ಯಥಾಸ್ಥಿತಿ ಬೇಕು ಅಂದರೆ ಖರ್ಗೆಗೆ ಮತ ಹಾಕಿ, ಬದಲಾವಣೆ ಬೇಕಾದಲ್ಲಿ ನನಗೆ ಮತ ನೀಡಿ: ಕಾಂಗ್ರೆಸ್ ಅಧ್ಯಕ್ಷ ಹುದ್ದೆಯ ಅಭ್ಯರ್ಥಿ ಶಶಿ ತರೂರ್
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಮಲ್ಲಿಕಾರ್ಜುನ ಖರ್ಗೆ, ಜಾರ್ಖಂಡ್ ಕಾಂಗ್ರೆಸ್ ನಾಯಕ ಕೆಎನ್ ತ್ರಿಪಾಠಿ ಹಾಗೂ ಶಶಿ ತರೂರ್ ನಾಮಪತ್ರ ಸಲ್ಲಿಸಿದ್ದು, ಜಿ-23 ನಾಯಕರೂ ಸೇರಿ ಗಾಂಧಿ ಕುಟುಂಬದವರೂ ಬೆಂಬಲ ನೀಡಿದ್ದಾರೆ.
Published: 30th September 2022 04:35 PM | Last Updated: 05th November 2022 01:30 PM | A+A A-

ಕಾಂಗ್ರೆಸ್ ನಾಯಕ ಶಶಿ ತರೂರ್
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಮಲ್ಲಿಕಾರ್ಜುನ ಖರ್ಗೆ, ಜಾರ್ಖಂಡ್ ಕಾಂಗ್ರೆಸ್ ನಾಯಕ ಕೆಎನ್ ತ್ರಿಪಾಠಿ ಹಾಗೂ ಶಶಿ ತರೂರ್ ನಾಮಪತ್ರ ಸಲ್ಲಿಸಿದ್ದು, ಜಿ-23 ನಾಯಕರೂ ಸೇರಿ ಗಾಂಧಿ ಕುಟುಂಬದವರೂ ಖರ್ಗೆಗೆ ಬೆಂಬಲ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಶಶಿ ತರೂರ್, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗಾಂಧಿ ಕುಟುಂಬದವರು ಬೆಂಬಲ ನೀಡಿರುವುದು ಅಚ್ಚರಿಯೇನಲ್ಲ ಎಂದು ಹೇಳಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಶಶಿ ತರೂರ್ ತಮ್ಮ ಪ್ರತಿಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ನ ಭೀಷ್ಮ ಪಿತಾಮಹ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷ ಗಾದಿಯತ್ತ ಮಲ್ಲಿಕಾರ್ಜುನ ಖರ್ಗೆ: ನಾಪಪತ್ರ ಸಲ್ಲಿಕೆ, ಜಿ-23 ನಾಯಕರು ಸೇರಿ 40ಕ್ಕೂ ಹೆಚ್ಚು ನಾಯಕರ ಬೆಂಬಲ
ಇದು ಸೌಹಾರ್ದಯುತವಾದ ಸ್ಪರ್ಧೆಯಾಗಿರಲಿದೆ ಎಂದು ಶಶಿ ತರೂರ್ ಹೇಳಿದ್ದು. ಖರ್ಗೆಯನ್ನು ತರೂರ್ "ಮುಂದುವರಿಕೆಯ ಅಭ್ಯರ್ಥಿ" ಎಂದೂ ಹೇಳಿದ್ದಾರೆ.
ಸ್ಥಾಪಿತ ನಾಯಕತ್ವದ ಯಥಾಸ್ಥಿತಿಯನ್ನು ಮುಂದುವರೆಸಲು ಒಟ್ಟುಗೂಡುತ್ತಿರುವುದರಲ್ಲಿ ಅಚ್ಚರಿಯೇನು ಇಲ್ಲ. ಯಥಾಸ್ಥಿತಿ ಬೇಕೆಂದರೆ ನೀವು ಖರ್ಗೆಗೆ ಮತಹಾಕಬೇಕು, 21 ನೇ ಶತಮಾನದ ಉಳಿದ ಭಾಗದಲ್ಲಿ ನಿಮಗೆ ಬದಲಾವಣೆ, ಪ್ರಗತಿ ಬೇಕು ಎನ್ನುವುದಾದರೆ, ನಾನು ಆ ಬದಲಾವಣೆಗಾಗಿ ನಿಲ್ಲುತ್ತೇನೆ ಎಂದು ಸಂಸದರೂ ಆಗಿರುವ ಶಶಿ ತರೂರ್ ಹೇಳಿದ್ದಾರೆ.