ಭಾರತ್ ಜೋಡೋ ಯಾತ್ರೆ: ಮುಂದಿನ 150 ದಿನಗಳ ಕಾಲ ಕಂಟೈನರ್‌ನಲ್ಲಿ ತಂಗಲಿದ್ದಾರೆ ರಾಹುಲ್ ಗಾಂಧಿ!

ಇಂದು ತಮಿಳುನಾಡಿನ ಕನ್ಯಾಕುಮಾರಿಯಿಂದ 'ಭಾರತ್ ಜೋಡೋ ಯಾತ್ರೆ' ಆರಂಭಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಂದಿನ 150 ದಿನಗಳ ಕಾಲ ಕಂಟೈನರ್‌ನಲ್ಲಿ ಇರಲಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಂಗಲಿರುವ ಕಂಟೈನರ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಂಗಲಿರುವ ಕಂಟೈನರ್

ನವದೆಹಲಿ: ಇಂದು ತಮಿಳುನಾಡಿನ ಕನ್ಯಾಕುಮಾರಿಯಿಂದ 'ಭಾರತ್ ಜೋಡೋ ಯಾತ್ರೆ' ಆರಂಭಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಂದಿನ 150 ದಿನಗಳ ಕಾಲ ಕಂಟೈನರ್‌ನಲ್ಲಿ ಇರಲಿದ್ದಾರೆ.

ಮುಂಬರುವ 2024ರ ಚುನಾವಣೆಯಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಎದುರಿಸಲು ಕಾಂಗ್ರೆಸ್‌ನ 'ಮಾಸ್ಟರ್‌ ಸ್ಟ್ರೋಕ್' ಎಂದು ಪರಿಗಣಿಸಲಾಗುತ್ತಿರುವ 'ಭಾರತ್ ಜೋಡೋ ಯಾತ್ರೆ'ಯನ್ನು ಬುಧವಾರ ಕಾಂಗ್ರೆಸ್ ಪ್ರಾರಂಭಿಸುತ್ತಿದೆ. 3,570 ಕಿಲೋಮೀಟರ್ ಉದ್ದದ ಈ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲಿದ್ದು, ರಾಹುಲ್ ಗಾಂಧಿ ಸುಮಾರು 150 ದಿನಗಳ ಕಾಲ ಪಾಳ್ಗೊಳ್ಳಲಿದ್ದಾರೆ.

ಪಕ್ಷವು ರಾಷ್ಟ್ರವ್ಯಾಪಿ ಈ ಯಾತ್ರೆಯನ್ನು ಪ್ರಾರಂಭಿಸುತ್ತಿದ್ದಂತೆ, ರಾಹುಲ್ ಗಾಂಧಿಯವರ ವಸತಿ ಮತ್ತು ಉಪಚಾರದ ಬಗ್ಗೆ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ರಾಹುಲ್ ಗಾಂಧಿಯವರು ಯಾವುದೇ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿಲ್ಲ. ಬದಲಿಗೆ ಈ ಯಾತ್ರೆಯ ಸಂಪೂರ್ಣ ಪ್ರಯಾಣವನ್ನು ಸರಳವಾಗಿ ಪೂರ್ಣಗೊಳಿಸುತ್ತಾರೆ ಎಂದು ಪಕ್ಷ ಸ್ಪಷ್ಟಪಡಿಸಿದೆ.

ರಾಹುಲ್ ಗಾಂಧಿ ಅವರು ಮುಂದಿನ 150 ದಿನಗಳ ಕಾಲ ಕಂಟೈನರ್‌ನಲ್ಲಿ ಉಳಿಯಲಿದ್ದಾರೆ. ಕೆಲವು ಕಂಟೈನರ್‌ಗಳಲ್ಲಿ ಮಲಗುವ ಹಾಸಿಗೆಗಳು, ಶೌಚಾಲಯಗಳು ಮತ್ತು ಹವಾನಿಯಂತ್ರಣಗಳನ್ನು ಸಹ ಅಳವಡಿಸಲಾಗಿದೆ. ಪ್ರಯಾಣದ ಸಮಯದಲ್ಲಿ, ಅನೇಕ ಪ್ರದೇಶಗಳಲ್ಲಿ ತಾಪಮಾನ ಮತ್ತು ಪರಿಸರ ಭಿನ್ನವಾಗಿರುತ್ತದೆ. ಸ್ಥಳ ಬದಲಾವಣೆಯೊಂದಿಗೆ ತೀವ್ರವಾದ ಶಾಖ ಮತ್ತು ತೇವಾಂಶವನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆಗಳನ್ನು ಮಾಡಲಾಗಿದೆ.

ಅಂತಹ ಸುಮಾರು 60 ಕಂಟೈನರ್‌ಗಳನ್ನು ಸಿದ್ಧಪಡಿಸಿ ಕನ್ಯಾಕುಮಾರಿಗೆ ಕಳುಹಿಸಲಾಗಿದೆ. ರಾತ್ರಿಯ ವಿಶ್ರಾಂತಿಗಾಗಿ ಹಳ್ಳಿಯ ಆಕಾರದಲ್ಲಿ ಪ್ರತಿದಿನ ಕಂಟೈನರ್ ಅನ್ನು ಹೊಸ ಸ್ಥಳದಲ್ಲಿ ನಿಲ್ಲಿಸಲಾಗುತ್ತದೆ. ರಾಹುಲ್ ಗಾಂಧಿಯವರೊಂದಿಗೆ ಇರುವ ಪೂರ್ಣಾವಧಿಯ ಯಾತ್ರಿಗಳು ಒಟ್ಟಿಗೆ ಊಟ ಮಾಡುತ್ತಾರೆ ಮತ್ತು ಹತ್ತಿರ ಇರುತ್ತಾರೆ ಎಂದು ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ ಈ ಭಾರತ್ ಜೋಡೋ ಯಾತ್ರೆಯನ್ನು ಸಾಮಾನ್ಯ ಜನರೊಂದಿಗೆ ಸಂಪರ್ಕಿಸುವ ಮಾರ್ಗವೆಂದು ಪರಿಗಣಿಸಿದ್ದಾರೆ. ಹೀಗಾಯಿಯೇ ಅವರು ಈ ಸಂಪೂರ್ಣ ಪ್ರಯಾಣವನ್ನು ಯಾವುದೇ ಆಡಂಬರವಿಲ್ಲದೆ ಸರಳ ರೀತಿಯಲ್ಲಿ ಪೂರ್ಣಗೊಳಿಸಲು ಬಯಸುತ್ತಾರೆ. ರಾಹುಲ್ ಗಾಂಧಿ ಇದನ್ನು 'ಪ್ರಯಾಣ ಎಂದು ಕರೆಯುತ್ತಿದ್ದಾರೆ. ಆದರೆ, ರಾಜಕೀಯ ವಿಶ್ಲೇಷಕರು ಇದನ್ನು 2024ರ ಚುನಾವಣಾ ತಯಾರಿ ಎಂದು ಪರಿಗಣಿಸುತ್ತಾರೆ' ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com