ಜಾರ್ಖಂಡ್‌: ಕಳಪೆ ರಸ್ತೆ; ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾರ್ಖಂಡ್ ಶಾಸಕಿಯ ಕೆಸರಿನ ಸ್ನಾನ! ವಿಡಿಯೋ

ಜಾರ್ಖಂಡ್‌ನ ಕಾಂಗ್ರೆಸ್ ಶಾಸಕಿಯೊಬ್ಬರು ಬುಧವಾರ ಗೊಡ್ಡಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಹದಗೆಟ್ಟ ಕೆಸರು ತುಂಬಿದ ನೀರಿನ ಗುಂಡಿಯಲ್ಲಿ ಕುಳಿತು ವಿಭಿನ್ನವಾಗಿ ಪ್ರತಿಭಟಿಸಿದರು.
ಜಾರ್ಖಂಡ್ ಶಾಸಕಿಯ ಕೆಸರಿನ ಸ್ನಾನ!ಜಾರ್ಖಂಡ್ ಶಾಸಕಿಯ ಕೆಸರಿನ ಸ್ನಾನ
ಜಾರ್ಖಂಡ್ ಶಾಸಕಿಯ ಕೆಸರಿನ ಸ್ನಾನ!ಜಾರ್ಖಂಡ್ ಶಾಸಕಿಯ ಕೆಸರಿನ ಸ್ನಾನ

ಜಾರ್ಖಂಡ್: ಜಾರ್ಖಂಡ್‌ನ ಕಾಂಗ್ರೆಸ್ ಶಾಸಕಿಯೊಬ್ಬರು ಬುಧವಾರ ಗೊಡ್ಡಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಹದಗೆಟ್ಟ ಕೆಸರು ತುಂಬಿದ ನೀರಿನ ಗುಂಡಿಯಲ್ಲಿ ಕುಳಿತು ವಿಭಿನ್ನವಾಗಿ ಪ್ರತಿಭಟಿಸಿದರು. ಈ ವೇಳೆ ರಸ್ತೆಯ ತಕ್ಷಣದ ದುರಸ್ತಿಗೆ ಒತ್ತಾಯಿಸಿದರು.ಮಹಾಗಾಮಾದ ಶಾಸಕಿ ದೀಪಿಕಾ ಪಾಂಡೆ ಸಿಂಗ್ ಅವರು ತಮ್ಮ ಮೇಲೆ ಕೆಸರು ನೀರನ್ನು ಸುರಿದುಕೊಂಡು ದೊಡ್ಡ ಗುಂಡಿಗಳನ್ನು ಮುಚ್ಚಲು ದುರಸ್ತಿ ಪ್ರಯತ್ನಗಳನ್ನು ಕೈಗೊಳ್ಳದ ಹೊರತು ನಾನು ಬಗ್ಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವಿನ ಹೋರಾಟದಲ್ಲಿ ನಾನು ಭಾಗಿಯಾಗಲು ಬಯಸುವುದಿಲ್ಲ… ಇದು NH-133 , ಮೇ 2022 ರಲ್ಲಿ ಈ ರಸ್ತೆಯ ವಿಸ್ತರಣೆಯ ಜವಾಬ್ದಾರಿಯನ್ನು ಅಧಿಕಾರಿಗಳು ವಹಿಸಿಕೊಂಡಿದ್ದರು. ಆದರೆ ಈ ಹೆದ್ದಾರಿಯ ದುರಸ್ತಿಗೆ ಕೇಂದ್ರವು ಹಣವನ್ನು ನೀಡುವುದಿಲ್ಲ., ಜನರು ಕಷ್ಟಗಳನ್ನು ಎದುರಿಸುತ್ತಿರುವ ಕಾರಣ ಅದನ್ನು ಪೂರ್ಣಗೊಳಿಸಲು ನಾನು ಮುಖ್ಯಮಂತ್ರಿಗೆ ವಿನಂತಿಸುತ್ತೇನೆ ಎಂದು ಅವರು ಹೇಳಿದರು.

ಗೊಡ್ಡಾ ಸಂಸದ ನಿಶಿಕಾಂತ್ ದುಬೆ ಅವರನ್ನು ಟ್ವೀಟ್‌ನಲ್ಲಿ ಟೀಕಿಸಿದ ಅವರು ಸಾರ್ವಜನಿಕ ಪ್ರತಿನಿಧಿಗಳು ಇಲ್ಲಿ ಬಂದು ಕುಳಿತರೆ ಜನರ ಕಷ್ಟವನ್ನು ಅರ್ಥಮಾಡಿಕೊಳ್ಳಬಹುದು ಎಂದು ಪ್ರತಿಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ದುಬೆ ಅವರು ಟ್ವಿಟರ್‌ನಲ್ಲಿ “ಮಹಾಗಾಮ್‌ನ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿರುದ್ಧ ಧರಣಿ ಕುಳಿತಿದ್ದಾರೆ. ಈ ಹೆದ್ದಾರಿಯನ್ನು ರಸ್ತೆ ನಿರ್ಮಾಣ ಇಲಾಖೆ ನಿರ್ವಹಿಸುತ್ತಿದೆ ಮತ್ತು ಕೇಂದ್ರವು ಇದಕ್ಕಾಗಿ ಈಗಾಗಲೇ ಆರು ತಿಂಗಳ ಹಿಂದೆ  75 ಕೋಟಿ ರೂ. ಮಂಜೂರು ಮಾಡಿದೆ..”  ಎಂದಿದ್ದಾರೆ. ಆದರೆ ಅದರ ದುರಸ್ತಿ ಕಾರ್ಯಕ್ಕೆ ಕೇಂದ್ರ ಸರ್ಕಾರ ಯಾವುದೇ ಹಣ ನೀಡಿಲ್ಲ ಎಂದು ದೀಪಿಕಾ ಪಾಂಡೆ ಸಿಂಗ್ ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com