ಪಂಜಾಬ್: ಹಾದಿ ತಪ್ಪಿದ ಯುವಜನತೆ; ಡ್ರಗ್ಸ್ ಪ್ರಭಾವದಿಂದಾಗಿ ರಸ್ತೆಯಲ್ಲಿ ನಡೆಯಲಾಗದೇ ಹೆಣಗಾಡಿದ ಯುವಕ - ವಿಡಿಯೋ

ಪಂಜಾಬ್‌ನ ಅಮೃತಸರದಲ್ಲಿ ಇತ್ತೀಚಿಗೆ ಯುವತಿಯೊಬ್ಬಳು ಅಕ್ರಮ ಮಾದಕ ದ್ರವ್ಯ ಸೇವಿಸಿ ನಡೆಯಲಾಗದೇ ರಸ್ತೆಯಲ್ಲಿ ನಿಂತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ  ಕೆಲವೇ ದಿನಗಳಲ್ಲಿ ಯುವಕನೊಬ್ಬ ದಿಗ್ಭ್ರಮೆಗೊಂಡು ರಸ್ತೆಯಲ್ಲಿ ನಿಂತಿದ್ದ ಮತ್ತೊಂದು ವಿಡಿಯೋ ಹೊರಬಿದ್ದಿದೆ.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ
Updated on

ಚಂಡೀಗಢ: ಪಂಜಾಬ್‌ನ ಅಮೃತಸರದಲ್ಲಿ ಇತ್ತೀಚಿಗೆ ಯುವತಿಯೊಬ್ಬಳು ಅಕ್ರಮ ಮಾದಕ ದ್ರವ್ಯ ಸೇವಿಸಿ ನಡೆಯಲಾಗದೇ ರಸ್ತೆಯಲ್ಲಿ ನಿಂತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ  ಕೆಲವೇ ದಿನಗಳಲ್ಲಿ ಯುವಕನೊಬ್ಬ ದಿಗ್ಭ್ರಮೆಗೊಂಡು ರಸ್ತೆಯಲ್ಲಿ ನಿಂತಿದ್ದ ಮತ್ತೊಂದು ವಿಡಿಯೋ ಹೊರಬಿದ್ದಿದೆ.

ಅಮೃತಸರ ಪೂರ್ವ ಕ್ಷೇತ್ರದ ಚಮ್ರಾಂಗ್ ರಸ್ತೆಯಲ್ಲಿ ಚಿತ್ರೀಕರಿಸಲಾದ ವೀಡಿಯೊದಲ್ಲಿ ವ್ಯಕ್ತಿ ರಸ್ತೆಯಲ್ಲಿ ಚಲಿಸಲು ಹೆಣಗಾಡುತ್ತಿರುವುದನ್ನು ಕಾಣಬಹುದು.

ಈ ತಿಂಗಳ ಆರಂಭದಲ್ಲಿ ಮಕ್ಬೂಲ್‌ಪುರ ಪ್ರದೇಶದಲ್ಲಿ ಯುವತಿಯೊಬ್ಬಳು ರಸ್ತೆಯಲ್ಲಿ ಚಲಿಸಲು ಹೆಣಗಾಡುತ್ತಿರುವ ವೀಡಿಯೊವನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಯಿತು. ಅದರ ನಂತರ ಪೊಲೀಸರು ಶೋಧ ಕಾರ್ಯಾಚರಣೆಯನ್ನು ನಡೆಸಿದರು ಮತ್ತು ಮೂವರನ್ನು ಬಂಧಿಸಿ ಅವರಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡರು.

ವರದಿಗಳ ಪ್ರಕಾರ ಹುಡುಗಿಯ ಕುಟುಂಬವು ಅವಳನ್ನು ದೂರ ಮಾಡಿದೆ. ಆಕೆಯನ್ನು ಈಗ ಅಮೃತಸರದ ಡಿ-ಅಡಿಕ್ಷನ್ ಸೆಂಟರ್‌ಗೆ ದಾಖಲಿಸಲಾಗಿದೆ. ಈ ಪ್ರದೇಶವು ಮಾದಕ ವ್ಯಸನ ಮತ್ತು ವ್ಯಸನಿಗಳ ಸಮಸ್ಯೆಗಳಿಗೆ ಕುಖ್ಯಾತವಾಗಿದೆ.

ಈ ತಿಂಗಳ ಆರಂಭದಲ್ಲಿ ರಾಜ್ಯಾದ್ಯಂತ ನಡೆಸಿದ ದಾಳಿಯಲ್ಲಿ ಕನಿಷ್ಠ 350 ಮಾದಕವಸ್ತು ಕಳ್ಳಸಾಗಣೆದಾರರನ್ನು ಬಂಧಿಸಲಾಗಿತ್ತು. ರಾಜ್ಯ ಪೊಲೀಸರ ಪ್ರಕಾರ ಒಂದು ವಾರದಲ್ಲಿ ನಡೆಸಿದ ದಾಳಿಯಲ್ಲಿ ಪೊಲೀಸರು 6.90 ಕೆಜಿ ಹೆರಾಯಿನ್, 14.41 ಕೆಜಿ ಅಫೀಮು, 5 ಕೆಜಿ ಗಾಂಜಾ, 6.44 ಕ್ವಿಂಟಾಲ್ ಗಸಗಸೆ ಸಿಪ್ಪೆ ಮತ್ತು 2.10 ಲಕ್ಷ ಮಾತ್ರೆಗಳು, ಕ್ಯಾಪ್ಸುಲ್‌ಗಳು, ಇಂಜೆಕ್ಷನ್‌ಗಳು ಮತ್ತು ಫಾರ್ಮಾ ಓಪಿಯಾಡ್‌ಗಳ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಮಾದಕ ದ್ರವ್ಯ ಪೀಡಿತ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯ ನಂತರ 4.81 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com