ತಮಿಳುನಾಡು: ಧಾರ್ಮಿಕ ವಿಧಿವಿಧಾನಗಳಲ್ಲಿ ತೊಡಗಿದ್ದ ಐವರು ಅರ್ಚಕರು ನೀರಿನಲ್ಲಿ ಮುಳುಗಿ ಸಾವು

ಧಾರ್ಮಿಕ ವಿಧಾನಗಳಲ್ಲಿ ತೊಡಗಿದ್ದ 5 ಅರ್ಚಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮೂವರಸನ್ ಪೇಟೆಯಲ್ಲಿ ನಡೆದಿದೆ. 
ಧಾರ್ಮಿಕ ವಿಧಿವಿಧಾನಗಳಲ್ಲಿ ತೊಡಗಿದ್ದ ಅರ್ಚಕರು
ಧಾರ್ಮಿಕ ವಿಧಿವಿಧಾನಗಳಲ್ಲಿ ತೊಡಗಿದ್ದ ಅರ್ಚಕರು

ಮೂವರಸನ್: ಧಾರ್ಮಿಕ ವಿಧಾನಗಳಲ್ಲಿ ತೊಡಗಿದ್ದ 5 ಅರ್ಚಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮೂವರಸನ್ ಪೇಟೆಯಲ್ಲಿ ನಡೆದಿದೆ. 

25 ಮಂದಿ ಅರ್ಚಕರ ಪೈಕಿ 5 ಮಂದಿ ಸಾವನ್ನಪ್ಪಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ 5 ಮೃತರನ್ನು ಸೂರ್ಯ (24) ರಾಘವನ್ (22) ಯೋಗೇಶ್ವರನ್ (23) ವನೀಶ್ (20) ರಾಘವನ್ (18) ಎಂದು ಗುರುತಿಸಲಾಗಿದೆ. ಈ ಅರ್ಚಕರ ತಂಡ ಮೂವರಸನ್ ಪೇಟ್ ನಲ್ಲಿನ ಧರ್ಮಲಿಂಗೇಶ್ವರ ದೇವಾಲಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಈ 25 ಮಂದಿ ಅರ್ಚಕರು ಕಲ್ಯಾಣಿ/ ನೀರಿರುವ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಏಕಾಏಕಿ 5 ಮಂದಿ ನೀರಿನಲ್ಲಿ ಮುಳುಗಿದ್ದರು. ಮಾಹಿತಿ ಪಡೆದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com