ಅಪಘಾತದಲ್ಲಿ ಮೃತಪಟ್ಟ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಬಗ್ಗೆ ಎಷ್ಟು ಗೊತ್ತು?

ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಕಾರು ಭಾನುವಾರ ಮುಂಬೈನ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಸೈರಸ್ ಮಿಸ್ತ್ರಿ
ಸೈರಸ್ ಮಿಸ್ತ್ರಿ

ಮುಂಬೈ: ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಕಾರು ಭಾನುವಾರ ಮುಂಬೈನ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸೈರಸ್ ಮಿಸ್ತ್ರಿ ಅವರ ನಿಧನಕ್ಕೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸೈರಸ್ ಮಿಸ್ತ್ರಿಯವರ ಅಕಾಲಿಕ ನಿಧನ ಆಘಾತಕಾರಿಯಾಗಿದೆ. ಅವರು ಭಾರತದ ಆರ್ಥಿಕ ಪರಾಕ್ರಮದಲ್ಲಿ ನಂಬಿಕೆಯಿರುವ ಭರವಸೆಯ ವ್ಯಾಪಾರ ನಾಯಕರಾಗಿದ್ದರು. ಅವರ ನಿಧನದಿಂದ ವಾಣಿಜ್ಯ ಮತ್ತು ಉದ್ಯಮ ಲೋಕಕ್ಕೆ ದೊಡ್ಡ ನಷ್ಟವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ. ಅವರ ಆತ್ಮಕೆ ಶಾಂತಿ ಸಿಗಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಸೈರಸ್ ಮಿಸ್ತ್ರಿ ಬಗ್ಗೆ ಪ್ರಮುಖ ಸಂಗತಿಗಳು ಇಲ್ಲಿವೆ:
* ಸೈರಸ್ ಮಿಸ್ತ್ರಿ ಅವರು ದಿವಂಗತ ಪಲ್ಲೊಂಜಿ ಮಿಸ್ತ್ರಿಯವರ ಕಿರಿಯ ಪುತ್ರರಾಗಿದ್ದರು . ಅವರು ಶಾಪೂರ್ಜಿ ಪಲ್ಲೊಂಜಿ ಸಮೂಹದ ಮಾಲೀಕ ಮತ್ತು ಟಾಟಾ ಸಮೂಹದ ಅತಿದೊಡ್ಡ ಪಾಲುದಾರರಾಗಿದ್ದರು.

* 2012 ರಲ್ಲಿ 75 ನೇ ವರ್ಷಕ್ಕೆ ಕಾಲಿಟ್ಟ ರತನ್ ಟಾಟಾ ಅವರು ಟಾಟಾ ಸನ್ಸ್  ಕಾರ್ಯಕಾರಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಅವರ ಸ್ಥಾನವನ್ನು ಸೈರಸ್ ಮಿಸ್ತ್ರಿ ಅಲಂಕರಿಸಿಕೊಂಡರು.  ಮಿಸ್ತ್ರಿ ಅವರು 2006 ರಲ್ಲಿ ಟಾಟಾ ಗ್ರೂಪ್‌ಗೆ ನಿರ್ದೇಶಕರಾಗಿ ಸೇರಿಕೊಂಡರು ಮತ್ತು ಈ ಹಿಂದೆ ಹಲವಾರು ಇತರ ಟಾಟಾ ಕಂಪನಿಗಳ ಮಂಡಳಿಗಳಲ್ಲಿ ಕಾರ್ಯನಿರ್ವಾಹಕೇತರ ಹುದ್ದೆಗಳನ್ನು ಹೊಂದಿದ್ದರು. ಕಳೆದ 142 ವರ್ಷಗಳ ಸಂಸ್ಥೆಯ ಅಸ್ತಿತ್ವದಲ್ಲಿ ಟಾಟಾ ಕುಟುಂಬದ ಹೊರಗಿನ ಎರಡನೇ ವ್ಯಕ್ತಿಯಾಗಿ ಮಿಸ್ತ್ರಿ ಅವರು ಸಂಸ್ಥೆಯನ್ನು ಮುನ್ನಡೆಸಿದವರಾಗಿದ್ದರು.  ಆದರೆ ಅವರು ಕೇವಲ ನಾಲ್ಕು ವರ್ಷಗಳ ಕಾಲ ತಮ್ಮ ಹುದ್ದೆಯನ್ನು ಉಳಿಸಿಕೊಂಡಿದ್ದರು.

* ಅಕ್ಟೋಬರ್ 2016 ರಲ್ಲಿ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಯಿತು. ತಿಂಗಳುಗಳ ನಂತರ ಡಿಸೆಂಬರ್ 2016 ರಲ್ಲಿ ಎರಡು ಮಿಸ್ತ್ರಿ ಕುಟುಂಬದ ಬೆಂಬಲಿತ ಹೂಡಿಕೆ ಸಂಸ್ಥೆಗಳು–ಸೈರಸ್ ಇನ್ವೆಸ್ಟ ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸ್ಟರ್ಲಿಂಗ್ ಇನ್ವೆಸ್ಟಮೆಂಟ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ – ಟಾಟಾ ಸನ್ಸ್ ನ ದುರುಪಯೋಗವನ್ನು ಆರೋಪಿಸಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಮೊರೆ ಹೋಗಿದ್ದವು. ಫೆಬ್ರವರಿ 2017 ರಲ್ಲಿ,  ಮಿಸ್ತ್ರಿಯನ್ನು ಟಾಟಾ ಗ್ರೂಪ್ ಸಂಸ್ಥೆಗಳ ಹಿಡುವಳಿ ಕಂಪನಿಯಾದ ಟಾಟಾ ಸನ್ಸ್ ಮಂಡಳಿಯ ನಿರ್ದೇಶಕ ಸ್ಥಾನದಿಂದ ತೆಗೆದುಹಾಕಲಾಯಿತು.

* ಮಿಸ್ತ್ರಿ ಅವರು ಟಾಟಾ ಸನ್ಸ್ ನ ನಿಯೋಜಿತ ಅಧ್ಯಕ್ಷರಾಗಿ ನೇಮಕಗೊಳ್ಳುವ ಮೊದಲು ನಿರ್ಮಾಣದ ದೈತ್ಯ ಶಾಪೂರ್ಜಿ ಪಲ್ಲೋಂಜಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅವರು 1991 ರಲ್ಲಿ ಶಾಪೂರ್ಜಿ ಪಲ್ಲೋಂಜಿ ಗ್ರೂಪ್‌ಗೆ ನಿರ್ದೇಶಕರಾಗಿ ಸೇರಿದರು.

* ಜುಲೈ 4, 1968 ರಂದು ಜನಿಸಿದ ಸೈರಸ್ ಮಿಸ್ತ್ರಿ ಅವರು ಲಂಡನ್‌ನ ಇಂಪೀರಿಯಲ್ ಕಾಲೇಜ್ ಆಫ್ ಸೈನ್ಸ್, ಟೆಕ್ನಾಲಜಿ ಮತ್ತು ಮೆಡಿಸಿನ್‌ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ಅವರು ಲಂಡನ್ ಬ್ಯುಸಿನೆಸ್ ಸ್ಕೂಲ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com