2002 ಗುಜರಾತ್ ಗಲಭೆ: ಎರಡು ತಿಂಗಳ ನಂತರ ತೀಸ್ತಾ ಸೆಟಲ್ವಾಡ್ ಜೈಲಿನಿಂದ ಬಿಡುಗಡೆ
2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರು ಶನಿವಾರ ಜಾಮೀನಿನ ಮೇಲೆ ಜೈಲಿನಿಂದ...
Published: 04th September 2022 01:06 AM | Last Updated: 04th September 2022 01:06 AM | A+A A-

ತೀಸ್ತಾ ಸೆಟಲ್ವಾಡ್
ಅಹಮದಾಬಾದ್: 2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರು ಶನಿವಾರ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜೂನ್ 26 ರಂದು ಬಂಧನಕ್ಕೊಳಗಾಗಿದ್ದ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್ ನಿನ್ನೆ ಮಧ್ಯಂತರ ಜಾಮೀನು ನೀಡಿತ್ತು. ಇಂದು ಅವರನ್ನು ಸಬರಮತಿ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.
ಇದನ್ನು ಓದಿ: 2002ರ ಗುಜರಾತ್ ಗಲಭೆ ಪ್ರಕರಣ: ತೀಸ್ತಾ ಸೆಟಲ್ವಾಡ್ಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ, ಜಾಮೀನು ಪ್ರಕ್ರಿಯೆಗಳಿಗಾಗಿ ತೀಸ್ತಾ ಅವರನ್ನು ಸೆಷನ್ಸ್ ನ್ಯಾಯಾಧೀಶ ವಿ ಎ ರಾಣಾ ಅವರ ಮುಂದೆ ಹಾಜರುಪಡಿಸಲಾಯಿತು.
ಸೆಷನ್ಸ್ ನ್ಯಾಯಾಲಯವು 25,000 ರೂಪಾಯಿಗಳ ವೈಯಕ್ತಿಕ ಬಾಂಡ್ ಒದಗಿಸುವಂತೆ ಮತ್ತು ತನ್ನ ಅನುಮತಿಯಿಲ್ಲದೆ ಭಾರತ ಬಿಟ್ಟು ಹೋಗದಂತೆ ಸೂಚಿಸಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪಟೇಲ್ ಅವರು ತಿಳಿಸಿದ್ದಾರೆ.