ಎರಡು ಚೀತಾಗಳು ಕುನೊ ರಾಷ್ಟ್ರೀಯ ಉದ್ಯಾನವನದ ಕಾಡಿಗೆ ಬಿಡುಗಡೆ

ನಮೀಬಿಯಾದಿಂದ ಭಾರತಕ್ಕೆ ತರಲಾಗಿರುವ 8 ಚೀತಾಗಳ ಪೈಕಿ ಎರಡು ಚೀತಾಗಳನ್ನು ಆರು ತಿಂಗಳ ನಂತರ ಶನಿವಾರ ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನ(ಕೆಎನ್‌ಪಿ)ದ ಕಾಡಿಗೆ ಬಿಡಲಾಯಿತು ಎಂದು ಅಧಿಕಾರಿಯೊಬ್ಬರು...
ಚೀತಾ
ಚೀತಾ

ಭೋಪಾಲ್: ನಮೀಬಿಯಾದಿಂದ ಭಾರತಕ್ಕೆ ತರಲಾಗಿರುವ 8 ಚೀತಾಗಳ ಪೈಕಿ ಎರಡು ಚೀತಾಗಳನ್ನು ಆರು ತಿಂಗಳ ನಂತರ ಶನಿವಾರ ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನ(ಕೆಎನ್‌ಪಿ)ದ ಕಾಡಿಗೆ ಬಿಡಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಚೀತಾಗಳನ್ನು ಇಲ್ಲಿಯವರೆಗೆ ಇಲ್ಲಿನ ಹವಾಮಾನ ಹಾಗೂ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುವವರೆಗೂ ಅವುಗಳ ಮೇಲೆ ನಿಗಾ ವಹಿಸುವುದಕ್ಕಾಗಿ ಕಾಡಿನಲ್ಲೇ ನಿರ್ದಿಷ್ಟ ಪ್ರದೇಶದಲ್ಲಿರಿಸಲಾಗಿತ್ತು. 

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೆಎನ್‌ಪಿಗೆ ತರಲಾದ ಎಂಟು ಚಿರತೆಗಳ ಪೈಕಿ ಒಬಾನ್ ಮತ್ತು ಆಶಾ ಎಂಬ ಎರಡು ಚೀತಾಗಳನ್ನು ಇಂದು ಕಾಡಿಗೆ ಬಿಡಲಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ ಎಸ್ ಚೌಹಾಣ್ ಪಿಟಿಐಗೆ ತಿಳಿಸಿದ್ದಾರೆ.

ಒಬಾನ್ ಚೀತಾವನ್ನು ಮೊದಲು ಅರಣ್ಯಕ್ಕೆ ಬಿಡಲಾಗಿಯಿತು. ನಂತರ ಮಧ್ಯಾಹ್ನ ಕೆಲವು ಗಂಟೆಗಳ ನಂತರ ಆಶಾ ಚೀತಾ ಬಿಡುಗಡೆ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.

ಉಳಿದ ಚೀತಾಗಳನ್ನು ಒಂದೊಂದಾಗಿ ಕಾಡಿಗೆ ಬಿಡುಗಡೆ ಮಾಡಲಾಗುವುದು ಎಂದು ಚೌಹಾಣ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com