ಮಹಿಳೆಯರು ಹೇಗೆ ಡ್ರೆಸ್ ಮಾಡಿಕೊಳ್ಳಬೇಕೆಂಬುದನ್ನು 'ಧರ್ಮ' ನಿರ್ಧರಿಸಬಾರದು: ಇರಾನಿ ಮಹಿಳೆಯರಿಗೆ ಸದ್ಗುರು ಬೆಂಬಲ

ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರ ಪರವಾಗಿ ಧ್ವನಿ ಎತ್ತಿರುವ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಮಹಿಳೆಯರು ಹೇಗೆ ಡ್ರೆಸ್ ಮಾಡಬೇಕು ಎಂಬುದನ್ನು ಧರ್ಮ ನಿರ್ಧರಿಸಬಾರದು ಎಂದು ಹೇಳಿದ್ದಾರೆ.
ಸದ್ಗುರು
ಸದ್ಗುರು

ನವದೆಹಲಿ: ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರ ಪರವಾಗಿ ಧ್ವನಿ ಎತ್ತಿರುವ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಮಹಿಳೆಯರು ಹೇಗೆ ಡ್ರೆಸ್ ಮಾಡಬೇಕು ಎಂಬುದನ್ನು ಧರ್ಮ ನಿರ್ಧರಿಸಬಾರದು ಎಂದು ಹೇಳಿದ್ದಾರೆ.

'ಮಹಿಳೆಯರು ಹೇಗೆ ಉಡುಗೆ ತೊಡಬೇಕು ಎಂಬುದನ್ನು ಧಾರ್ಮಿಕ ವ್ಯಕ್ತಿಗಳು ನಿರ್ಧರಿಸಬಾರದು. ಅವರು ಹೇಗೆ ಧರಿಸಬೇಕೆಂದು ಮಹಿಳೆಯರು ನಿರ್ಧರಿಸಲಿ. ಅವರು ಧರಿಸಿದ್ದಕ್ಕಾಗಿ ಯಾರನ್ನಾದರೂ ಶಿಕ್ಷಿಸುವ ಈ ಪ್ರತೀಕಾರದ ಸಂಸ್ಕೃತಿಯನ್ನು ಧಾರ್ಮಿಕ ಅಥವಾ ಇನ್ನಾವುದೇ ಸಂಸ್ಕೃತಿ ಅಂತ್ಯಗೊಳಿಸಲಿ ಎಂದು ಹೇಳಿದ್ದಾರೆ.

ಇರಾನ್‌ನಲ್ಲಿ ಯುವತಿ ಮಹ್ಸಾ ಅಮಿನಿ ಅವರು ದೇಶದ ನೈತಿಕತೆಯ ಪೊಲೀಸರಿಂದ ಬಂಧಿಸಲ್ಪಟ್ಟ ನಂತರ ಅವರ ಸಾವಿನ ಕುರಿತಂತೆ ಸದ್ಗುರು ಪ್ರತಿಕ್ರಿಯಿಸಿದ್ದಾರೆ.

22 ವರ್ಷ ವಯಸ್ಸಿನ ಮಹ್ಸಾಳನ್ನು ಇರಾನ್‌ನ ನೈತಿಕತೆಯ ಪೊಲೀಸರು ಸರಿಯಾಗಿ ಹಿಜಾಬ್ ಧರಿಸಿದ್ದಕ್ಕಾಗಿ ಬಂಧಿಸಿದ್ದರು. ಬಂಧನದ ನಂತರ ಆಕೆ ಕೋಮಾಕ್ಕೆ ಜಾರಿದ್ದು ಅಂತಿಮವಾಗಿ ಆಕೆ ಮೃತಪಟ್ಟಿದ್ದಳು.

ತಬ್ರಿಜ್, ರಾಶ್ತ್, ಇಸ್ಫಹಾನ್ ಮತ್ತು ಶಿರಾಜ್ ಸೇರಿದಂತೆ ಇರಾನ್‌ನ ಕನಿಷ್ಠ 15 ನಗರಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಪೊಲೀಸರು ಅಶ್ರುವಾಯು ಪ್ರಯೋಗಿಸಿ ಪ್ರತಿಭಟನಾಕಾರರನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರತಿಭಟನಾಕಾರರನ್ನು ಬಂಧಿಸಲು ಆರಂಭಿಸಿದ್ದಾರೆ. ಅಮಿನಿಯ ತವರು ಪ್ರಾಂತ್ಯದಲ್ಲಿ ಪ್ರತಿಭಟನೆಯ ಸಮಯದಲ್ಲಿ ಮೂವರು ಸಾವನ್ನಪ್ಪಿದರು.

ಬುಧವಾರ ಟೆಹ್ರಾನ್ ಮತ್ತು ಇತರ ಪ್ರಮುಖ ನಗರಗಳಲ್ಲಿ ಮಹಿಳೆಯರು ತಮ್ಮ ಹಿಜಾಬ್‌ಗಳನ್ನು ಸುಟ್ಟುಹಾಕಿದರು. ನೈತಿಕತೆಯ ಪೊಲೀಸರ ಕಸ್ಟಡಿಯಲ್ಲಿ ಸಾವನ್ನಪ್ಪಿದ ಕುರ್ದಿಷ್ ಮಹಿಳೆಗೆ ನ್ಯಾಯಕ್ಕಾಗಿ ಒತ್ತಾಯಿಸಿ ತಮ್ಮ ಕೂದಲನ್ನು ಕತ್ತರಿಸಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಅಮಿನಿಯ ಪೋಷಕರಿಗೆ ನ್ಯಾಯಯುತ ತನಿಖೆಯ ಭರವಸೆ ನೀಡಿದ ನಂತರವೂ ಪ್ರತಿಭಟನೆಗಳು ಮುಂದುವರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com