ಮುಂಬೈ: ಬುರ್ಕಾ ಧರಿಸಲು ನಿರಾಕರಿಸಿದ ಪತ್ನಿಯ ಹತ್ಯೆ ಮಾಡಿದ ಟ್ಯಾಕ್ಸಿ ಚಾಲಕ

ಪುತ್ರನ ಪಾಲನೆ ವಿಚಾರ ಮತ್ತು ಸಾಂಪ್ರದಾಯಿಕ ಮುಸ್ಲಿಂ ಪದ್ಧತಿಗಳನ್ನು ಅನುಸರಿಸಲು ನಿರಾಕರಿಸಿದ ವಿಚಾರಕ್ಕೆ ಪತಿ-ಪತ್ನಿಯ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸೋಮವಾರ ರಾತ್ರಿ ಮುಂಬೈನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಪುತ್ರನ ಪಾಲನೆ ವಿಚಾರ ಮತ್ತು ಸಾಂಪ್ರದಾಯಿಕ ಮುಸ್ಲಿಂ ಪದ್ಧತಿಗಳನ್ನು ಅನುಸರಿಸಲು ನಿರಾಕರಿಸಿದ ವಿಚಾರಕ್ಕೆ ಪತಿ-ಪತ್ನಿಯ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸೋಮವಾರ ರಾತ್ರಿ ಮುಂಬೈನಲ್ಲಿ ನಡೆದಿದೆ.

ಆರೋಪಿ ಪತಿ ಇಕ್ಬಾಲ್ ಶೇಖ್ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಹತ್ಯೆಯಾದ ಮಹಿಳೆಯನ್ನು ರೂಪಾಲಿ ಎಂದು ಗುರುತಿಸಲಾಗಿದೆ. ಹಿಂದೂವಾಗಿದ್ದ ರೂಪಾಲಿ 2019 ರಲ್ಲಿ ಮುಸ್ಲಿಂ ಇಕ್ಬಾಲ್ ಶೇಖ್ ಅವರನ್ನು ವಿವಾಹವಾದರು. ಮದುವೆಯ ನಂತರ ಜರಾ ಎಂದು ಹೆಸರು ಬದಲಿಸಿಕೊಂಡಿದ್ದರು. ಇವರಿಗೆ ಒಬ್ಬ ಮಗನಿದ್ದಾನೆ.

ಕಳೆದ ಕೆಲವು ತಿಂಗಳುಗಳಿಂದ ಇಕ್ಬಾಲ್ ಶೇಖ್ ಅವರ ಕುಟುಂಬವು ಬುರ್ಖಾ ಧರಿಸುವಂತೆ ಪತ್ನಿ ಜರಾ ಮೇಲೆ ಒತ್ತಡ ಹೇರುತ್ತಿದ್ದರಿಂದ ಅವರು ತಮ್ಮ ಮಗನೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಆಕೆಯ ಕುಟುಂಬ ಹೇಳಿದೆ. ಆದರೆ ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ವಿಲಾಸ್ ರಾಥೋಡ್ ಅವರು ಹೇಳಿದ್ದಾರೆ.

ನಿನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ತನ್ನಿಂದ ದೂರವಾಗಿದ್ದ ಪತ್ನಿ ಭೇಟಿಯಾಗಿ ಮಗುವಿನ ಪಾಲನೆ ವಿಚಾರ ಮತ್ತು ಬುರ್ಕಾ ಧರಿಸುವ ವಿಚಾರವಾಗಿ ಜಗಳವಾಡಿದರು. ಈ ವೇಳೆ ಇಕ್ಬಾಲ್ ಪತ್ನಿಯನ್ನು ಎಳೆದುಕೊಂಡು ಹೋಗಿ ಚಾಕುವಿನಿಂದ ಅನೇಕ ಬಾರಿ ಇರಿದಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com