ಎನ್ಐಎ ದಾಳಿ ಖಂಡಿಸಿ ದೇಶಾದ್ಯಂತ ಎಸ್ ಡಿಪಿಐ, ಪಿಎಫ್ ಐ ಪ್ರತಿಭಟನೆ; 100ಕ್ಕೂ ಹೆಚ್ಚು ಸದಸ್ಯರ ಬಂಧನ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ದ ಕಚೇರಿಗಳು ಮತ್ತು ಅದರ ಪದಾಧಿಕಾರಿಗಳು, ಕಾರ್ಯಕರ್ತರ...
ಮದುರೈನಲ್ಲಿ ಎಸ್ ಡಿಪಿಐ ಪ್ರತಿಭಟನೆ
ಮದುರೈನಲ್ಲಿ ಎಸ್ ಡಿಪಿಐ ಪ್ರತಿಭಟನೆ

ಬೆಂಗಳೂರು/ಮಂಗಳೂರು/ತಿರುವನಂತಪುರಂ/ನವದೆಹಲಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ದ ಕಚೇರಿಗಳು ಮತ್ತು ಅದರ ಪದಾಧಿಕಾರಿಗಳು, ಕಾರ್ಯಕರ್ತರ ನಿವಾಸಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಗುರುವಾರ ದಾಳಿ ನಡೆಸಿದ್ದು, ಈ ದಾಳಿಯನ್ನು ಖಂಡಿಸಿ ಸ್ ಡಿಪಿಐ ಮತ್ತು ಪಿಎಫ್ ಐ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಸುತ್ತಿವೆ.

ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಂತೆ ಪಿಎಫ್‌ಐ ಅಧ್ಯಕ್ಷ ಓಎಂಎ ಸಲಾಂ ಮತ್ತು ಪಿಎಫ್‌ಐನ ಇತರ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖಾ ಸಂಸ್ಥೆಯು ದೆಹಲಿ ಪಿಎಫ್‌ಐ ಮುಖ್ಯಸ್ಥ ಪರ್ವೇಜ್ ಅಹ್ಮದ್ ಮತ್ತು ಅವರ ಸಹೋದರನನ್ನು ಓಖ್ಲಾದಲ್ಲಿ ಇಂದು ಬೆಳಗಿನ ಜಾವ 3.30ಕ್ಕೆ ಬಂಧಿಸಿದೆ.

ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ದಾಳಿ ನಡೆಸಿದ ನಂತರ ನಾಲ್ವರು ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಎನ್‌ಐಎ ಸೆಪ್ಟೆಂಬರ್ 19 ರಂದು ರಿಮಾಂಡ್ ವರದಿಯನ್ನು ಸಲ್ಲಿಸಿತ್ತು. ಪಿಎಫ್ ಐ ಭಯೋತ್ಪಾದಕ ಚಟುವಟಿಕೆಗೆ ಸಂಚು ರೂಪಿಸುತ್ತಿದೆ ಮತ್ತು ನಿರ್ದಿಷ್ಟ ಧರ್ಮದ ಜನರನ್ನು ಗುರುತಿಸಿ ಕೊಲ್ಲಲು ಕಾರ್ಯಕರ್ತರಿಗೆ ಪಿಎಫ್ಐ ತರಬೇತಿ ನೀಡುತ್ತಿದೆ ಎಂದು ವರದಿ ಬಹಿರಂಗಪಡಿಸಿದೆ.

10 ರಾಜ್ಯಗಳಲ್ಲಿ 100ಕ್ಕೂ ಹೆಚ್ಚು ಸದಸ್ಯರ ಬಂಧ
ದಕ್ಷಿಣ ಭಾರತದಲ್ಲಿ, ಎನ್ ಐಎ ಅನೇಕ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದೆ. ತನಿಖಾ ಸಂಸ್ಥೆಯು ಹತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ದಾಳಿ ನಡೆಸಿ ಕನಿಷ್ಠ 106 ಜನರನ್ನು ಬಂಧಿಸಿದೆ. ಆಂಧ್ರಪ್ರದೇಶ (5), ಅಸ್ಸಾಂ (9), ದೆಹಲಿ (3), ಕರ್ನಾಟಕ (20), ಕೇರಳ (22), ಮಧ್ಯಪ್ರದೇಶ (4), ಮಹಾರಾಷ್ಟ್ರ (20), ಪುದುಚೇರಿ (3), ರಾಜಸ್ಥಾನ (2), ತಮಿಳುನಾಡು (10) ಮತ್ತು ಉತ್ತರ ಪ್ರದೇಶ (8)ಗಳಿಂದ ಬಂಧಿಸಲಾಗಿದೆ.

ಕೇರಳದಲ್ಲಿ, ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ ಎನ್ ಐಎ ನಡೆಸಿದ ದಾಳಿಯನ್ನು ಖಂಡಿಸಿ ಪಿಎಫ್ಐ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.

ಇಂದು ಬೆಳಗ್ಗೆ ದಾಳಿ ನಡೆಸಿದ ಸ್ಥಳಗಳಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪಿಎಫ್‌ಐ ಕಾರ್ಯಕರ್ತರು  ಕೇಂದ್ರ ಸರ್ಕಾರ ಮತ್ತು ಅದರ ತನಿಖಾ ಸಂಸ್ಥೆಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com