ಸ್ಮೃತಿ ಇರಾನಿ ಆರೋಪದ ನಂತರ, ಕಾಂಗ್ರೆಸ್‌ನ ‘ಫ್ಯಾಕ್ಟ್ ಚೆಕ್’ ವಿಡಿಯೋ ವೈರಲ್

ಕಳೆದ ವಾರ ಕನ್ಯಾಕುಮಾರಿಯಿಂದ ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ಯಾತ್ರೆ’ ಆರಂಭಿಸುವ ವೇಳೆ ರಾಹುಲ್ ಗಾಂಧಿ ಅವರು ಸ್ವಾಮಿ ವಿವೇಕಾನಂದರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಕಾಂಗ್ರೆಸ್ ‘ಫ್ಯಾಕ್ಟ್ ಚೆಕ್’ ವಿಡಿಯೋ ಮೂಲಕ ತಿರುಗೇಟು ನೀಡಿದೆ.
ಸ್ಮೃತಿ ಇರಾನಿ
ಸ್ಮೃತಿ ಇರಾನಿ

ನವದೆಹಲಿ: ಕಳೆದ ವಾರ ಕನ್ಯಾಕುಮಾರಿಯಿಂದ ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ಯಾತ್ರೆ’ ಆರಂಭಿಸುವ ವೇಳೆ ರಾಹುಲ್ ಗಾಂಧಿ ಅವರು ಸ್ವಾಮಿ ವಿವೇಕಾನಂದರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಕಾಂಗ್ರೆಸ್ ‘ಫ್ಯಾಕ್ಟ್ ಚೆಕ್’ ವಿಡಿಯೋ ಮೂಲಕ ತಿರುಗೇಟು ನೀಡಿದೆ.

ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ವಾಗ್ದಾಳಿ ಮತ್ತು ವಿವೇಕಾನಂದರ ಪ್ರತಿಮೆಗೆ ರಾಹುಲ್ ಗಾಂಧಿ ಅವರು ಗೌರವ ಸಲ್ಲಿಸುವ ಸೈಡ್ ಬೈ ಸೈಡ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಹಲವಾರು ಕಾಂಗ್ರೆಸ್ ನಾಯಕರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆಯಾಗಿರುವ ಸ್ಮೃತಿ ಇರಾನಿಯವರನ್ನು ಗುರಿಯಾಗಿಸಿ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ವಕ್ತಾರ ಪವನ್ ಖೇರಾ ಟ್ವೀಟ್ ಮಾಡಿ: “ಎಂಥ ಸಿಲ್ಲಿ ಕೆಲಸ. ದೇವರು ಮೂರ್ಖ ಆತ್ಮಗಳನ್ನು ಆಶೀರ್ವದಿಸಲಿ” ಎಂದಿದ್ದಾರೆ.

ಸ್ಮೃತಿ ಇರಾನಿಯವರ ಕಾಮೆಂಟ್‌ಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, “ಬಿಜೆಪಿಯು ಸುಳ್ಳುಗಳನ್ನು ಪ್ರಚಾರ ಮಾಡುವುದನ್ನು ನಂಬುತ್ತದೆ. ಸ್ಮೃತಿ ಇರಾನಿ ಅವರಿಗೆ ವಿಷಯಗಳನ್ನು ಹೆಚ್ಚು ಸ್ಪಷ್ಟತೆಯಿಂದ ನೋಡಲು ಸಹಾಯ ಮಾಡಲು ಹೊಸ ಕನ್ನಡಕಗಳ ಅಗತ್ಯವಿದ್ದರೆ, ನಾವು ಅವರಿಗೆ ಕನ್ನಡಕವೊಂದನ್ನು ಒದಗಿಸಿ ಸಹಾಯ ಮಾಡಬಹುದು” ಎಂದಿದ್ದಾರೆ.

ಸೆಪ್ಟೆಂಬರ್ 10 ರಂದು ಕರ್ನಾಟಕ ರಾಜ್ಯ ಸರ್ಕಾರದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಇಂದು ನಾನು ಕಾಂಗ್ರೆಸ್ ಪಕ್ಷವನ್ನು ಕೇಳಲು ಬಯಸುತ್ತೇನೆ, ನೀವು ಭಾರತವನ್ನು ಏಕೀಕರಣಗೊಳಿಸಲು ಕನ್ಯಾಕುಮಾರಿಯಿಂದ ಯಾತ್ರೆ ಪ್ರಾರಂಭಿಸುತ್ತಿದ್ದರೆ ಕನಿಷ್ಠ ಸ್ವಾಮಿ ವಿವೇಕಾನಂದರನ್ನು ಕಡೆಗಣಿಸಿರುವುದಕ್ಕೆ ನಾಚಿಕೆಯಾಗುವುದಿಲ್ಲವೇ. ವಿವೇಕಾನಂದರನ್ನು ಗೌರವಿಸುವುದು ರಾಹುಲ್ ಗಾಂಧಿಗೆ ಸ್ವೀಕಾರಾರ್ಹವಲ್ಲ ಎಂದು ತೋರುತ್ತದೆ ಎಂದು ವಾಗ್ದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com