ಉತ್ತರ ಪ್ರದೇಶ: ಐಎಎಸ್ ಅಧಿಕಾರಿ ಸಹಿ ನಕಲಿ ಮಾಡಿ ಸಾಲ ಪಡೆದಿದ್ದ ಬಿಜೆಪಿ ಮುಖಂಡನ ಬಂಧನ

ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ಐಎಎಸ್ ಅಧಿಕಾರಿಯಾಗಿರುವ ತನ್ನ ಸೋದರಳಿಯನ ನಕಲಿ ಸಹಿ ಮಾಡಿ ಬರೋಬ್ಬರಿ 1.62 ಕೋಟಿ ರೂಪಾಯಿ ಸಾಲ ಪಡೆದ ಆರೋಪದ ಮೇಲೆ ಬಿಜೆಪಿ ನಾಯಕರೊಬ್ಬರನ್ನು ಬಂಧಿಸಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಖನೌ: ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ಐಎಎಸ್ ಅಧಿಕಾರಿಯಾಗಿರುವ ತನ್ನ ಸೋದರಳಿಯನ ನಕಲಿ ಸಹಿ ಮಾಡಿ ಬರೋಬ್ಬರಿ 1.62 ಕೋಟಿ ರೂಪಾಯಿ ಸಾಲ ಪಡೆದ ಆರೋಪದ ಮೇಲೆ ಬಿಜೆಪಿ ನಾಯಕರೊಬ್ಬರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಆರೋಪಿ ಬಿಜೆಪಿ ನಾಯಕನನ್ನು ರವಿ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಸೋಮವಾರ ಸಂಜೆ ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತ್ಪಾಲ್ ಅಂಟಿಲ್ ಹೇಳಿದ್ದಾರೆ.

ಐಎಎಸ್ ಅಧಿಕಾರಿ ಅಭಯ್ ಸಿಂಗ್ ಅವರು 2020ರಲ್ಲಿ ತನ್ನ ಸೋದರಮಾವ ರವಿ ಪ್ರತಾಪ್ ಸಿಂಗ್ ವಿರುದ್ಧ ವಂಚನೆ ದೂರು ದಾಖಲಿಸಿದ್ದರು.

ತನ್ನ ಸೋದರಮಾವ ತನ್ನ ಸಹಿಯನ್ನು ನಕಲಿ ಮಾಡಿ ದಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಿಂದ ಸಾಲ ಪಡೆದಿದ್ದಾರೆ ಎಂದು ಅಭಯ್ ಸಿಂಗ್ ದೂರಿನಲ್ಲಿ ಆರೋಪಿಸಿದ್ದರು.

ತನಿಖೆಯ ಸಂದರ್ಭದಲ್ಲಿ ಈ ಸಹಿಗಳು ನಕಲಿ ಎಂದು ಕಂಡುಬಂದಿದೆ ಎಂದು ಸಲ್ಪಾಲ್ ಅಂಟಿಲ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com