ಆಕ್ಸ್‌ಫಾಮ್ ಇಂಡಿಯಾ ವಿರುದ್ಧ ಸಿಬಿಐ ತನಿಖೆಗೆ ಗೃಹ ಸಚಿವಾಲಯ ಶಿಫಾರಸು

ವಿದೇಶಿ ದೇಣಿಗೆ(ನಿಯಂತ್ರಣ) ಕಾಯಿದೆ, 2010 ಅನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಎನ್ ಜಿಒ ಆಕ್ಸ್‌ಫಾಮ್ ಇಂಡಿಯಾದ ವ್ಯವಹಾರಗಳ ಕುರಿತು ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಗುರುವಾರ ಶಿಫಾರಸು ಮಾಡಿದೆ...
ಕೇಂದ್ರ ತನಿಖಾ ಸಂಸ್ಥೆ ಸಿಬಿಐ
ಕೇಂದ್ರ ತನಿಖಾ ಸಂಸ್ಥೆ ಸಿಬಿಐ

ನವದೆಹಲಿ: ವಿದೇಶಿ ದೇಣಿಗೆ(ನಿಯಂತ್ರಣ) ಕಾಯಿದೆ, 2010 ಅನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಎನ್ ಜಿಒ ಆಕ್ಸ್‌ಫಾಮ್ ಇಂಡಿಯಾದ ವ್ಯವಹಾರಗಳ ಕುರಿತು ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಗುರುವಾರ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಎಫ್‌ಸಿಆರ್‌ಎ ಅಡಿಯಲ್ಲಿ ನೋಂದಾಯಿಸಿದ ನಂತರವೂ ಆಕ್ಸ್‌ಫಾಮ್ ಇಂಡಿಯಾ ವಿದೇಶಿ ದೇಣಿಗೆಯನ್ನು ವಿವಿಧ ಘಟಕಗಳಿಗೆ ವರ್ಗಾಯಿಸುವುದನ್ನು ಮುಂದುವರೆಸಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಆದಾಯ ತೆರಿಗೆ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ, ಆಕ್ಸ್‌ಫಾಮ್ ಇಂಡಿಯಾ ಇತರ ಎಫ್‌ಸಿಆರ್‌ಎ-ನೋಂದಾಯಿತ ಸಂಘಗಳಿಗೆ ಅಥವಾ ಲಾಭದಾಯಕ ಮಾರ್ಗದ ಮೂಲಕ ಹಣವನ್ನು ರೂಟ್ ಮಾಡಿ, ಎಫ್‌ಸಿಆರ್‌ಎಯ ನಿಬಂಧನೆಗಳನ್ನು ತಪ್ಪಿಸಲು ಯೋಜಿಸುತ್ತಿರುವುದು ಅದರ ಹಲವು ಇಮೇಲ್‌ಗಳಲ್ಲಿ ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ.

ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲು ನೋಂದಾಯಿಸಿಕೊಂಡಿರುವ ಆಕ್ಸ್‌ಫಾಮ್ ಇಂಡಿಯಾ, ತನ್ನ ಸಹವರ್ತಿಗಳು ಮತ್ತು ಉದ್ಯೋಗಿಗಳ ಮೂಲಕ ನೀತಿ ಸಂಶೋಧನಾ ಕೇಂದ್ರಕ್ಕೆ(CPR) ಕಮಿಷನ್ ರೂಪದಲ್ಲಿ ಹಣವನ್ನು ರವಾನಿಸಿದೆ ಎಂದು ಮೂಲಗಳು ಹೇಳಿವೆ.

ಆಕ್ಸ್‌ಫಾಮ್ ಇಂಡಿಯಾ ಒಂದು ಎನ್‌ಜಿಒ ಸಂಸ್ಥೆಯಾಗಿದ್ದು, ಇದು ಮಕ್ಕಳ ಶಿಕ್ಷಣ, ಮಹಿಳಾ ಸಬಲೀಕರಣ, ಅಸಮಾನತೆಯ ಬಗ್ಗೆ ಧ್ವನಿ ಎತ್ತುವ ಕಾರ್ಯವನ್ನು ತನ್ನ ವರದಿಯ ಮೂಲಕ ಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com