
ಅನಂತ್ ನಾಗ್ ಎನ್ಕೌಂಟರ್
ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರು ಮತ್ತು ಭಾರತೀಯ ಸೇನೆ ನಡುವೆ ಎನ್ಕೌಂಟರ್ ಆರಂಭವಾಗಿದ್ದು, ಇಬ್ಬರು ಭಯೋತ್ಪಾದಕರನ್ನು ಸೇನೆ ಹೊಡೆದುರುಳಿಸಿದೆ.
“ಅನಂತ್‌ನಾಗ್ ಜಿಲ್ಲೆಯ ಪೋಷ್ಕ್ರೀರಿ ಪ್ರದೇಶದಲ್ಲಿ ಎನ್ಕೌಂಟರ್ ಆರಂಭವಾಗಿದ್ದು, ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಪ್ರವೃತ್ತವಾಗಿವೆ. ಎನ್ಕೌಂಟರ್ ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸಂಸದ ರಂಜೀತಾ ಕೋಲಿ ಆಪ್ತ ಸಹಾಯಕನಿಗೆ ಗುಂಡಿಕ್ಕಿ ಹತ್ಯೆ!
ಸಾವನ್ನಪ್ಪಿದ ಭಯೋತ್ಪಾದಕರನ್ನು ಡ್ಯಾನಿಶ್ ಭಟ್ ಅಲಿಯಾಸ್ ಕೊಕಬ್ ದುರೀ ಮತ್ತು ಬಶರತ್ ನಬಿ ಎಂದು ಗುರುತಿಸಲಾಗಿದೆ, ಇಬ್ಬರೂ ನಿಷೇಧಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಗೆ ಸೇರಿದವರಾಗಿದ್ದಾರೆ ಎಂದು ಹೇಳಲಾಗಿದೆ.
Killed terrorists identified as Danish Bhat aka Kokab Duree & Basharat Nabi, both affiliated with proscribed terror outfit HM. Both were involved in killing of one TA personnel Saleem on 9 April 2021 & killing of two civilians on 29 May 2021 in Jablipora: ADGP Kashmir https://t.co/fCuKl30Qt7
— ANI (@ANI) September 6, 2022
ಕಳೆದ 9 ಏಪ್ರಿಲ್ 2021 ರಂದು ಒಬ್ಬ ಟಿಎ ಸಿಬ್ಬಂದಿ ಸಲೀಮ್ ಹತ್ಯೆ ಮತ್ತು 29 ಮೇ 2021 ರಂದು ಜಬ್ಲಿಪೋರಾದಲ್ಲಿ ಇಬ್ಬರು ನಾಗರಿಕರ ಹತ್ಯೆಯಲ್ಲಿ ಈ ಇಬ್ಬರೂ ಉಗ್ರರು ಭಾಗಿಯಾಗಿದ್ದರು ಎಂದು ಕಾಶ್ಮೀರ ಎಡಿಜಿಪಿ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಗಡಿಯಲ್ಲಿನ ಪರಿಸ್ಥಿತಿ ಮೇಲೆ ಭಾರತ-ಚೀನಾ ಸಂಬಂಧ ಅವಲಂಬನೆ: ಚೀನಾಗೆ ಕೇಂದ್ರ ಸರ್ಕಾರ ಎಚ್ಚರಿಕೆ
ಉಗ್ರರ ಇರುವಿಕೆ ಪತ್ತೆ ಬಳಿಕ ಪ್ರದೇಶವನ್ನು ಸುತ್ತುವರೆದ ಸೇನೆ ಕಾರ್ಯಾಚರಣೆ ಆರಂಭಿಸಿತು. ಪ್ರಸ್ತುತ ಎನ್ಕೌಂಟರ್ ಕಾರ್ಯಾಚರಣೆ ಮುಂದುವರೆದಿದ್ದು, ಪ್ರದೇಶದಲ್ಲಿ ಮತ್ತಷ್ಟು ಉಗ್ರರು ಇರುವ ಶಂಕೆ ಇದೆ. ಹೀಗಾಗಿ ಸೇನೆ ತೀವ್ರ ಶೋಧ ಕಾರ್ಯ ನಡೆಸುತ್ತಿದೆ.