ಕ್ಯಾಂಪಸ್ ನಲ್ಲಿ ಪ್ರತಿಭಟನೆ; ಸಪೂರಾ ಜರ್ಗರ್ ಸೇರಿ ಮೂವರಿಗೆ ಪ್ರವೇಶ ನಿರ್ಬಂಧಿಸಿದ ಜಾಮಿಯಾ 

ಅಪ್ರಸ್ತುತ ಹಾಗೂ ಆಕ್ಷೇಪಾರ್ಹ ವಿಷಯಗಳಿಗೆ ವಿವಿಯ ಕ್ಯಾಂಪಸ್ ನಲ್ಲಿ ಪ್ರತಿಭಟನೆ ನಡೆಸಿದ 2020 ರ ಗಲಭೆ ಆರೋಪಿ ಸಪೂರಾ ಜರ್ಗರ್ ಸೇರಿ ತನ್ನ ಮೂವರು ಮಾಜಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ರವೇಶಿಸದಂತೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ನಿರ್ಬಂಧ ವಿಧಿಸಿದೆ.
ಸಫೂರಾ ಜರ್ಗರ್

ಸೆ.14 ರಂದು ಮುಖ್ಯ ಪ್ರಾಕ್ಟರ್ ಆದೇಶಕ್ಕೆ ಸಹಿ ಹಾಕಿದ್ದು,  ಕ್ಯಾಂಪಸ್ ನಲ್ಲಿ ಶಾಂತಿಯುತ ಶೈಕ್ಷಣಿಕ ವಾತಾವರಣವನ್ನು ಕಾಯ್ದುಕೊಳ್ಳುವುದಕ್ಕಾಗಿ ತನ್ನ ಮೂವರು ಮಾಜಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ರವೇಶಿಸುವುದರಿಂದ ನಿರ್ಬಂಧ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

2019 ರ ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಸಿಎಎ ಕಾಯ್ದೆ ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಜರ್ಗರ್ ಸುದ್ದಿಯಾಗಿದ್ದರು. 

ಜರ್ಗರ್ ವಿದ್ಯಾರ್ಥಿಗಳನ್ನು ತನ್ನ ದುರುದ್ದೇಶಪೂರಿತ ರಾಜಕೀಯ ಅಜೆಂಡಾಗಾಗಿ ಮುಗ್ಧ ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಆದೇಶದಲ್ಲಿ ವಿವಿ ಕಠಿಣವಾಗಿ ಬರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com