ಉತ್ತರ ಪ್ರದೇಶ: ಕಿಡ್ನಿ ಸ್ಟೋನ್ ಶಸ್ತ್ರಚಿಕಿತ್ಸೆ ವೇಳೆ ರೋಗಿ ಮೂತ್ರಪಿಂಡ ಹೊರತೆಗೆದ ವೈದ್ಯರು; ರೋಗಿ ಸಾವು!

ಕಿಡ್ನಿ ಸ್ಟೋನ್ ಶಸ್ತ್ರ ಚಿಕಿತ್ಸೆ ವೇಳೆ 30 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶಾಲಿಮಾರ್ ಗಾರ್ಡನ್ ಪ್ರದೇಶದಲ್ಲಿರುವ ಸ್ಪರ್ಶ್ ಆಸ್ಪತ್ರೆಗೆ ಅಧಿಕಾರಿಗಳು ಸೀಲ್ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಘಾಜಿಯಾಬಾದ್: ಕಿಡ್ನಿ ಸ್ಟೋನ್ ಶಸ್ತ್ರ ಚಿಕಿತ್ಸೆ ವೇಳೆ 30 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶಾಲಿಮಾರ್ ಗಾರ್ಡನ್ ಪ್ರದೇಶದಲ್ಲಿರುವ ಸ್ಪರ್ಶ್ ಆಸ್ಪತ್ರೆಗೆ ಅಧಿಕಾರಿಗಳು ಸೀಲ್ ಮಾಡಿದ್ದಾರೆ.

ಆಸ್ಪತ್ರೆ ನಡೆಸುತ್ತಿರುವ ದಾಖಲೆಗಳು ಹಾಗೂ ವೈದ್ಯರ ವೈದ್ಯಕೀಯ ಪದವಿಗಳ ಸಿಂಧುತ್ವವನ್ನು ಪರಿಶೀಲಿಸಲು ನಾಲ್ಕು ವೈದ್ಯರ ಸಮಿತಿಯನ್ನು ರಚಿಸಲಾಗಿದೆ.

ಹದಿನೈದು ದಿನಗಳ ಹಿಂದೆ, ವೈದ್ಯರು ವ್ಯಕ್ತಿಯೊಬ್ಬನಿಗೆ ಕಿಡ್ನಿ ಸ್ಟೋನ್ ಶಸ್ತ್ರಚಿಕಿತ್ಸೆ ನಡೆಸಿ ಡಿಸ್ಚಾರ್ಜ್ ಮಾಡಿದ್ದರು. ಆದರೆ ರೋಗಿಯ ಕಾಲುಗಳಲ್ಲಿ ಊತ ಕಾಣಿಸಿಕೊಂಡಿದ್ದರಿಂದ, ಸೋಮವಾರ ಮಧ್ಯಾಹ್ನ ಅವರನ್ನು ಮತ್ತೆ ಅದೇ ಆಸ್ಪತ್ರೆಗೆ ದಾಖಲಿಸಲಾಯಿತು.

ಈ ವೇಳೆ ವೈದ್ಯರು ಶಸ್ತ್ರಚಿಕಿತ್ಸೆಯ ಭಾಗವಾಗಿ ಅವರ ಮೂತ್ರಪಿಂಡವನ್ನು ತೆಗೆದುಹಾಕಿದ್ದು ಈ ಹಿನ್ನೆಲೆಯಲ್ಲಿ ರೋಗಿಯು ಸಾವನ್ನಪ್ಪಿದರು. ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ್ದರೆ ಸಮಿತಿಯು ತನಿಖೆ ನಡೆಸಲಿದ್ದು, ಅದರಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಭವತೋಷ್ ಶಂಕಧರ್ ತಿಳಿಸಿದ್ದಾರೆ.

ಇನ್ನು ಸೋಮವಾರ ಸಂಜೆ 4 ಗಂಟೆಗೆ ತನ್ನ ಮಗ ಸಾವನ್ನಪ್ಪಿದ್ದಾನೆ ಎಂದು ರೋಗಿಯ ತಂದೆ ಪೊಲೀಸ್ ದೂರಿನಲ್ಲಿ ದಾಖಲಿಸಿದ್ದು ಆದರೆ ಮಗನ ಸಾವಿನ ಕುರಿತಂತೆ ವೈದ್ಯರು ಕುಟುಂಬದಿಂದ ಸತ್ಯವನ್ನು ಮರೆಮಾಚಿದ್ದಾರೆ. ಹೆಚ್ಚಿನ ತನಿಖೆಗಾಗಿ ದೂರನ್ನು ಸಿಎಂಒಗೆ ರವಾನಿಸಲಾಗಿದೆ ಎಂದು ಎಸಿಪಿ ಸಾಹಿಬದಾದ್ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com