ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದರು: ಬಿಜೆಪಿ ನಾಯಕನ ರೆಸಾರ್ಟ್ ನಲ್ಲಿ ಹತ್ಯೆಯಾದ ಯುವತಿಯ ವಾಟ್ಸಾಪ್ ಸಂದೇಶ

ಬಿಜೆಪಿ ಮುಖಂಡ ವಿನೋದ್ ಆರ್ಯ ಪುತ್ರ ಪುಲ್ಕಿತ್ ಆರ್ಯ ನಡೆಸುತ್ತಿದ್ದ ರೆಸಾರ್ಟ್  ನಲ್ಲಿ ಹತ್ಯೆಗೀಡಾದ ಉತ್ತರಾಖಂಡ ಯುವತಿ, ಆಕೆಯ ಸ್ನೇಹಿತೆಗೆ ಕಳಿಸಿರುವ ವಾಟ್ಸಾಪ್ ಸಂದೇಶಗಳು ಆರೋಪಿಗಳು ಹದಿಹರೆಯದವರನ್ನು ವೇಶ್ಯಾವಾಟಿಕೆಗೆ...
ಶಾಸಕಿ ರೇಣು ಬಿಷ್ತ್ ಅವರ ಕಾರನ್ನು ಸ್ಥಳೀಯರು ಧ್ವಂಸಗೊಳಿಸಿದ್ದಾರೆ.
ಶಾಸಕಿ ರೇಣು ಬಿಷ್ತ್ ಅವರ ಕಾರನ್ನು ಸ್ಥಳೀಯರು ಧ್ವಂಸಗೊಳಿಸಿದ್ದಾರೆ.

ರಿಷಿಕೇಶ: ಬಿಜೆಪಿ ಮುಖಂಡ ವಿನೋದ್ ಆರ್ಯ ಪುತ್ರ ಪುಲ್ಕಿತ್ ಆರ್ಯ ನಡೆಸುತ್ತಿದ್ದ ರೆಸಾರ್ಟ್  ನಲ್ಲಿ ಹತ್ಯೆಗೀಡಾದ ಉತ್ತರಾಖಂಡ ಯುವತಿ, ಆಕೆಯ ಸ್ನೇಹಿತೆಗೆ ಕಳಿಸಿರುವ ವಾಟ್ಸಾಪ್ ಸಂದೇಶಗಳು ಆರೋಪಿಗಳು ಹದಿಹರೆಯದವರನ್ನು ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದರು ಎಂಬ ಆರೋಪವನ್ನು ದೃಢಪಡಿಸುವಂತಿವೆ.

ಅವರು ನನ್ನನ್ನು ವೇಶ್ಯೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತನ್ನ ಸ್ನೇಹಿತರಿಗೆ ಕಳಿಸಿರುವ ಸಂದೇಶವಿದೆ. ಬಿಜೆಪಿಯ ಹಿರಿಯ ನಾಯಕನ ಮಗನ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡಿದ ಅನುಭವವನ್ನು ಆಕೆ ಸಂದೇಶದಲ್ಲಿ ವಿವರಿಸಿದ್ದಾಳೆ.

ಸಂತ್ರಸ್ತೆಯ ಸಂದೇಶಗಳ ಸ್ಕ್ರೀನ್‌ಶಾಟ್‌ಗಳು ಹರಿದಾಡುತ್ತಿವೆ. ಅಲ್ಲಿ ಅವಳು ಗ್ರಾಹಕರಿಗೆ  10,000 ರೂ.ಗೆ ವಿಶೇಷ ಸೇವೆಗಳನ್ನು ಒದಗಿಸಲು ಹೇಗೆ ಒತ್ತಾಯಿಸಲಾಯಿತು ಎಂಬುದನ್ನು ವಿವರಿಸಿದ್ದಾಳೆ. ಪ್ರಾಥಮಿಕ ತನಿಖೆಯಲ್ಲಿ ಸಂದೇಶಗಳು ಸಂತ್ರಸ್ತೆಯಿಂದ ಬಂದಿರುವಂತೆ ಕಂಡಿವೆ. ಆದರೂ ಫೋರೆನ್ಸಿಕ್ ತನಿಖೆಯನ್ನು ಸಹ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. 

ಸಂತ್ರಸ್ತೆ ತನ್ನ ಸ್ನೇಹಿತೆಗೆ ರೆಸಾರ್ಟ್‌ನಲ್ಲಿ ವ್ಯಕ್ತಿಯೊಬ್ಬ ಅನುಚಿತವಾಗಿ ಸ್ಪರ್ಶಿಸಿದನೆಂದು ಹೇಳಿಕೊಂಡಿದ್ದಾಳೆ. ಸಂತ್ರಸ್ತ ಮಹಿಳೆಯಿಂದ ರೆಸಾರ್ಟ್ ಉದ್ಯೋಗಿಯೊಬ್ಬರಿಗೆ ಕರೆ ಮಾಡಿದ ಧ್ವನಿಮುದ್ರಣದ ಆಡಿಯೋ ಕ್ಲಿಪ್ ಕೂಡ ವೈರಲ್ ಆಗಿದೆ. ಅವಳು ಫೋನ್‌ನಲ್ಲಿ ಅಳುವುದು ಮತ್ತು ತನ್ನ ಬ್ಯಾಗ್ ಅನ್ನು ಮೇಲಕ್ಕೆ ತರಲು ಇನ್ನೊಬ್ಬ ವ್ಯಕ್ತಿಯನ್ನು ಕೇಳುವುದು ಕೇಳಿಸುತ್ತದೆ.

ಇಂದು ಬೆಳಗ್ಗೆ ಕಾಲುವೆಯಿಂದ ಮೃತ ದೇಹವನ್ನು ಹೊರತೆಗೆದ 19 ವರ್ಷದ ಯುವತಿಗೆ ರೆಸಾರ್ಟ್ ನಲ್ಲಿ  ಅತಿಥಿಗಳಿಗೆ ವಿಶೇಷ ಸೇವೆಗಳನ್ನು ಒದಗಿಸಲು ರೆಸಾರ್ಟ್ ಮಾಲೀಕರು ಒತ್ತಡ ಹೇರುತ್ತಿದ್ದರು ಎಂದು ಉತ್ತರಾಖಂಡದ ಉನ್ನತ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ಹೇಳಿದ್ದಾರೆ.

ಈ ಹಿಂದೆ ರಿಸೆಪ್ಷನಿಸ್ಟ್ ಆಗಿದ್ದ ಯುವತಿಯ ಫೇಸ್‌ಬುಕ್ ಸ್ನೇಹಿತರೊಬ್ಬರು ಯುವತಿ ಕೆಲಸ ಮಾಡುತ್ತಿದ್ದ ರೆಸಾರ್ಟ್‌ನ ಮಾಲೀಕ ಪುಲ್ಕಿತ್ ಆರ್ಯ ಅವರ ಬೇಡಿಕೆಯಂತೆ ಅತಿಥಿಗಳೊಂದಿಗೆ ಸಂಭೋಗಿಸಲು ನಿರಾಕರಿಸಿದ್ದರಿಂದ ಮಹಿಳೆಯನ್ನು ಕೊಲ್ಲಲಾಯಿತು ಎಂದು ಆರೋಪಿಸಿದ್ದರು.

ಪುಲ್ಕಿತ್ ಆರ್ಯ ಅವರನ್ನು ಪೌರಿ ಜಿಲ್ಲೆಯ ಋಷಿಕೇಶ್ ಬಳಿಯ ರೆಸಾರ್ಟ್‌ನಲ್ಲಿ ಮಹಿಳಾ ರಿಸೆಪ್ಷನಿಸ್ಟ್ ಹತ್ಯೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ. ಪುಲ್ಕಿತ್ ಆರ್ಯ ಅಲ್ಲದೆ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಅವರನ್ನು ಬಂಧಿಸಲಾಗಿದೆ. ಅವರನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಬಿಜೆಪಿ ವಿರುದ್ಧ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಮುಂಜಾನೆ ಪುಲ್ಕಿತ್ ಆರ್ಯ ಅವರ ತಂದೆ  ಹಿರಿಯ ನಾಯಕ ಮತ್ತು ಮಾಜಿ ರಾಜ್ಯ ಸಚಿವ ವಿನೋದ್ ಆರ್ಯ ಹಾಗೂ ಆರೋಪಿಯ  ಸಹೋದರ ಅಂಕಿತ್ ಆರ್ಯ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿದೆ.

ನಗರ ಪಾಲಿಕೆ ಅಧಿಕಾರಿಗಳು ರೆಸಾರ್ಟ್ ಅನ್ನು ಕಾನೂನುಬಾಹಿರವಾಗಿ ನಿರ್ಮಿಸಲಾಗಿದೆ ಎಂದು  ರೆಸಾರ್ಟ್ ನ ಭಾಗಗಳನ್ನು ಕೆಡವಿದರು. ಇಂದು ಬೆಳಗ್ಗೆ ಕೋಪಗೊಂಡ ಸ್ಥಳೀಯರು ಇನ್ನೂ ಉಳಿದಿರುವ ರೆಸಾರ್ಟ್ ಕಟ್ಟಡದ ಭಾಗಗಳಿಗೆ ಬೆಂಕಿ ಹಚ್ಚಿದರು. 

ಈ ಮಧ್ಯೆ ಸ್ಥಳೀಯ ಬಿಜೆಪಿ ಶಾಸಕಿ ರೇಣು ಬಿಷ್ತ್ ಅವರ ಕಾರನ್ನು ಸ್ಥಳೀಯರು ಧ್ವಂಸಗೊಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com