ಅಡಕತ್ತರಿಯಲ್ಲಿ ಸಿಎಂ ಅಶೋಕ್ ಗೆಹ್ಲೋಟ್: ಸೋನಿಯಾ ಭೇಟಿಯಲ್ಲೇನಾಗಲಿದೆ?

ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತದೆ. ಅವರ ರಾಜೀನಾಮೆ ಬಗ್ಗೆ ನಾವು ಚರ್ಚಿಸಿಲ್ಲ. ಅವರು ಇಂದು ರಾಜೀನಾಮೆ ನೀಡುತ್ತಿಲ್ಲ, ಮುಂದೆಯೂ ಅವರು ರಾಜೀನಾಮೆ ನೀಡುವುದಿಲ್ಲ...
ಸೋನಿಯಾ ಗಾಂಧಿ-ಅಶೋಕ್ ಗೆಹ್ಲೋಟ್
ಸೋನಿಯಾ ಗಾಂಧಿ-ಅಶೋಕ್ ಗೆಹ್ಲೋಟ್
Updated on

ನವದೆಹಲಿ: ರಾಜಸ್ತಾನ ಕಾಂಗ್ರೆಸ್ ನಲ್ಲಿ ಬಿಕ್ಕಟ್ಟಿನ ನಡುವೆ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೆಯೇ ಎಂಬ ಸಸ್ಪೆನ್ಸ್ ನಡುವೆ ಇಂದು ಸಂಜೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ.

ಸಭೆಯ ಮೊದಲು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮ ಬೆಂಬಲಿಗರನ್ನು ಭೇಟಿಯಾದರು. ಈ ವೇಳೆ ಗೆಹ್ಲೋಟ್ ಅವರು ಯಾವುದೇ ಸಮಯದಲ್ಲಿ ರಾಜಸ್ಥಾನದ ಸಿಎಂ ಸ್ಥಾನವನ್ನು ತ್ಯಜಿಸುವ ಸಾಧ್ಯತೆಯಿಲ್ಲ ಎಂದು ಸೂಚಿಸಿದರು.

ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತದೆ. ಅವರ ರಾಜೀನಾಮೆ ಬಗ್ಗೆ ನಾವು ಚರ್ಚಿಸಿಲ್ಲ. ಅವರು ಇಂದು ರಾಜೀನಾಮೆ ನೀಡುತ್ತಿಲ್ಲ, ಮುಂದೆಯೂ ಅವರು ರಾಜೀನಾಮೆ ನೀಡುವುದಿಲ್ಲ ಎಂದು ರಾಜ್ಯ ಸಚಿವ ಪ್ರತಾಪ್ ಸಿಂಗ್ ಕಚರಿಯಾವಾಸ್ ಹೇಳಿದ್ದಾರೆ. ಮತ್ತೊಬ್ಬ ಸಚಿವ ವಿಶ್ವೇಂದ್ರ ಸಿಂಗ್,  ಗೆಹ್ಲೋಟ್ ರಾಜಸ್ಥಾನದಲ್ಲಿ ತಮ್ಮ ಐದು ವರ್ಷಗಳನ್ನು ಪೂರ್ಣಗೊಳಿಸುತ್ತಾರೆ ಎಂದು ಹೇಳಿದರು.

ಎರಡು ಹುದ್ದೆಗಳನ್ನು ಹೊಂದಲು ಕಾಂಗ್ರೆಸ್ ಯಾರಿಗೂ ಅವಕಾಶ ನೀಡುವುದಿಲ್ಲವಾದ್ದರಿಂದ ಗೆಹ್ಲೋಟ್ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬಯಸುವುದಿಲ್ಲ ಎಂಬ ಸುಳಿವು ಸಿಕ್ಕಿದ್ದು ರಾಜಸ್ತಾನದ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಹೇಳಲಾಗ್ತಿದೆ. ಈಗಾಗ್ಲೇ ಗೆಹ್ಲೋಟ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅವರ ಉತ್ತರಾಧಿಕಾರಿಯಾಗಿ ಸಚಿನ್ ಪೈಲಟ್ ಅವರನ್ನು ಒಪ್ಪಲು ಗೆಹ್ಲೋಟ್ ಬೆಂಬಲಿಗರು ಸಿದ್ಧರಿಲ್ಲ. ಈ ವಿಚಾರಕ್ಕೆ ಈಗಾಗಲೇ ರಾಜಸ್ತಾನ ಕಾಂಗ್ರೆಸ್ ನಲ್ಲಿ ಬಂಡಾಯ ಜೋರಾಗಿದೆ.

ಕಾಂಗ್ರೆಸ್‌ನಲ್ಲಿ ಒಬ್ಬ ವ್ಯಕ್ತಿಗೆ  ಒಂದೇ ಹುದ್ದೆ ನೀತಿಗೆ ಅನುಗುಣವಾಗಿ  ಗೆಹ್ಲೋಟ್ ದ್ವಿಪಾತ್ರ ವಹಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಕಳೆದ ವಾರ ಸ್ಪಷ್ಟಪಡಿಸಿದ್ದರು.

ಗೆಹ್ಲೋಟ್ ಇಷ್ಟವಿಲ್ಲದಿದ್ದರೂ, ಪಕ್ಷದ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡರು, ಆದರೆ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಲು ಅವರು ನಿರಾಕರಿಸಿರುವುದು ಕಾಂಗ್ರೆಸ್‌ನಲ್ಲಿನ ಪ್ರಸ್ತುತ ಬಿಕ್ಕಟ್ಟಿನ ಕೇಂದ್ರವಾಗಿದೆ. ಭಾನುವಾರ ಗೆಹ್ಲೋಟ್‌ಗೆ ನಿಷ್ಠರಾಗಿರುವ 90 ಕ್ಕೂ ಹೆಚ್ಚು ಶಾಸಕರು ಅವರು ರಾಷ್ಟ್ರೀಯ ಪಾತ್ರಕ್ಕೆ ತೆರಳಿದರೆ, ರಾಜಸ್ಥಾನದಲ್ಲಿ ಅವರ ಬದಲಿಗೆ ಅವರ ಪ್ರತಿಸ್ಪರ್ಧಿ ಸಚಿನ್ ಪೈಲಟ್ ಆಗುತ್ತಾರೆ ಎಂಬ ವರದಿಗಳ ಮೇಲೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದರು.

ಗಾಂಧಿಯವರ ವಿರುದ್ಧ ಬಹಿರಂಗವಾಗಿ ಶಾಸಕರು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ನಂತರವೇ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಷರತ್ತುಗಳನ್ನು ಹಾಕಿದರು. ರಾಹುಲ್ ಗಾಂಧಿಯವರ “ಭಾರತ್ ಜೋಡೋ ಯಾತ್ರೆ” ಮಧ್ಯದಲ್ಲಿ ಬಂಡಾಯವು ಕಾಂಗ್ರೆಸ್ ಅನ್ನು ತೀವ್ರವಾಗಿ ಮುಜುಗರಕ್ಕೀಡುಮಾಡಿತು. ಗಾಂಧಿಗಳು ಕೋಪಗೊಂಡಿದ್ದಾರೆ ಎಂದು ಹೇಳಲಾಗಿದೆ ಮತ್ತು ಪಕ್ಷದ ಮುಖ್ಯಸ್ಥರ ರೇಸ್‌ನಿಂದ  ಗೆಹ್ಲೋಟ್ ಹೊರಗುಳಿಯುತ್ತಾರೆ ಎಂಬ ಬಲವಾದ ಊಹಾಪೋಹವಿತ್ತು. ಆದರೆ ಪಕ್ಷದ ಉನ್ನತ ಮೂಲಗಳು ಗೆಹ್ಲೋಟ್ ಇನ್ನೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿದ್ದಾರೆ ಎಂದು ಹೇಳಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com