ಮಧ್ಯಪ್ರದೇಶ: ಹಳ್ಳಿಗೆ ನುಗ್ಗಿ ಹಸುಗಳನ್ನು ಬೇಟೆಯಾಡಿ 11 ಗಂಟೆ ನಂತರ ಉದ್ಯಾನವನಕ್ಕೆ ವಾಪಸ್ಸಾದ ನಮೀಬಿಯಾ ಚೀತಾ!

ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತಂದ ಚೀತಾ ಒಂದು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ವಿಜಯಪುರದ ಝಾರ್ ಬರೋಡಾ ಗ್ರಾಮಕ್ಕೆ ಪ್ರವೇಶಿಸಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.
ಚೀತಾ
ಚೀತಾ

ಭೋಪಾಲ್: ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತಂದ ಚೀತಾ ಒಂದು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ವಿಜಯಪುರದ ಝಾರ್ ಬರೋಡಾ ಗ್ರಾಮಕ್ಕೆ ಪ್ರವೇಶಿಸಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. 

ಕುನೊ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 20 ಕಿಮೀ ದೂರದಲ್ಲಿರುವ ಗ್ರಾಮಕ್ಕೆ ಪ್ರವೇಶಿಸಿತ್ತು. ಕಳೆದ ತಿಂಗಳು ಕೆಎನ್‌ಪಿಯ ಕಾಡಿನಲ್ಲಿ ಬಿಡಲಾದ ನಾಲ್ಕು ನಮೀಬಿಯಾದ ಚೀತಾಗಳಲ್ಲಿ ಒಂದಾದ ಒಬಾನ್, ಉದ್ಯಾನವನದ ಆಗ್ರಾ ವ್ಯಾಪ್ತಿಯಲ್ಲಿರುವ ಎರಡು ಪಕ್ಕದ ಹಳ್ಳಿಗಳಾದ ಗೋಲಿಪುರ ಮತ್ತು ಝಾರ್ ಬರೋಡಾದಲ್ಲಿ ಬೆಳಿಗ್ಗೆ ದಾರಿತಪ್ಪಿ ಸಂಜೆ 5ರ ಹೊತ್ತಿಗೆ ಕಾಡಿಗೆ ಮರಳಿದೆ. ಇನ್ನು ಗ್ರಾಮಗಳಿಗೆ ನುಗ್ಗಿದ್ದ ಚೀತಾ ಎರಡು ಹಸುಗಳನ್ನು ಬೇಟೆಯಾಡಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. 

ಕುನೊ ರಾಷ್ಟ್ರೀಯ ಉದ್ಯಾನವನದಿಂದ ಬಂದ ಮಾಹಿತಿಯ ಪ್ರಕಾರ, ಗ್ರಾಮಗಳ ಬಳಿ ಚೀತಾಗಳು ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಘಟನೆಯ ಮಾಹಿತಿ ಪಡೆದ ಅರಣ್ಯ ಇಲಾಖೆ ತಂಡ ಚೀತಾ ಪತ್ತೆಗಾಗಿ ಸ್ಥಳಕ್ಕೆ ಧಾವಿಸಿತ್ತು.

ಕುನೋ ರಾಷ್ಟ್ರೀಯ ಉದ್ಯಾನವನದಿಂದ ಚೀತಾ ಪರಾರಿಯಾಗಿರುವ ಸುದ್ದಿಯಿಂದಾಗಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲೆಯ ವಿಜಯಪುರ ತಹಸಿಲ್‌ನ ಗೋಲು ಪುರ ಮತ್ತು ಜಾರ್ ಬರೋಡಾ ಗ್ರಾಮಗಳ ಬಳಿಯ ಹೊಲಗಳಲ್ಲಿ ಓಬನ್‌ನನ್ನು ಕಂಡಿದ್ದಾಗಿ ಕೆಲವರು ವರದಿ ಮಾಡಿದ್ದರು. ಏತನ್ಮಧ್ಯೆ, ಓಬನ್ ಕುನೋ ಅಭಯಾರಣ್ಯದಿಂದ ಹೊರಬಂದು ಈಗ ಸುತ್ತಮುತ್ತಲಿನ ಗ್ರಾಮಗಳಿಗೆ ಲಗ್ಗೆಯಿಡುತ್ತಿರುವ ವಿಚಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆಘಾತ ಉಂಟುಮಾಡಿತ್ತು. ಇದೀಗ ಚೀತಾ ಉದ್ಯಾನವನಕ್ಕೆ ವಾಪಸ್ಸಾಗಿರುವುದು ಅಧಿಕಾರಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.

70 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತದ ನೆಲದಲ್ಲಿ ಮತ್ತೆ ಚೀತಾಗಳ ಓಡಾಟ ಶುರುವಾಗಿದೆ. ಎರಡು ಬ್ಯಾಚ್‌ಗಳಲ್ಲಿ ಒಟ್ಟು 20 ಚಿರತೆಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ. ಮೊದಲ ಬ್ಯಾಚ್‌ನಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಂದ ನಮೀಬಿಯಾದಿಂದ ಎಂಟು ಚಿರತೆಗಳು ಮತ್ತು ಫೆಬ್ರವರಿ 2023 ರಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚಿರತೆಗಳು ಸೇರಿವೆ. 1952 ರಲ್ಲಿ ದೇಶದಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದವನ್ನು ಘೋಷಿಸುವವರೆಗೂ ಭಾರತವು ಏಷ್ಯಾಟಿಕ್ ಚಿರತೆಗೆ ನೆಲೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com