ಲವ್ ಜಿಹಾದ್ ಆರೋಪ; ಗರ್ಬಾ ನೃತ್ಯದ ಪೆಂಡಾಲ್ ಗಳಲ್ಲಿ ಗುರುತಿನ ಚೀಟಿ ಕೇಳಲಿರುವ ಮಧ್ಯಪ್ರದೇಶ ಸರ್ಕಾರ

ಗರ್ಬಾ ನೃತ್ಯ ಕಾರ್ಯಕ್ರಮದ ಪೆಂಡಾಲ್ ಗಳಿಗೆ ಆಗಮಿಸುವವರ ಗುರುತಿನ ಚೀಟಿಯನ್ನು ಪರಿಶೀಲಿಸುವಂತೆ ಗರ್ಬಾ ನೃತ್ಯ ಆಯೋಜಕರಿಗೆ ಮಧ್ಯಪ್ರದೇಶ ಸರ್ಕಾರ ಸೂಚನೆ ನೀಡಿದೆ.
ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ
ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ

ನವದೆಹಲಿ: ಗರ್ಬಾ ನೃತ್ಯ ಕಾರ್ಯಕ್ರಮದ ಪೆಂಡಾಲ್ ಗಳಿಗೆ ಆಗಮಿಸುವವರ ಗುರುತಿನ ಚೀಟಿಯನ್ನು ಪರಿಶೀಲಿಸುವಂತೆ ಗರ್ಬಾ ನೃತ್ಯ ಆಯೋಜಕರಿಗೆ ಮಧ್ಯಪ್ರದೇಶ ಸರ್ಕಾರ ಸೂಚನೆ ನೀಡಿದೆ.

ರಾಜ್ಯದ ಸಚಿವರೊಬ್ಬರು ಈ ರೀತಿಯ ಕಾರ್ಯಕ್ರಮಗಳು ಲವ್ ಜಿಹಾದ್ ಗೆ ದಾರಿ ಮಾಡಿಕೊಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. 

ನವರಾತ್ರಿ ಹಬ್ಬ ದುರ್ಗಾ ಮಾತೆಯನ್ನು ಪೂಜಿಸುವ ಹಬ್ಬವಾಗಿದ್ದು, ನಮ್ಮ ನಂಬಿಕೆಯ ಕೇಂದ್ರಬಿಂದುವಾಗಿದೆ. ಇಂತಹ ಪವಿತ್ರ ಕಾರ್ಯಕ್ರಮಗಳಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಗರ್ಬಾ ನೃತ್ಯ ಕಾರ್ಯಕ್ರಮಗಳಲ್ಲಿ ಐಡಿ ಕಾರ್ಡ್ ಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. 

ನವರಾತ್ರಿಯ ಹಬ್ಬದ 9 ದಿನಗಳಲ್ಲಿ ಸಾಂಪ್ರದಾಯಿಕ ಗರ್ಬಾ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
 
"ಇಂತಹ ಕಾರ್ಯಕ್ರಮಗಳಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಆದ್ದರಿಂದ ಆಯೋಜಕರಿಗೆ ಕಾರ್ಯಕ್ರಮಕ್ಕೆ ಬರುವವರ ಐಡಿ ಕಾರ್ಡ್ ಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ" ಎಂದು ಸರ್ಕಾರದ ವಕ್ತಾರರೂ ಆಗಿರುವ ಮಿಶ್ರಾ ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com