ಸೈರಸ್ ಮಿಸ್ತ್ರಿ ಸಾವು: ಮರ್ಸಿಡಿಸ್ ಬೆಂಜ್ ತಜ್ಞರು ಭಾರತಕ್ಕೆ ಆಗಮನ

ಮರ್ಸಿಡಿಸ್ ಬೆಂಜ್  ಸಂಸ್ಥೆಯ ಸ ತಜ್ಞರ ತಂಡವು ಸೈರಸ್ ಮಿಸ್ತ್ರಿ ಮೃತಪಟ್ಟ ಕಾರಿನ ಹೆಚ್ಚಿನ ತನಿಖೆ ಮತ್ತು ತಪಾಸಣೆಗಾಗಿ ಹಾಂಗ್ ಕಾಂಗ್‌ನಿಂದ ಥಾಣೆ ತಲುಪಿದೆ.
ಸೈರಸ್ ಮಿಸ್ತ್ರಿ ಸಾವು
ಸೈರಸ್ ಮಿಸ್ತ್ರಿ ಸಾವು

ಮುಂಬೈ: ಮರ್ಸಿಡಿಸ್ ಬೆಂಜ್  ಸಂಸ್ಥೆಯ ಸ ತಜ್ಞರ ತಂಡವು ಸೈರಸ್ ಮಿಸ್ತ್ರಿ ಮೃತಪಟ್ಟ ಕಾರಿನ ಹೆಚ್ಚಿನ ತನಿಖೆ ಮತ್ತು ತಪಾಸಣೆಗಾಗಿ ಹಾಂಗ್ ಕಾಂಗ್‌ನಿಂದ ಥಾಣೆ ತಲುಪಿದೆ.

54 ವರ್ಷದ ಮಿಸ್ತ್ರಿ ಮತ್ತು ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ ಸೆಪ್ಟೆಂಬರ್ 4ರಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಅವರ ಮರ್ಸಿಡಿಸ್ ಜಿಎಲ್‌ಸಿ 220ಡಿ 4ಮ್ಯಾಟಿಕ್ ಕಾರಿನಲ್ಲಿ ಪಯಣಿಸುತ್ತಿದ್ದರು. ಆ ವೇಳೆ ಅವರಿದ್ದ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರು.  ಸಹಪ್ರಯಾಣಿರಾದ ಅನಾಹಿತಾ ಪಂಡೋಲೆ (55) ಮತ್ತು ಅವರ ಪತಿ ಡೇರಿಯಸ್ ಪಾಂಡೋಲೆ (60) ಗಾಯಗೊಂಡಿದ್ದರು.  ಅವರನ್ನು  ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ವಾರ, ಜರ್ಮನಿಯ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್-ಬೆನ್ಜ್ ಹೇಳಿಕೆಯನ್ನು ಬಿಡುಗಡೆ ಮಾಡಿತು ಮತ್ತು ಸೈರಸ್ ಮಿಸ್ತ್ರಿ ಅವರ ಸಾವಿಗೆ ಕಾರಣವಾದ ಕಾರು ಅಪಘಾತದ ತನಿಖೆಯ  ಕುರಿತು ಅಧಿಕಾರಿಗಳೊಂದಿಗೆ ಸಹಕರಿಸಲಾಗುತ್ತಿದೆ  ಎಂದು ಹೇಳಿತ್ತು.

ಗ್ರಾಹಕರ ಗೌಪ್ಯತೆಯನ್ನು ಗೌರವಿಸುವ ಜವಾಬ್ದಾರಿಯುತ ಬ್ರ್ಯಾಂಡ್ ಆಗಿ, ನಮ್ಮ ತಂಡವು ಅಧಿಕಾರಿಗಳೊಂದಿಗೆ ಸಾಧ್ಯವಾದಷ್ಟು ಸಹಕರಿಸುತ್ತಿದೆ ಮತ್ತು ಅಗತ್ಯವಿರುವಂತೆ ನಾವು ಅವರಿಗೆ ಯಾವುದೇ ಸ್ಪಷ್ಟೀಕರಣವನ್ನು ನೇರವಾಗಿ ನೀಡುತ್ತೇವೆ, ”ಎಂದು ವಾಹನ ತಯಾರಕರು ಹೇಳಿಕೆಯಲ್ಲಿ ತಿಳಿಸಿದ್ದರು. ತಮ್ಮ ಸಂಸ್ಥೆ ವಾಹನಗಳನ್ನು ಇತ್ತೀಚಿನ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನಗಳೊಂದಿಗೆ ಸಜ್ಜುಗೊಳಿಸುವಾಗ ಜವಾಬ್ದಾರಿಯುತ ತಯಾರಕರಾಗಿ ರಸ್ತೆ ಸುರಕ್ಷತೆಯ  ಬಗ್ಗೆ ಕಾಳಜಿ ಹೊಂದಲಾಗಿರುತ್ತದೆ ಎಂದು ಹೇಳಲಾಗಿತ್ತು.

'ದುರದೃಷ್ಟಕರ ರಸ್ತೆ ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ಪಾಂಡೋಲೆ ಅವರ ಅಕಾಲಿಕ ನಿಧನದಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಅದೇ ಸಮಯದಲ್ಲಿ ಅನಾಹಿತಾ ಪಾಂಡೋಲ್ ಮತ್ತು ಡೇರಿಯಸ್ ಪಾಂಡೋಲೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ನಮಗೆ ಸಂತೋಷವಾಗಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ' ಎಂದು  ಕಂಪನಿ ಹೇಳಿದೆ., ಕಂಪನಿಯ ತಂಡವು ವಾಹನದ ಡೇಟಾವನ್ನು ಸಂಗ್ರಹಿಸಿದೆ, ಅದನ್ನು ಹೆಚ್ಚಿನ ವಿಶ್ಲೇಷಣೆಗಾಗಿ ಡೀಕ್ರಿಪ್ಟ್ ಮಾಡಲಾಗುತ್ತದೆ.

ಅಪಘಾತದ ಕಾರಣವನ್ನು ಕಂಡುಹಿಡಿಯಲು ಕಾರಿನ ಟೈರ್ ಒತ್ತಡ ಮತ್ತು ಬ್ರೇಕ್ ದ್ರವದ ಮಟ್ಟ ಮುಂತಾದ ಇತರ ವಿವರಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು  ಪೊಲೀಸ್ ಮಹಾನಿರೀಕ್ಷಕ ಸಂಜಯ್ ಮೋಹಿತೆ ತಿಳಿಸಿದ್ದಾರೆ.  ವಾಹನದ ನೋಂದಣಿ 2017 GLC 220d 4MATIC ಆಗಿತ್ತು, ಇದು ಒಟ್ಟಾರೆಯಾಗಿ ಏಳು ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಆಲ್-ವೀಲ್ ಡ್ರೈವ್ ಮಾದರಿಯ ಇತ್ತೀಚಿನ ಆವೃತ್ತಿಯು ಬೆಲೆ  68 ಲಕ್ಷ ರೂ. ಆಗಿದೆ.

ಇದು 'ಪ್ರೀ-ಸೇಫ್ ಸಿಸ್ಟಮ್' ಅನ್ನು ಹೊಂದಿದೆ,  ಮರ್ಸಿಡಿಸ್ ಬೆಂಜ್ ಇಂಡಿಯಾ ವೆಬ್‌ಸೈಟ್‌ನ ಪ್ರಕಾರ, GLC ಯ ಪೂರ್ವ-ಸುರಕ್ಷಿತ ವ್ಯವಸ್ಥೆಯು ಸನ್ನಿಹಿತವಾದ ಅಪಘಾತದಲ್ಲಿ ಬ್ರೇಕಿಂಗ್ ಅಥವಾ ಸ್ಕಿಡ್ಡಿಂಗ್ ಸಮಯದಲ್ಲಿ ಪ್ರಯಾಣಿಕರ ಮುಂದಕ್ಕೆ ಸ್ಥಳಾಂತರವನ್ನು ಕಡಿಮೆ ಮಾಡುತ್ತದೆ

ನಾಲ್ವರು ಗುಜರಾತ್‌ನಿಂದ ಮುಂಬೈಗೆ ತೆರಳುತ್ತಿದ್ದಾಗ ಸೂರ್ಯ ನದಿಯ ಸೇತುವೆಯ ಮೇಲೆ ಮಾರಣಾಂತಿಕ ಅಪಘಾತ ಸಂಭವಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಮೃತರು ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮೊದಲು ಹೇಳಿದ್ದರು, ಚಾಲಕನ ಸಕಾಲಿಕ ತೀರ್ಮಾನದ ದೋಷ,  ಅತಿವೇಗ  ಅಪಘಾತಕ್ಕೆ ಕಾರಣವಾಯಿತು ಎಂದು ಅಭಿಪ್ರಾಯಪಟ್ಟಿದ್ದರು. ಮೇಲ್ನೋಟಕ್ಕೆ, ಅಪಘಾತ ಸಂಭವಿಸಿದಾಗ ಐಷಾರಾಮಿ ಕಾರು ವೇಗವಾಗಿ ಚಲಿಸುತ್ತಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com