ರಾಹುಲ್ ಗಾಂಧಿ 'ಆಧುನಿಕ ಭಾರತದ ಮಹಾತ್ಮಾ ಗಾಂಧಿ ಎಂದ ಕಾಂಗ್ರೆಸ್ ಶಾಸಕ!

ಕಾಂಗ್ರೆಸ್ ನಾಯಕ ಆಧುನಿಕ ಭಾರತದ ಮಹಾತ್ಮ ಗಾಂಧಿ ಎಂದು ಛತ್ತೀಸ್ ಗಢದ  ಕಾಂಗ್ರೆಸ್ ಶಾಸಕ ಅಮಿತೇಶ್ ಶುಕ್ಲಾ ಕರೆದಿದ್ದಾರೆ. ಅಲ್ಲದೇ, ಮಹಾತ್ಮ ಗಾಂಧಿ ಮತ್ತು ರಾಹುಲ್ ಗಾಂಧಿ ನಡುವೆ ಹಲವಾರು ಸಾಮ್ಯತೆಗಳಿರುವುದಾಗಿ ಅವರು ಹೇಳಿದ್ದಾರೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ರಾಯ್‌ಪುರ: ಕಾಂಗ್ರೆಸ್ ನಾಯಕ ಆಧುನಿಕ ಭಾರತದ ಮಹಾತ್ಮ ಗಾಂಧಿ ಎಂದು ಛತ್ತೀಸ್ ಗಢದ  ಕಾಂಗ್ರೆಸ್ ಶಾಸಕ ಅಮಿತೇಶ್ ಶುಕ್ಲಾ ಕರೆದಿದ್ದಾರೆ. ಅಲ್ಲದೇ, ಮಹಾತ್ಮ ಗಾಂಧಿ ಮತ್ತು ರಾಹುಲ್ ಗಾಂಧಿ ನಡುವೆ ಹಲವಾರು ಸಾಮ್ಯತೆಗಳಿರುವುದಾಗಿ ಅವರು ಹೇಳಿದ್ದಾರೆ. 

ಎಎನ್‌ಐ ಜೊತೆ ಮಾತನಾಡಿದ ಶುಕ್ಲಾ, ಮಹಾತ್ಮಾ ಗಾಂಧಿ ಮತ್ತು ರಾಹುಲ್ ಗಾಂಧಿ ನಡುವೆ ಅನೇಕ ಹೋಲಿಕೆಗಳಿವೆ. ಮಹಾತ್ಮ ಗಾಂಧಿ ಅವರು ದಂಡಿ ಯಾತ್ರೆ ಮಾಡಿದ್ದರೆ, ಭಾರತ್ ಜೋಡೋ ಯಾತ್ರೆ ಮಾಡಿರುವ ರಾಹುಲ್ ಗಾಂಧಿ  ರಾಷ್ಟ್ರೀಯ ಪುತ್ರ' (ರಾಷ್ಟ್ರದ ಮಗ) ಎಂದು ಕರೆದರು. 

ಮಹಾತ್ಮ ಗಾಂಧಿ ಭಾರತದ ಮೊದಲ ಪ್ರಧಾನಿಯಾಗಬಹುದಿತ್ತು. ಆದರೆ ಅವರು ಆಗಲಿಲ್ಲ. ಅದೇ ರೀತಿ 2004 ಮತ್ತು 2008ರಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಬಹುದಿತ್ತು. ಆದರೆ ಆಗಲಿಲ್ಲ. 'ದಂಡಿ ಯಾತ್ರೆ ಸಮಯದಲ್ಲಿ ಮಹಾತ್ಮ ಗಾಂಧಿಯವರು ಹಲವಾರು ಕಿಲೋಮೀಟರ್‌ಗಳಷ್ಟು ದೂರ  ನಡೆದಿದ್ದರಂತೆ , ಅದೇ ರೀತಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ದೇಶಾದ್ಯಂತ ನಡೆದು, ಜನರೊಂದಿಗೆ ಸಂವಾದ ನಡೆಸಿದ್ದಾರೆ ಎಂದರು.

ಮಹಾತ್ಮ ಗಾಂಧೀಜಿ ಸತ್ಯದ ಅಸ್ತ್ರದಿಂದ 'ಬ್ರಿಟಿಷ್ ಸಾಮ್ರಾಜ್ಯ'ವನ್ನು ಅಂತ್ಯಗೊಳಿಸಿದ್ದಂತೆ ರಾಹುಲ್ ಗಾಂಧಿ ಕೂಡ ನಿರ್ಭಯವಾಗಿ ಸತ್ಯವನ್ನು ಮಾತನಾಡುತ್ತಾರೆ. ಅದಾನಿ ವಿಚಾರವಾಗಿ ಅಂಕಿ ಅಂಶಗಳೊಂದಿಗೆ ಸತ್ಯವನ್ನು ರಾಹುಲ್ ಮಾತನಾಡಿದ್ದಾರೆ ಎಂದು ಶುಕ್ಲಾ ಹೇಳಿದರು.

ಶುಕ್ಲಾ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಸಂತೋಷ್ ಪಾಂಡೆ, ಛತ್ತೀಸ್‌ಗಢ ಕಾಂಗ್ರೆಸ್ ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ದಿವಾಳಿಯಾಗಿದೆ ಎಂದು ಟೀಕಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com