ಹೈದ್ರಾಬಾದ್: ಗಣೇಶೋತ್ಸವ ಲಡ್ಡುಗಳು 60 ಲಕ್ಷ ರೂ. ದಾಖಲೆ ಮೊತ್ತಕ್ಕೆ ಹರಾಜು!
ಪೂಜೆಯ ಸಮಯದಲ್ಲಿ ಪವಿತ್ರ ನೈವೇದ್ಯವಾಗಿ ನೀಡುವ ಗಣೇಶ ಲಡ್ಡೂಗಳು ಹೈದರಾಬಾದ್‌ನಲ್ಲಿ ಈ ಬಾರಿ ಹೆಚ್ಚಿನ ಬೆಲೆ ಗಳಿಸಿವೆ. ಹಬ್ಬದ ಋತುವಿನಲ್ಲಿ ಸಿಹಿ ನೈವೇದ್ಯಕ್ಕಾಗಿ ಇಡುವ ಲಡ್ಡುಗಳು ಸಾಂಪ್ರದಾಯಿಕ ಹರಾಜಿನಲ್ಲಿ ದಾಖಲೆಯ ಮೊತ್ತವನ್ನು ಗಳಿಸಿವೆ
Published: 12th September 2022 08:24 PM | Last Updated: 13th September 2022 02:19 PM | A+A A-

ಲಡ್ಡುವಿನ ಚಿತ್ರ
ಹೈದರಾಬಾದ್: ಪೂಜೆಯ ಸಮಯದಲ್ಲಿ ಪವಿತ್ರ ನೈವೇದ್ಯವಾಗಿ ನೀಡುವ ಗಣೇಶ ಲಡ್ಡೂಗಳು ಹೈದರಾಬಾದ್‌ನಲ್ಲಿ ಈ ಬಾರಿ ಹೆಚ್ಚಿನ ಬೆಲೆ ಗಳಿಸಿವೆ. ಹಬ್ಬದ ಋತುವಿನಲ್ಲಿ ಸಿಹಿ ನೈವೇದ್ಯಕ್ಕಾಗಿ ಇಡುವ ಲಡ್ಡುಗಳು ಸಾಂಪ್ರದಾಯಿಕ ಹರಾಜಿನಲ್ಲಿ ದಾಖಲೆಯ ಮೊತ್ತವನ್ನು ಗಳಿಸಿವೆ. ಈ ವರ್ಷ, ನಗರದ ಗೇಟೆಡ್ ಸಮುದಾಯವಾದ ರಿಚ್ಮಂಡ್ ವಿಲ್ಲಾ ಸನ್ ಸಿಟಿಯಲ್ಲಿ 10-12 ಕೆಜಿ ಲಡ್ಡುಗಳನ್ನು ಸುಮಾರು 100 ನಿವಾಸಿಗಳು ಹಣ ಪಾವತಿಸಿದ ನಂತರ ದಾಖಲೆಯ 60.8 ಲಕ್ಷ ರೂ. ಗಳಿಸಿದೆ.
ಮರಕಥೆ ಶ್ರೀ ಲಕ್ಷ್ಮೀ ಗಣಪತಿ ಉತ್ಸವದ ಗಣೇಶ ಲಡ್ಡು ಸುಮಾರು 46 ಲಕ್ಷ ರೂಪಾಯಿಗೆ ಮಾರಾಟವಾದರೆ, ಬಾಳಾಪುರ ಗಣೇಶ ಲಡ್ಡು 24.60 ಲಕ್ಷ ರೂ.ಗೆ ಮಾರಾಟವಾಗಿದೆ. ವಾಸ್ತವವಾಗಿ ಈ ಸಾಂಪ್ರದಾಯಿಕ ಹರಾಜು 1994 ರಲ್ಲಿ ಬಾಳಾಪುರದ ಪಂಡಲ್‌ನಲ್ಲಿ ಪ್ರಾರಂಭವಾಯಿತು, ಸ್ಥಳೀಯ ರೈತ ಕೋಲನ್ ಮೋಹನ್ ರೆಡ್ಡಿ ಮಂಗಳಕರ ಲಡ್ಡೂಗಾಗಿ 450 ರೂ. ಬಿಡ್ ಮಾಡಿದ್ದರು.
ಮರಕಥಾ ಶ್ರೀ ಲಕ್ಷ್ಮೀ ಗಣಪತಿ ಉತ್ಸವದ ಲಡ್ಡೂ 45,99,999 ರೂಪಾಯಿಗೆ ಹರಾಜಾಗಿದ್ದು ಈ ಲಡ್ಡುಗೆ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಪಾವತಿಸಿದ ಅತಿ ಹೆಚ್ಚು ವೈಯಕ್ತಿಕ ಬಿಡ್ ಆಗಿದೆ. ಈ ವರ್ಷ ಬಾಲಾಪುರ ಲಡ್ಡುವನ್ನು ಸ್ಥಳೀಯ ರೈತ ವಿ ಲಕ್ಷ್ಮ ರೆಡ್ಡಿ 24.60 ಲಕ್ಷಕ್ಕೆ ಖರೀದಿಸಿದ್ದರು. ಹರಾಜಿನಿಂದ ಬಂದ ಹಣವನ್ನು ಬಾಳಾಪುರದ ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುವುದು ಎಂದು ಉತ್ಸವವನ್ನು ಆಯೋಜಿಸಿದ್ದ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು.
ಕಾನಜಿಗುಡ ಮರಕಥಾದ ಶ್ರೀ ಲಕ್ಷ್ಮೀ ಗಣಪತಿ ಲಡ್ಡೂವನ್ನು ಯಶಸ್ವಿಯಾಗಿ ಬಿಡ್ ಮಾಡಿದ ದಂಪತಿಗಳಾದ ಗೀತಪ್ರಿಯ ಮತ್ತು ವೆಂಕಟರಾವ್ ಅವರು ಲಡ್ಡುನೊಂದಿಗೆ ಪೋಸ್ ನೀಡುತ್ತಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನ ವಿಶ್ವವಿದ್ಯಾನಿಲಯದೊಂದಿಗೆ ಸಂಬಂಧ ಹೊಂದಿರುವ ವೆಂಕಟ ರಾವ್ ಅವರು ತಮ್ಮ ತಲೆಯ ಮೇಲೆ ಲಡ್ಡೂವನ್ನು ಹೊತ್ತುಕೊಂಡಿರುವುದು ಕಂಡುಬಂದಿದೆ. ಹರಾಜಿನಲ್ಲಿ ಬಂದ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.