ಅಕ್ಷಯ್ ಕುಮಾರ್ ಜಾಹೀರಾತು ಟ್ವೀಟ್ ಮಾಡಿದ ನಿತಿನ್ ಗಡ್ಕರಿ; ಭಾರೀ ಟೀಕೆಗೆ ಗುರಿ!
ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುವ ಸುರಕ್ಷಿತ ಕಾರುಗಳನ್ನು ಪ್ರಚಾರ ಮಾಡಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಟ್ವೀಟ್ ಮಾಡಿದ ನಟ ಅಕ್ಷಯ್ ಕುಮಾರ್ ಅವರನ್ನು ಒಳಗೊಂಡ ಜಾಹೀರಾತು ವರದಕ್ಷಿಣೆಯನ್ನು ಉತ್ತೇಜಿಸುವಂತೆ ತೋರುತ್ತದೆ ಎಂದು ಟ್ವಿಟ್ಟರ್‌ನಲ್ಲಿ ಟೀಕೆ ಕೇಳಿಬರುತ್ತಿದೆ.
Published: 12th September 2022 05:48 PM | Last Updated: 12th September 2022 07:47 PM | A+A A-

ಅಕ್ಷಯ್ ಕುಮಾರ್
ನವದೆಹಲಿ: ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುವ ಸುರಕ್ಷಿತ ಕಾರುಗಳನ್ನು ಪ್ರಚಾರ ಮಾಡಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಟ್ವೀಟ್ ಮಾಡಿದ ನಟ ಅಕ್ಷಯ್ ಕುಮಾರ್ ಅವರನ್ನು ಒಳಗೊಂಡ ಜಾಹೀರಾತು ವರದಕ್ಷಿಣೆಯನ್ನು ಉತ್ತೇಜಿಸುವಂತೆ ತೋರುತ್ತದೆ ಎಂದು ಟ್ವಿಟ್ಟರ್‌ನಲ್ಲಿ ಟೀಕೆ ಕೇಳಿಬರುತ್ತಿದೆ.
ಮದುವೆಯ ನಂತರ ಕೇವಲ ಎರಡು ಏರ್‌ಬ್ಯಾಗ್‌ಗಳಿರುವ ಕಾರಿನಲ್ಲಿ ತನ್ನ ಮಗಳನ್ನು ವರನೊಂದಿಗೆ ಕಳುಹಿಸುತ್ತಿದ್ದ ವಧುವಿನ ತಂದೆಯೊಂದಿಗೆ ಪೊಲೀಸ್ ಅಧಿಕಾರಿಯಂತೆ ವೇಷ ಧರಿಸಿರುವ ಅಕ್ಷಯ್ ಕುಮಾರ್ ಅವರನ್ನು ಜಾಹೀರಾತು ತೋರಿಸುತ್ತದೆ.
6 एयरबैग वाले गाड़ी से सफर कर जिंदगी को सुरक्षित बनाएं।#राष्ट्रीय_सड़क_सुरक्षा_2022#National_Road_Safety_2022 @akshaykumar pic.twitter.com/5DAuahVIxE
— Nitin Gadkari (@nitin_gadkari) September 9, 2022
ಕಾರನ್ನು ವಧುವಿನ ತಂದೆ ಉಡುಗೊರೆಯಾಗಿ ನೀಡಿದ್ದಾರೆ ಎಂಬುದನ್ನು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಳ್ಳುತ್ತಿದ್ದು, ಸರ್ಕಾರವು 'ವರದಕ್ಷಿಣೆಯನ್ನು ಉತ್ತೇಜಿಸುತ್ತಿದೆ' ಎಂದು ಆರೋಪಿಸಿದೆ.
This is such a problematic advertisement. Who passes such creatives? Is the government spending money to promote the safety aspect of a car or promoting the evil& criminal act of dowry through this ad? https://t.co/0QxlQcjFNI
— Priyanka Chaturvedi (@priyankac19) September 11, 2022
ಈ ತಿಂಗಳ ಆರಂಭದಲ್ಲಿ ಮುಂಬೈ ಬಳಿ ನಡೆದ ಅಪಘಾತದಲ್ಲಿ ಉದ್ಯಮಿ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ ನಂತರ ರಸ್ತೆ ಸುರಕ್ಷತೆ, ಸೀಟ್‌ಬೆಲ್ಟ್ ಮತ್ತು ಏರ್‌ಬ್ಯಾಗ್‌ಗಳ ಬಳಕೆ ತೀವ್ರ ಗಮನಕ್ಕೆ ಬಂದಿದೆ.