ಸ್ಟಿಂಗ್ ವೀಡಿಯೊ ನಿಜವಾಗಿದ್ದರೆ 4 ದಿನದೊಳಗೆ ನನ್ನನ್ನು ಬಂಧಿಸಿ: ಸಚಿವ ಸಿಸೋಡಿಯಾ ಸವಾಲು

ಬಿಜೆಪಿಯು ಮದ್ಯದ ಹಗರಣಕ್ಕೆ ಸಂಬಂಧಿಸಿದ ಸ್ಟಿಂಗ್ ವೀಡಿಯೊವನ್ನು ಹಂಚಿಕೊಂಡ ನಂತರ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗುರುವಾರ ಪ್ರತಿಪಕ್ಷ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ

ನವದೆಹಲಿ: ಬಿಜೆಪಿಯು ಮದ್ಯದ ಹಗರಣಕ್ಕೆ ಸಂಬಂಧಿಸಿದ ಸ್ಟಿಂಗ್ ವೀಡಿಯೊವನ್ನು ಹಂಚಿಕೊಂಡ ನಂತರ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗುರುವಾರ ಪ್ರತಿಪಕ್ಷ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ಬಿಜೆಪಿಗೆ ಬಹಿರಂಗ ಸವಾಲೆಸೆದಿರುವ ಸಿಸೋಡಿಯಾ, ಸ್ಟಿಂಗ್ ವಿಡಿಯೋ ನಿಜವಾಗಿದ್ದರೆ ಬಂಧಿಸಲು ಸಿದ್ಧ ಎಂದು ಹೇಳಿದ್ದಾರೆ.

ಗುರುವಾರ ಬಿಜೆಪಿಯವರು ಪತ್ರಿಕಾಗೋಷ್ಠಿಯಲ್ಲಿ ಸ್ಟಿಂಗ್ ವಿಡಿಯೋವನ್ನು ತೋರಿಸಿದ್ದು, ವೀಡಿಯೊದಲ್ಲಿ, ಮದ್ಯದ ಹಗರಣ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಅಮಿತ್ ಅರೋರಾ, ದೆಹಲಿಯ ಎಎಪಿ ಸರ್ಕಾರವು ಉದ್ದೇಶಪೂರ್ವಕವಾಗಿ ಕೆಲವರನ್ನು ಅಬಕಾರಿ ನೀತಿಯಿಂದ ದೂರವಿಟ್ಟು ಕೆಲವು ವ್ಯಕ್ತಿಗಳಿಗೆ ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಹೊಂದಲು ಸಹಾಯ ಮಾಡಿದೆ. ನೀತಿಯನ್ನು ಈಗ ಹಿಂಪಡೆಯಲಾಗಿದೆ ಎಂದು ಹೇಳುತ್ತಿದ್ದಾರೆ.

ಕುಟುಕು ವಿಡಿಯೋವನ್ನು ಪ್ರದರ್ಶಿಸಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, 'ಆಮ್ ಆದ್ಮಿ ಪಕ್ಷದ ಹಗರಣ ಮುನ್ನೆಲೆಗೆ ಬಂದಿದೆ. ಈ ಸ್ಟಿಂಗ್ ನಲ್ಲಿ ಆರೋಪಿ ಸಂಖ್ಯೆ 9 ಅಮಿತ್ ಅರೋರಾ ಇಡೀ ಸಮೀಕ್ಷೆಯನ್ನು ಬಹಿರಂಗಪಡಿಸಿದ್ದಾರೆ' ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮನೀಶ್ ಸಿಸೋಡಿಯಾ, ತನಿಖಾ ಸಂಸ್ಥೆಯು ಬಿಜೆಪಿಯ ವಿಸ್ತೃತ ಘಟಕದಂತೆ ವರ್ತಿಸುತ್ತಿರುವುದರಿಂದ ಬಿಜೆಪಿ ಈ ಸ್ಟಿಂಗ್ ವಿಡಿಯೋವನ್ನು ಸಿಬಿಐಗೆ ಸಲ್ಲಿಸಬೇಕು ಎಂದು ಹೇಳಿದರು.

ಸಿಬಿಐ ನನ್ನ ನಿವಾಸದ ಮೇಲೆ ದಾಳಿ ಮಾಡಿ ನನ್ನ ಲಾಕರ್ ಅನ್ನು ಪರಿಶೀಲಿಸಿದೆ, ಆದರೆ ಅವರಿಗೆ ಏನೂ ಸಿಕ್ಕಿಲ್ಲ, ಸಿಬಿಐ ಇದರ ತನಿಖೆ ನಡೆಸಬೇಕು ಮತ್ತು ಇದು ನಿಜವೆಂದು ಕಂಡುಬಂದರೆ ನಾಲ್ಕು ದಿನಗಳಲ್ಲಿ ನನ್ನನ್ನು ಬಂಧಿಸಬೇಕು, ಸೋಮವಾರದೊಳಗೆ ನನ್ನನ್ನು ಬಂಧಿಸದಿದ್ದರೆ, ನಂತರ ಈ ಸ್ಟಿಂಗ್ ನಕಲಿ ಎಂದು ಒಪ್ಪಿಕೊಂಡು ಕ್ಷಮೆಯಾಚಿಸಬೇಕು ಮತ್ತು ನನ್ನ ವಿರುದ್ಧ ಸಂಚು ರೂಪಿಸಿದೆ ಎಂದು ಪಿಎಂಒ ಒಪ್ಪಿಕೊಳ್ಳಬೇಕು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com