ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಿಜೆಪಿ ಹನುಮಂತನಿಂದ ಸ್ಫೂರ್ತಿ ಪಡೆದಿದೆ: ಪ್ರಧಾನಿ ಮೋದಿ

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಿಜೆಪಿ ಹನುಮನಿಂದ ಸ್ಫೂರ್ತಿ ಪಡೆದುಕೊಂಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಿಜೆಪಿ ಹನುಮನಿಂದ ಸ್ಫೂರ್ತಿ ಪಡೆದುಕೊಂಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದ (ಬಿಜೆಪಿ) 44 ನೇ ಸಂಸ್ಥಾಪನಾ ದಿನ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮೋದಿಯವರು ಸಂವಾದ ನಡೆಸಿದರು. ಈ ವೇಳೆ ಪಕ್ಷದ ಕಾರ್ಯಕರ್ತರು ಹಾಗೂ ದೇಶದ ಜನತೆಗೆ ಹನುಮ ಜಯಂತಿಯ ಶುಭಾಶಯಗಳನ್ನು ಕೋರಿದರು.

ಇಂದು ಭಾರತವು ಹನುಮಂತನ ಶಕ್ತಿಯಂತೆ ತನ್ನ ಸಾಮರ್ಥ್ಯವನ್ನು ಅರಿತುಕೊಳ್ಳುತ್ತಿದೆ. ಭ್ರಷ್ಟಾಚಾರ, ಕಾನೂನು ಮತ್ತು ಸುವ್ಯವಸ್ಥೆಯ ವಿರುದ್ಧ ಹೋರಾಡಲು ಬಿಜೆಪಿ ಹನುಮಂತನಿಂದ ಸ್ಫೂರ್ತಿ ಪಡೆದುಕೊಂಡಿದೆ. ನಾವು ಹನುಮಂತನ ಇಡೀ ಜೀವನವನ್ನು ನೋಡಿದರೆ, ಏನನ್ನು ಬೇಕಾದರೂ ಮಾಡಬಹುದು ಎಂಬ ಮನೋಭಾವ ಅವರಲ್ಲಿದ್ದದ್ದನ್ನು ಕಂಡು ಕೊಳ್ಳಬಹುದು. ಈ ಮನೋಭಾವವೇ ಹನುಮನಿಗೆ ಎಲ್ಲಾ ರೀತಿಯ ಯಶಸ್ಸನ್ನು ತರುವಲ್ಲಿ ಸಹಾಯ ಮಾಡಿತ್ತು ಎಂದು ಹೇಳಿದರು.

"ಹನುಮಂತ ಏನನ್ನೂ ಬೇಕಾದರೂ ಮಾಡುತ್ತಾನೆಂಬುದು ಎಲ್ಲರಿಗೂ ತಿಳಿದಿದೆ. ಎಲ್ಲರಿಗೂ ಏನನ್ನಾದರೂ ಮಾಡುತ್ತಾರೆ. ಆದರೆ, ತಮಗಾಗಿ ಏನನ್ನೂ ಮಾಡುವುದಿಲ್ಲ. ಇದರಿಂದ ಬಿಜೆಪಿ ಸ್ಫೂರ್ತಿ ಪಡೆದುಕೊಂಡಿದೆ ಎಂದು ತಿಳಿಸಿದರು.

ಬಳಿಕ ಬಿಜೆಪಿಯ 44ನೇ ಸಂಸ್ಥಾಪನಾ ದಿನ ಕುರಿತು ಪಕ್ಷದ ಕಾರ್ಯಕರ್ತರಿಗೆ ಶುಭಾಶಯಗಳನ್ನು ಕೋರಿದ ಮೋದಿಯವರು, "ಇಂದು ನಾವೆಲ್ಲರೂ ನಮ್ಮ ಪಕ್ಷದ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದೇವೆ. ಭಾರತಮಾತೆಯ ಸೇವೆಗೆ ಸಮರ್ಪಿತವಾಗಿರುವ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರನನ್ನು ನಾನು ಅಭಿನಂದಿಸುತ್ತೇನೆಂದು ಹೇಳಿದರು.

“ಬಿಜೆಪಿ ಆರಂಭದಿಂದ ಇಂದಿನವರೆಗೆ ಪಕ್ಷವನ್ನು ಕಟ್ಟಿದ, ಪೋಷಣೆ ಮಾಡಿದ ಹಾಗೂ ಬಲವರ್ಧನೆಗೆ ಸಹಾಯ ಮಾಡಿದ ಮಹಾನ್ ವ್ಯಕ್ತಿಗಳು, ಚಿಕ್ಕ ಕಾರ್ಯಕರ್ತನಿಂದ ಹಿಡಿದು ಹಿರಿಯ ಸ್ಥಾನದವರೆಗೆ ದೇಶ ಮತ್ತು ಪಕ್ಷಕ್ಕಾಗಿ ಸೇವೆ ಸಲ್ಲಿಸಿದ ಎಲ್ಲ ಮಹಾನ್ ವ್ಯಕ್ತಿಗಳಿಗಾಗಿ ನಾನು ತಲೆ ಬಾಗುತ್ತೇನೆ. "ನಮ್ಮ ಪಕ್ಷ, ನಮ್ಮ ಕಾರ್ಯಕರ್ತರು ಹನುಮಂತನ ಅವರ ಮೌಲ್ಯಗಳು ಮತ್ತು ಬೋಧನೆಗಳಿಂದ ನಿರಂತರವಾಗಿ ಸ್ಫೂರ್ತಿ ಪಡೆಯುತ್ತಿದ್ದಾರೆ. ಹನುಮ ಜಯಂತಿಯ ಈ ಶುಭ ದಿನದಂದು, ಎಲ್ಲರಿಗೂ ಅವರ ಹನುಮಂತನ ಆಶೀರ್ವಾದ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ. ಇಂದು ಭಾರತವು ಭಜರಂಗ ಬಲಿಯಂತಹ ಮಹಾನ್ ಶಕ್ತಿಗಳನ್ನು ಅರಿತುಕೊಳ್ಳುತ್ತಿದೆ, ಭಾರತವು ಸಾಗರದಂತಹ ದೊಡ್ಡ ಸವಾಲುಗಳೇ ಎದುರಾದರೂ ಅದನ್ನು ಎದುರಿಸಲು ಹೆಚ್ಚು ಬಲಿಷ್ಠವಾಗಿದೆ ಎಂದು ತಿಳಿಸಿದರು.

ಏಪ್ರಿಲ್ 6 ರಂದು ಬಿಜೆಪಿಯ 44 ನೇ ಸಂಸ್ಥಾಪನಾ ದಿನವಾಗಿದ್ದು, ಪಕ್ಷವು ಬೂತ್ ಮಟ್ಟದಿಂದಲೇ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದಲ್ಲದೆ, ಕೇಂದ್ರದ ಆಡಳಿತ ಪಕ್ಷವು ಗುರುವಾರ ದೇಶದಾದ್ಯಂತ 10 ಲಕ್ಷ ಸ್ಥಳಗಳಲ್ಲಿ ಪ್ರಧಾನಿ ಮೋದಿ ಅವರ ಭಾಷಣವನ್ನು ಪ್ರದರ್ಶಿಸುತ್ತಿದೆ.

ಬಿಜೆಪಿ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಕ್ಷದ ಕಚೇರಿಗಳಲ್ಲಿ ಪ್ರಧಾನಿ ಮೋದಿಯವರ ಭಾಷಣವನ್ನು ಆಲಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com