ಆಂಧ್ರ ಪ್ರದೇಶ: ಸಹಪಾಠಿಯ ಹುಟ್ಟುಹಬ್ಬದ ಚಾಕೊಲೇಟ್ ತಿಂದು 12 ಶಾಲಾ ಮಕ್ಕಳು ಅಸ್ವಸ್ಥ
ಕಾಕಿನಾಡದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಯೊಬ್ಬನ ಹುಟ್ಟುಹಬ್ಬದ ಅಂಗವಾಗಿ ಶಾಲೆಯಲ್ಲಿ ವಿತರಿಸಲಾಗಿದ್ದ ಚಾಕೊಲೇಟ್‌ಗಳನ್ನು ಸೇವಿಸಿ 12 ಮಕ್ಕಳು ಅಸ್ವಸ್ಥಗೊಂಡಿದ್ದಾರೆ.
Published: 06th September 2022 04:43 PM | Last Updated: 06th September 2022 04:43 PM | A+A A-

ಪ್ರಾತಿನಿಧಿಕ ಚಿತ್ರ
ವಿಜಯವಾಡ: ಕಾಕಿನಾಡದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಯೊಬ್ಬನ ಹುಟ್ಟುಹಬ್ಬದ ಅಂಗವಾಗಿ ಶಾಲೆಯಲ್ಲಿ ವಿತರಿಸಲಾಗಿದ್ದ ಚಾಕೊಲೇಟ್‌ಗಳನ್ನು ಸೇವಿಸಿ 12 ಮಕ್ಕಳು ಅಸ್ವಸ್ಥಗೊಂಡಿದ್ದಾರೆ.
ಲಭ್ಯವಾದ ಮಾಹಿತಿ ಪ್ರಕಾರ, 4, 5 ಮತ್ತು 6ನೇ ತರಗತಿಗಳ ಸುಮಾರು 25 ಮಕ್ಕಳು ಚಾಕೊಲೇಟ್‌ಗಳನ್ನು ಸೇವಿಸಿದ್ದಾರೆ. ಅವರಲ್ಲಿ 12 ಮಂದಿ ವಾಕರಿಕೆ ಮತ್ತು ವಾಂತಿಯಿಂದ ಅಸ್ವಸ್ಥಗೊಂಡಿದ್ದಾರೆ.
ಆರಂಭದಲ್ಲಿ, ಹತ್ತಿರದ ಕಾರ್ಖಾನೆಯಿಂದ ಅಥವಾ ಶಾಲೆಯ ಲ್ಯಾಬ್‌ನಿಂದ ಅನಿಲ ಸೋರಿಕೆಯಾಗಿ ವಿದ್ಯಾರ್ಥಿಗಳು ಅಸ್ವಸ್ಥರಾಗಿರಬಹುದು ಎಂದು ಶಂಕಿಸಲಾಗಿತ್ತು. ಆತಂಕಗೊಂಡ ಪೋಷಕರು ಶಾಲೆಗೆ ಧಾವಿಸಿ ತಮ್ಮ ಮಕ್ಕಳನ್ನು ಮನೆಗಳಿಗೆ ಕರೆದೊಯ್ದರು.
ಇದನ್ನೂ ಓದಿ: ಬಳ್ಳಾರಿಯ ಅಂಕನಲ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 50 ಮಂದಿ ಅಸ್ವಸ್ಥ: ಜಿಲ್ಲೆಯಲ್ಲಿ 15 ದಿನಗಳಲ್ಲಿ ಎರಡನೇ ಪ್ರಕರಣ
ಅಸ್ವಸ್ಥಗೊಂಡಿದ್ದ 12 ವಿದ್ಯಾರ್ಥಿಗಳನ್ನು ಆರಂಭದಲ್ಲಿ ಖಾಸಗಿ ಆಸ್ಪತ್ರೆಗೆ ಮತ್ತು ಅಲ್ಲಿಂದ ಉತ್ತಮ ಚಿಕಿತ್ಸೆಗಾಗಿ ಕಾಕಿನಾಡದ ಸರ್ಕಾರಿ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.