ್ತು ಹೈಕೋರ್ಟ್ ಮಧ್ಯಂತರ ಜಾಮೀನು ನಿರಾಕರಿಸಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ತೀಸ್ತಾ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ತೀಸ್ತಾ ಸೆಟಲ್ವಾಡ್ ಎರಡು ತಿಂಗಳಿನಿಂದ ಬಂಧನದಲ್ಲಿದ್ದಾರೆ ಮತ್ತು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿರುವ ವಸ್ತುನಿಷ್ಠ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಮಧ್ಯಂತರ ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ವಾದಿಸಿದರು.
ಗುಜರಾತ್ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ತೀಸ್ತಾ ಸೆಟಲ್ವಾಡ್ ಭಾಗಿಯಾಗಿರುವ ಬಗ್ಗೆ ಎಫ್‌ಐಆರ್‌ನಲ್ಲಿ ಜಾಹೀರಾಗಿರುವುದನ್ನು ಹೊರತುಪಡಿಸಿ ಸಾಕಷ್ಟು ಅಂಶಗಳಿವೆ. ತೀಸ್ತಾ ಸೆಟಲ್ವಾಡ್ ಅವರ ಆದ್ಯತೆಯ ಅರ್ಜಿಯು ಸದ್ಯ ಹೈಕೋರ್ಟ್‌ನಲ್ಲಿ ಪರಿಗಣನೆಗೆ ಬಾಕಿ ಇದೆ. ಹಾಗಾಗಿ ಈ ವಿಷಯವನ್ನು ಹೈಕೋರ್ಟ್ ಪರಿಗಣಿಸಲು ಅವಕಾಶ ನೀಡಬೇಕು ಎಂದು ವಾದಿಸಿದರು.
ಎರಡೂ ಕಡೆಯ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, 'ಕಸ್ಟಡಿ ವಿಚಾರಣೆ ಸೇರಿದಂತೆ ತನಿಖೆಯ ಅಗತ್ಯ ಅಂಶಗಳು ಪೂರ್ಣಗೊಂಡ ನಂತರ, ಈ ವಿಷಯವನ್ನು ಹೈಕೋರ್ಟ್ ಪರಿಗಣಿಸುವವರೆಗೆ ಮಧ್ಯಂತರ ಜಾಮೀನು ನೀಡುವುದು ಸಂಕೀರ್ಣತೆಯನ್ನು ಪಡೆದುಕೊಳ್ಳುತ್ತದೆ. ನಮ್ಮ ದೃಷ್ಟಿಯಲ್ಲಿ, ಮೇಲ್ಮನವಿದಾರನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅರ್ಹನಾಗಿದ್ದಾನೆ. ಸಾಲಿಸಿಟರ್ ಜನರಲ್ ವಾದಿಸಿದಂತೆ ಈ ವಿಷಯವು ಇನ್ನೂ ಹೈಕೋರ್ಟ್‌ನಲ್ಲಿ ಪರಿಗಣನೆಗೆ ಬಾಕಿಯಿದೆ. ಆದ್ದರಿಂದ ನಾವು ಮೇಲ್ಮನವಿದಾರರನ್ನು
Advertisement